ಸೇನಾ ಕಾರ್ಯಾಚರಣೆಯ ಸಾವಿನ ಸಂಖ್ಯೆ ಬಹಿರಂಗ: ಕೊಲಂಬಿಯಾ ರಕ್ಷಣಾ ಸಚಿವ ರಾಜೀನಾಮೆ

 ಮೆಕ್ಸಿಕೊ ನಗರ, ನವೆಂಬರ್ 7:      ಕೊಲಂಬಿಯಾದ ರಕ್ಷಣಾ ಸಚಿವ ಗಿಲ್ಲೆರ್ಮೊ ಬೊಟೆರೊ ಅವರು ಮಾಜಿ ಬಂಡಾಯ ಗುಂಪಿನ ಸದಸ್ಯರ ವಿರುದ್ಧದ ಭದ್ರತಾ ಕಾರ್ಯಾಚರಣೆಯ ವೇಳೆ ಸಂಭವಿಸಿದ ಸಾವುಗಳನ್ನು ರಹಸ್ಯವಾಗಿಡುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ರಾಜೀನಾಮೆಯನ್ನು ಪಡೆಯಲಾಗಿದೆ. "ಇಂದು, ರಾಷ್ಟ್ರೀಯ ರಕ್ಷಣಾ ಮಂತ್ರಿಯನ್ನು ವಜಾಗೊಳಿಸುವ ಬಗ್ಗೆ ಗಣರಾಜ್ಯದ ಅಧ್ಯಕ್ಷ (ಇವಾನ್ ಡುಕ್) ಅವರೊಂದಿಗಿನ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ" ಎಂದು ರಕ್ಷಣಾ ಸಚಿವಾಲಯ ಬುಧವಾರ ತಡರಾತ್ರಿ ಟ್ವಿಟರ್ನಲ್ಲಿ ತಿಳಿಸಿದೆ. ರೆವಲ್ಯೂಷನರಿ ಆರ್ಮ್ಡ್ ಫೋರ್ಸ್ ಆಫ್ ಕೊಲಂಬಿಯಾ (ಎಫ್ಎಆರ್ಸಿ) ಗುಂಪಿನ ವಿರುದ್ಧದ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಬಿಂಬಿಸಲಾಗಿತ್ತು. ಈ ಕಾರ್ಯಾಚರಣೆಯಲ್ಲಿ 14 ಉಗ್ರರು ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿತ್ತು.  ಆದರೆ ಎಂಟು ಅಪ್ರಾಪ್ತ ಮಕ್ಕಳು  ಕೂಡ ಸಾವನ್ನಪ್ಪಿದ್ದರು. ಈ ವಿಷಯ ಬಹಿರಂಗಗೊಂಡ ನಂತರ ಈ ಹಗರಣ ಬೆಳಕಿಗೆ ಬಂದಿತ್ತು. ನೆರೆಯ ವೆನೆಜುವೆಲಾದ ಪರಿಸ್ಥಿತಿಯ ಬಗ್ಗೆ ವಿಶ್ವಸಂಸ್ಥೆಯ ಕೊಲಂಬಿಯಾದ ಕಡತಗಳಲ್ಲಿ ಮಾಹಿತಿ ಮತ್ತು ಫೋಟೋ ಸಾಕ್ಷ್ಯಗಳನ್ನು  ನಕಲಿ ಮಾಡಿದ ಆರೋಪವೂ ರಕ್ಷಣಾ ಸಚಿವರ ಮೇಲಿತ್ತು.