ಸಹಕಾರಿ ಜೀವನ ತೃಪ್ತಿ ತಂದಿದೆ

ಗುಳೇದಗುಡ್ಡ.ಮಾ.6: ಬ್ಯಾಂಕಿನ ಅಭಿವೃದ್ಧಿಗೆ ನಮ್ಮ ಗುಂಪಿನ ಇಚ್ಛಾಶಕ್ತಿ ಮನಗಂಡ ಗ್ರಾಹಕರು ನಮ್ಮನ್ನು ಪುನಃ ಆಯ್ಕೆ ಮಾಡಿದ್ದಾರೆ. ಇದರಿಂದ ನಮ್ಮ ಜವಾಬ್ದಾರಿ ಇನ್ನೂ ಹೆಚ್ಚಿದೆ ಸಹಕಾರಿ ಜೀವನ ನಮಗೆ ತೃಪ್ತಿ ತಂದಿದೆ ಎಂದು ಮಾಜಿ ಶಾಸಕ, ಲಕ್ಷ್ಮೀ ಸಹಕಾರಿ ಬ್ಯಾಂಕಿನ ಚೇರಮನ್ ರಾಜಶೇಖರ ಶೀಲವಂತ ಹೇಳಿದರು.

            ಅವರು ಗುರುವಾರ ಪಟ್ಟಣದ ವೆಂಕಟೇಶ ಹೈಸ್ಕೂಲ್ನಲ್ಲಿ, ಸ್ಥಳೀಯ ಅಟಲ್ ಬಿಹಾರಿ ವಾಜಪೇಯಿ ನಗರ ಗ್ರಾಮೀಣ ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

           ಸಂಘದ ಅಧ್ಯಕ್ಷ ಸಿದ್ಧು ಅರಕಾಲಚಿಟ್ಟಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಬ್ಯಾಂಕಿನ ಚೇರಮನ್ ರಾಜಶೇಖರ ಶೀಲವಂತ ಹಾಗೂ ಉಪಾಧ್ಯಕ್ಷ ಕಮಲಕಿಶೋರ ಮಲಪಾಣಿಯವರನ್ನು ಸನ್ಮಾನಿಸಲಾಯಿತು. 

           ಲಾಲಬಹದ್ದೂರ ಶಾಸ್ತ್ರಿ ಸೌಹಾರ್ದ ಬ್ಯಾಂಕಿನ ಚೇರಮನ್ ಪ್ರಶಾಂತ ಜವಳಿ, ಸಂಘದ ಕಾಯರ್ಾಧ್ಯಕ್ಷ ಮಧುಸೂಧನ ರಾಂಧಡ, ಬಾಲಕೃಷ್ಣ  ನಿರಂಜನ, ಮೋಹನ ಮಲಜಿ, ಸಿದ್ದಪ್ಪ್ಪ ಮಾಳಗಿ, ಮಹಾದೇವ ಜಗತಾಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶಿವಕುಮಾರ ಅಚನೂರ ಕಾರ್ಯಕ್ರಮ ನಿರೂಪಿಸಿದರು. ಮಲ್ಲಿಕಾಕಾಜರ್ುನ ಶೀಲವಂತ ವಂದಿಸಿದರು.