ಬೆಳಗಾವಿ 15- ಹಾಸ್ಯ ನಮ್ಮ ಬದುಕಿನ ಒ,ಂದು ಅವಿಭಾಜ್ಯ ಅಂಗವಾಗಿದೆ. ಹಾಸ್ಯಕೂಟ ಒಂದು ದಶಕ ಕಾಲ ನಿರಂತರವಾಗಿ ನಡೆದುಕೊಂಡು ಬಂದಿದೆ. ಸಂಘಟನೆಯನ್ನು ಕಟ್ಟುವುದು ಸುಲಭ ಮುಂದೆವರೆಸಿಕೊಂಡು ಹೋಗುವುದು ತುಂಬ ಕಷ್ಟದ ಕೆಲಸ. ಆ ಕಷ್ಟದ ಕಾರ್ಯವನ್ನು ಹಾಸ್ಯಕೂಟ ಬಳಗ ಸಾಧ್ಯ ಮಾಡಿ ತೋರಿಸಿದೆ. ದಶಮಾನೋತ್ಸವ ಕಂಡ ಹಾಸ್ಯಕೂಟವನ್ನು ಅಭಿನಂದಿಸುತ್ತೇನೆ" ಎಂದು ಹಿರಿಯ ಪತ್ರಕರ್ತ ಸಾಹಿತಿ ಎಲ್. ಎಸ್. ಶಾಸ್ತ್ರಿ ಅವರಿಂದಿಲ್ಲಿ ಹೇಳಿದರು.
ಕನ್ನಡ ಸಾಹಿತ್ಯ ಭವನದಲ್ಲಿ ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಮತ್ತು ಬೆಳಗಾವಿ ಹಾಸ್ಯಕೂಟದ ಈ ತಿಂಗಳ ಶನಿವಾರದ ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಿದ್ದ ಅವರು ಮನಸ್ಸನ್ನು ಸದಾ ಚೈತನ್ಯದಿಂದಿಡಲು ಹಾಸ್ಯ ನೆರವಾಗುತ್ತದೆಂದರು.
ಹಾಸ್ಯಪಟುಗಳಾದ ಜಿ. ಎಸ್. ಸೋನಾರ ಮತ್ತು ಪ್ರೊ. ಜಿ. ಕೆ. ಕುಲಕರ್ಣಿ ಅವರು ಹೊಸ ವರ್ಷದ ಹಿನ್ನೆಲೆಯಲ್ಲಿ ಹಾಸ್ಯ ಪ್ರಸಂಗಗಳನ್ನು ಹೇಳಿ ರಂಜಿಸಿದರು.
ನಾಗಪ್ಪ ಸಿಂಪಿ ಅವರು ಕಾರ್ಯಕ್ರಮದ ಪ್ರಾಯೋಜಕರಾಗಿದ್ದರು. ತಾನಾಜಿ ಕೋಳಿ ನಿರೂಪಿಸಿದರು.