ಕಾಮೆಡ್ ಕೆ ಪರೀಕ್ಷಾ ಶುಲ್ಕ ಶೇ. 10ರಷ್ಟು ಹೆಚ್ಚಳ

comedk

ಬೆಂಗಳೂರು, ಜ 14: ಪ್ರಸಕ್ತ ಸಾಲಿನಲ್ಲಿ ಕಾಮೆಡ್ ಕೆ ಪ್ರವೇಶ ಪರೀಕ್ಷೆಯ ಶುಲ್ಕ ಶೇ. 10ರಷ್ಟು ಹೆಚ್ಚಳವಾಗಲಿದೆ. 

ಕಾಮೆಡ್ ಕೆ ಸಿಇಒ ಡಾ. ಎಸ್. ಕುಮಾರ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಕಳೆದ ವರ್ಷ ಸರ್ಕಾರದೊಂದಿಗೆ ನಡೆದ ಒಪ್ಪಂದದಲ್ಲಿಯೇ ಶುಲ್ಕ ಹೆಚ್ಚಳ ನಿರ್ಧಾರವಾಗಿತ್ತು ಎಂದರು. 

ಸರ್ಕಾರದೊಂದಿಗೆ ಒಪ್ಪಂದದಂತೆಯೇ ಶುಲ್ಕ ನಿಗದಿಪಡಿಸಲಾಗಿದೆ. ಕನಿಷ್ಠ ಈ ಬಾರಿಯಾದರೂ ಯಾವುದೇ ಗೊಂದಲಗಳಿಲ್ಲದೆ ಪರೀಕ್ಷೆಗಳು ನಡೆಯಲಿವೆ ಎಂಬ ವಿಶ್ವಾಸವಿದೆ ಎಂದರು. 

ಕಾಮೆಡ್ ಕೆ ಶುಲ್ಕದ ವಿವರ: 

ನಿಯಮದಂತೆ ಒಟ್ಟು ಇಂಜಿನಿಯರಿಂಗ್ ಸೀಟುಗಳ ಪೈಕಿ ಶೇ. 45ರಷ್ಟು ಸೀಟನ್ನು ಸಿಇಟಿ, ಶೇ.  30ರಷ್ಟು ಕಾಮೆಡ್ ಕೆ ಮತ್ತು ಶೇ. 25ರಷ್ಟು ಎನ್ ಆರ್ ಐ ಗೆ ಮೀಸಲಿರಿಸಲಾಗಿದೆ. 

ಸಿಇಟಿಯ ಇಂಜಿನಿಯರಿಂಗ್ ಸೀಟುಗಳಿಗೆ 65,340 ರೂ. ಮತ್ತು  ವಾಸ್ತುಶಿಲ್ಪಕ್ಕೆ 58,806 ರೂ. , ಕಾಮೆಡ್ ಕೆಯಲ್ಲಿ ಇಂಜಿನಿಯರಿಂಗ್ ಸೀಟುಗಳಿಗೆ 1,43,748 ರೂ. ಮತ್ತು  ವಾಸ್ತುಶಿಲ್ಪಕ್ಕೆ 2,01,960 ರೂ.ನಿಗದಿಪಡಿಸಲಾಗಿದೆ. 

ಕಾಲೇಜುಗಳಿಂದ ಶುಲ್ಕ ಕಡಿತ

ಕಾಮೆಡ್ ಕೆ ಶುಲ್ಕ ನಿಗದಿಪಡಿಸದಿರೂ ಖಾಲಿ ಉಳಿದ ಸೀಟುಗಳಿಗೆ ಕಾಲೇಜುಗಳು ಶುಲ್ಕ ಕಡಿತಗೊಳಿಸುತ್ತವೆ. ಇದರಿಂದ ಅನೇಕ ವಿದ್ಯಾರ್ಥಿಗಳಿಗೆ ಸಿಇಟಿ ಶುಲ್ಕದ ಮಾದರಿಯಲ್ಲೇ ಕಾಲೇಜುಗಳಲ್ಲಿ ಸೀಟುಗಳು ದೊರೆಯಲಿವೆ ಎಂದರು.