ತಾಳಿಕೋಟಿ 14: ಬಣ್ಣಗಳನ್ನು ಆರಾಧಿಸುವ, ಬಣ್ಣಗಳಿಂದಲೆ ಬದುಕಿಗೊಂದು ಅರ್ಥವನ್ನು, ಧ್ವನಿಯನ್ನು ತಂದುಕೊಡುವದು ಬಣ್ಣದ ಬದುಕಲ್ಲ, ಬಣ್ಣವೇ ಬದುಕು.
ನಮ್ಮ ಮೈಯ್ಯಾಚೆ ಉಸಿರಾಚೆ, ಬಗೆಯ ಬಣ್ಣಗಳಾಚೆ, ಹೂವು ಅರಳುವುದು. ಕೇಸರಿ, ಬಿಳಿ, ಹಸಿರು, ಕೆಂಪು, ನೀಲಿ, ಬೂದು, ನೇರಳೆ, ಹಳದಿ.... ಬಣ್ಣಗಳಲ್ಲದೇ ಒಂದರೊಳಗೊಂದು ಸಮರಸವ ತೋರಿದಾಗ ಹುಟ್ಟುವ ನವ್ಯ ವರ್ಣಗಳ ಮೋಡಿಗೆ ಬೀಗಿ ಬಿಡಿಸುವ ಕಲೆಯ ಜಗತ್ತು ವರ್ಣಿಸಲಸದಳ. ಕೆ
ಟ್ಟದ್ದನ್ನ ಸುಡುವ ಹಬ್ಬ ಹೋಳಿ ಹಬ್ಬ, ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಇದು ವರ್ಷದ ಕೊನೆಯ ಹಬ್ಬ, ಕಳೆದ ವರ್ಷದ ಕೆಟ್ಟದ್ದನ್ನ, ನೋವನ್ನ, ತಪ್ಪುಗಳನ್ನ ಬೆಂಕಿನಲ್ಲಿ ಸುಟ್ಟು ಹೊಸ ಹೊಸ ಬಣ್ಣ, ಹೊಸ ಹೊಸ ಕನಸುಗಳಿಂದ ಬರುವ ಈ ಹೊಸ ವರ್ಷವನ್ನು ಸ್ವಾಗತ ಮಾಡಿ ಅಂತ ಹೇಳುವ ಹಬ್ಬ ಹೋಳಿ ಹಬ್ಬ... ಎಲ್ಲರೂ ಒಬ್ಬರಿಗೊಬ್ಬರು ಬಣ್ಣ ಹಚ್ಚಿಕೊಂಡು ಸಂಭ್ರಮಿಸುವ ರಂಗು ರಂಗಿನ ಹೋಳಿ ಹಬ್ಬವು ಬಾಳಲ್ಲಿ ಸುಖ, ಶಾಂತಿ, ಸಂಭ್ರಮವನ್ನು ತರಲಿ, ಕಷ್ಟಗಳೆಲ್ಲಾ ದೂರಾಗಿ ರಂಗು ರಂಗಿನ ತರಹ ಎಲ್ಲರ ಬಾಳಲ್ಲಿ ಖುಷಿಯನ್ನು ತರಲಿ ಎಂದು ಪಟ್ಟಣದ ಎಸ್ ಕೆ ಶಿಕ್ಷಣ ಮಹಾವಿದ್ಯಾಲಯದ ಸಿಬ್ಬಂದಿ ವರ್ಗ ಹಾಗೂ ಪ್ರಶಿಕ್ಷಣಾರ್ಥಿಗಳು ಬಣ್ಣ ಹಚ್ಚಿಕೊಂಡು ಹೋಳಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿ ಸಂಭ್ರಮಿಸಿದರು.