ಲೋಕದರ್ಶನ ವರದಿ
ಶಿರಹಟ್ಟಿ: ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಶಿರಹಟ್ಟಿ ವತಿಯಿಂದ ಕಾಲೇಜು ಸಾಹಿತ್ಯ ಕಲರವ ಕಾರ್ಯಕ್ರಮವನ್ನು ಸ್ಥಳೀಯ ಎಫ್ಎಂ ಡಬಾಲಿ ಪದವಿ ಪೂರ್ವ ಕಾಲೇಜಿನಲ್ಲಿ ನೆರವೇರಿಸಲಾಯಿತು.
ಪ್ರಾಂಶುಪಾಲ ಮಹಾಂತೇಶ ಭಜಂತ್ರಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ನಾಡು ನುಡಿ ಶ್ರೀಮಂತಿಕೆಯಿಂದ ಹಾಗೂ ಕನ್ನಡ ಸಾಹಿತ್ಯಿಕ ಕ್ಷೇತ್ರ ವಿಶಾಲವಾದ ಐತಿಹಾಸಿಕ ಹಿನ್ನಲೆಯಿಂದ ಕೂಡಿದ್ದು ಇಂಥಹ ಕಾರ್ಯಕ್ರಮಗಳು ನಮ್ಮ ಕಾಲೇಜಿನಲ್ಲಿ ಜರುಗುತ್ತಿದ್ದು ನಮ್ ಕಾಲೇಜಿನ ವಿದ್ಯಾರ್ಥಿಗಳಿಗೆ ಅತ್ಯಂತ ಮಹತ್ವದ್ದಾಗಿದೆ ಹಾಗೂ ಇಂಥಹ ಕಾರ್ಯಕ್ರಮಗಳು ಮೇಲಿಂದ ಮೇಲೆ ಜರುಗುವುದು ಅವಶ್ಯಕವಿದೆ ಎಂದು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಷಣ್ಮುಖ ಬಡಭೀಮಪ್ಪನವರ ಮಾತನಾಡಿ, ವರಕವಿ ದ.ರಾ ಬೇಂದ್ರೆಯವರು ಕನ್ನಡ ನಾಡು ನುಡಿಗೆ ಅವರು ಕೊಟ್ಟಂತಹ ದೇಶೀ ಶೈಲಿಯಲ್ಲಿ ಕಾವ್ಯಗಳನ್ನು ಉಣಬಡಿಸಿದ ಮಹಾನ್ ಕವಿಯಾಗಿದ್ದಾರೆ. ಇಳೀದು ಬಾ ತಾಯೇ ಇಳಿದು ಹರನ ಜಡೆಯಿಂದ ಸುರ ಗಂಗೆಯನ್ನು ಸುರ ಗಂಗೆಯನ್ನು ಕನ್ನಡ ಕಾವ್ಯ ಧಾರೆಯಲ್ಲಿ ಇಳೀಸಿದ ಮಾಹನ್ ಕವಿಯಾಗಿದ್ದಾರೆ ಎಂದು ಉಪನ್ಯಾಸ ಮಾಡಿದರು.
ನಂತರ ಕಸಾಪದ ಗೌರವ ಕಾರ್ಯದರ್ಶಿ ಎಂ.ಎ. ಮಕಾನದಾರ, ಹೃದಯ ಶ್ರೀಮಂತಿಕೆಯ ಭಾಷೆ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಪ್ರಯತ್ನ ಎಲ್ಲರಿಂದಾಗಬೇಕಿದೆ. ಎಲ್ಲ ಕನ್ನಡದ ಕನಸನ್ನು ಹೊತ್ತಂತಹ ಮನಸ್ಸುಗಳು ಕನ್ನಡದ ಉಳೀವಿಗಾಗಿ ಶ್ರಮಿಸಬೇಕಿದೆ ಎಂದರು.
ಈ ಕಾರ್ಯಮವನ್ನುದ್ದೇಶಿಸಿ ಕಸಾಪ ತಾಲೂಕಾಧ್ಯಕ್ಷ ಎಂಕೆ ಲಮಾಣಿ ಅಧ್ಯಕ್ಷೀಯ ಮಾತನಾಡುಗಳನ್ನಾಡುತ್ತಾ, ಕಾಲೇಜು ಸಾಹಿತ್ಯ ಕಲರವ ಕಾರ್ಯಕ್ರಮವು ಬಹಳಷ್ಟು ಅರ್ಥಪೂರ್ಣ ಹಾಗೂ ಪರಿಪೂರ್ಣತೆಯಿಂದ ಕೂಡಿದ್ದು, ಕಾಲೇಜು ಹಂತದ ವಿದ್ಯಾರ್ಥಿಗಳಿಗೆ ಕನ್ನಡ ನಾಡು, ನುಡಿ ಮತ್ತು ಸಾಹಿತ್ಯದ ಕುರಿತು ಉಣಬಡಿಸುವ ಪ್ರಯತ್ನ ಮಾಡುತ್ತಿದ್ದು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಭಾಷಣ ಸ್ಪರ್ದೇಯನ್ನು ಏರ್ಪಡಿಸಿ ಅವರನ್ನು ಉತ್ತೇಜನ ನೀಡುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ನಿರೂಪಣೆಯನ್ನು ಕಾಲೇಜಿನ ಉಪನ್ಯಾಸಕಿ ಸುಧಾ ಹುಚ್ಚಣ್ಣವರ, ಪ್ರಾರ್ಥನೆಯನ್ನು ವಿದ್ಯಾರ್ಥಿನಿಗಳಾದ ಎಮ್ಎಸ್ ಬೆಳವಟಿಗಿ ಹಾಗೂ ಪಿಸಿ ಹವಾಲ್ದಾರ ನೆರವೇರಿಸಿದರು. ಪಿಎನ್ ಕುಲಕರ್ಣಿ, ಎಫ್ಎ ಬಾಬುಖಾನವರ, ಎಸ್ಎಸ್ ಕಾಳಗಿ, ಆರ್ಎಸ್ ಕಾಳಗಿ ಮತ್ತು ಎಲ್ಲ ಉಪನ್ಯಾಸಕ ವೃಂದ ಹಾಜರಿದ್ದರು.