ಪೂರ್ಣ ಮಾಹಿತಿಯೊಂದಿಗೆ ಸಭೆಗೆ ಬನ್ನಿ

ಬಾಗಲಕೋಟೆ: ಇಲಾಖೆಯ ಅಧಿಕಾರಿಗಳು ಸಭೆಗಳಿಗೆ ಬರುವಾಗ ಪೂರ್ವ ತಯಾರಿ ಮಾಡಿಕೊಂಡು ಸಂಪೂರ್ಣ ಮಾಹಿತಿಯೊಂದಿಗೆ ಸಭೆಗೆ ಹಾಜರಾಗುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿ ಅಂಜುಮ್ ಪವರ್ೇಜ್ ಸೂಚಿಸಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿಂದು ಜರುಗಿದ ಜಿಲ್ಲೆಯ ಅಭಿವೃದ್ದಿ ಕಾರ್ಯಗಳ ಹಾಗೂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಭೆಗೆ ಬರುವಾಗ ಸಂಪೂರ್ಣ ಮಾಹಿತಿಯೊಂದಿಗೆ ಬಂದು ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರಿಸುವಂತಾಗಬೇಕು ಎಂದು ಉಸ್ತುವಾರಿ ಕಾರ್ಯದಶರ್ಿಗಳು ತಿಳಿಸಿದರು. ನಂತರ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಗ್ರಾಮೀಣ ಕುಡಿಯುವ ನೀರಿನ ಯೋಜನೆ, ಪ್ರವಾಹ ಪರಿಹಾರ ಕಾರ್ಯ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಜಿಲ್ಲೆಯಲ್ಲಿ ಒಟ್ಟು 41 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಪೈಕಿ 38 ಪೂರ್ಣಗೊಂಡಿದ್ದು, 3 ಕಾಮಗಾರಿಗಳು ಪ್ರಗತಿಯಲ್ಲಿರುವುದಾಗಿ ಕಾರ್ಯನಿವರ್ಾಹಕ ಅಭಿಯಂತರ ಪುರೋಹಿತ ಸಭೆಗೆ ತಿಳಿಸಿದಾಗ ಉಸ್ತುವಾರಿ ಕಾರ್ಯದಶರ್ಿಗಳು  ಬಾಕಿ ಉಳಿದ 3 ಕಾಮಗಾರಿಗಳನ್ನು ಡಿಸೆಂಬರ ಅಂತ್ಯಕ್ಕೆ ಪೂರ್ಣಗೊಳಿಸಲು ಸೂಚಿಸಿದರಲ್ಲದೇ ಪೂರ್ಣಗೊಂಡ ಕಾಮಗಾರಿಗಳನ್ನು ಆಳವಾಗಿ ಪರಿಶೀಲಿಸಿ ಪ್ರತಿ ಹಳ್ಳಿಗಳಿಗೂ ನೀರು ತಲುಪುತ್ತಿರುವ ಬಗ್ಗೆ ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಗರಿಮಾ ಪನ್ವಾರ ಅವರಿಗೆ ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡಲು ತಿಳಿಸಿದರು.

ಕುಡಿಯುವ ನೀರಿಗೆ ಸಂಬಂಧಿಸಿದ ಪ್ರತಿಯೊಂದು ಕಾಮಗಾರಿಗಳ ಗುಣಮಟ್ಟದ ಬಗ್ಗೆ ಆಗಾಗ ಪರಿಶೀಲಿಸಬೇಕು. ಅಲ್ಲದೇ ಜಿಲ್ಲಾ ಪಂಚಾಯತ ವ್ಯಾಪ್ತಿಯ ಉನ್ನತ ಅಧಿಕಾರಿಗಳನ್ನು ಪ್ರತಿ ತಾಲೂಕಿಗೆ ಒಬ್ಬರಂತೆ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ ಪರಿಶೀಲನೆ ನಡೆಸಿ ವರದಿ ಪಡೆಯಲು ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಅವರಿಗೆ ತಿಳಿಸಿದರು. ಕೆಲವೊಂದು ಕಡೆ ಕಾಮಗಾರಿಗಳು ಸರಿಯಾಗಿಲ್ಲ. ಆರೋಗ್ಯ ದೃಷ್ಠಿಯಿಂದ ಕುಡಿಯುವ ನೀರಿನ ಕಾಮಗಾರಿ ಪರಿಶೀಲನೆ ಅಗತ್ಯವಾಗಿದೆ ಎಂದು ಕಾರ್ಯದಶರ್ಿಗಳು ತಿಳಿಸಿದರು. 

  ಜಿಲ್ಲೆಯ 20 ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಶೀಘ್ರವೇ ನೋಟಿಪಿಕೇಶನ್ ಹೊರಡಿಸಲಾಗುವುದು ಎಂದು ಕಾರ್ಯದಶರ್ಿಗಳು ತಿಳಿಸಿದರು. ಪ್ರವಾಹದಿಂದ ಹಾನಿಗೊಳಗಾದ ಮನೆಗಳಿಗೆ ವಿತರಿಸದ ಪರಿಹಾರ ವೆಷ್ಟು? ಹಾಗೂ ಉಳಿದ ಮೊತ್ತದ ವಿವರಗಳನ್ನು ಆಯಾ ತಹಶೀಲ್ದಾರರು ಜಿಲ್ಲಾಧಿಕಾರಿಗಳಿಗೆ ನೀಡಲು ಕಾರ್ಯದಶರ್ಿಗಳು ಸೂಚಿಸಿದರು. ಪ್ರವಾಹದಿಂದ 71750 ಹೆಕ್ಟೆರ್ನಷ್ಟು ಬೆಳೆ ಹಾನಿಯಾಗಿದ್ದು, ಎನ್ಡಿಆರ್ಎಫ್ ಮಾರ್ಗಸೂಚಿ ಪ್ರಕಾರ 91.4 ಕೋಟಿ ಬೇಕಾಗಿದ್ದು, ಇಲ್ಲಿಯವರೆಗೆ 78.01 ಕೋಟಿ ರೂ. ರೈತರ ಖಾತೆಗೆ ಜಮಾ ಮಾಡಲಾಗಿದೆ. 217 ರೈತರಿಗೆ ಆರ್ಟಿಸಿ ಮತ್ತು ಆಧಾರ ಹೊಂದಾಣಿಕೆಯಾಗದ ಕಾರಣ ಬಾಕಿ ಉಳಿದಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದಾಗ ಶೀಘ್ರವೇ ಬಗೆಹರಿಸಿ ಬಾಕಿ ಉಳಿದ ರೈತರಿಗೆ ಪರಿಹಾರ ಜಮಾ ಆಗುವಂತೆ ಮಾಡಲು ಪವರ್ೇಜ್ ತಿಳಿಸಿದರು.

 ಜಿಲ್ಲೆಯಲ್ಲಿ ಹಾನಿಗೊಳಗಾದ 8427 ವಿದ್ಯುತ್ ಕಂಬಗಳ ಪೈಕಿ 7783 ರಿಪ್ಲೇಸ್ ಮಾಡಲಾಗಿದೆ, ಟ್ರಾನ್ಸ್ಪಾರ್ಮರ 4694 ಪೈಕಿ 3025 ಹಾಗೂ ಕಂಡಕ್ಟರ್ 292 ಕಿಮೀ ಪೈಕಿ 149 ಕಿ.ಮೀ ಬದಲಾಯಿಸಿರುವ ಮಾಹಿತಿ ಪಡೆದ ಕಾರ್ಯದಶರ್ಿಗಳು ಬಾಕಿ ಕೆಲಸಗಳನ್ನು ವಾರದಲ್ಲಿ ಪೂರ್ಣಗೊಳಿಸಲು ಸೂಚಿಸಲಾಯಿತು. ಅದೇ ರೀತಿ ಪ್ರವಾಹದಿಂದ ಹಾಳಾದ 595.28 ಕಿಮೀ ಗ್ರಾಮೀಣ ರಸ್ತೆ ಪೈಕಿ 254 ಕಿ.ಮೀ ದುರಸ್ಥಿ ಮಾಡಲಾಗಿದೆ. ಕುಡಿಯುವ ನೀರಿನ ಯೋಜನೆ 62 ಪೈಕಿ 58, ಶಾಲಾ ಕೊಠಡಿ 318 ಪೈಕಿ 113 ದುರಸ್ತಿ ಮಾಡಲಾಗಿದೆ ಎಂದು ಸಭೆಗೆ ತಿಳಿಸಲಾಯಿತು. ಪ್ರವಾಹದ ಜೊತೆಗೆ ಮಳೆಯಿಂದ ಹಾನಿಗೂ ಸಹ 15 ದಿನದಲ್ಲೇ ಸಂಪೂರ್ಣ ಗೊಳಿಸಲು ಕಾರ್ಯದಶರ್ಿಗಳು ಸೂಚಿಸಿದರು.

  ಪ್ರವಾಹದಿಂದ ಹಾನಿಗೊಳಗಾದ ಮಾಹಿತಿ ಹಾಗೂ ಈಗಾಗಲೇ ನೀಡಿದ ಪರಿಹಾರದ ಬಗ್ಗೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ವಿವರವಾಗಿ ಹೇಳಿದರು. ಸಭೆಯಲ್ಲಿ ಜಿ.ಪಂ ಸಿಇಓ ಗಂಗೂಬಾಯಿ ಮಾನಕರ, ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಗರಿಮಾ ಪನ್ವಾರ, ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೊಳ್ಳಿ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಆಯಾ ತಾಲೂಕಾ ತಹಶೀಲ್ದಾರರು ಉಪಸ್ಥಿತರಿದ್ದರು.