ಯೋಜನಾಬದ್ದ ಅದ್ಯಯನ ಸಾಧನೆಗೆ ಸಹಕಾರಿ-ಸಿ.ಎಂ. ನೆಮಗೌಡ

Collaborative for the achievement of planned study-C.M. Nemagowda

ಯೋಜನಾಬದ್ದ ಅದ್ಯಯನ ಸಾಧನೆಗೆ ಸಹಕಾರಿ-ಸಿ.ಎಂ. ನೆಮಗೌಡ  

ಚಿಮ್ಮಡ, 07;  ಸ್ಪಷ್ಠ ಗುರಿ, ಅಚಲ ಛಲ, ಕಠಿಣ ಪರೀಶ್ರಮದೊಂದಿಗೆ ಯೋಜನಾ ಬದ್ದವಾಗಿ ಅದ್ಯಯನ ಮಾಡಿದಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದು ನಿವೃತ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ. ನೆಮಗೌಡ ಹೇಳಿದರು. ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಸತ್ಕಾರ ಸಮಾರಂಭದ ಉದ್ಘಾಟಣೆ ನೆರವೇರಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಎಲ್ಲಾ ವಿಷಯಗಳ ಕುರಿತು ತಿಳುವಳಿಕೆ ಮೂಡಿಸಿಕೊಳ್ಳಬೇಕು, ವಿಶೇಷವಾಗಿ ತಮಗೆ ಆಸಕ್ತಿ ಇರುವ ವಿಷಯದಲ್ಲಿ ಹೆಚ್ಚಿನ ಸಾಧನೆಗೆ ಮುಂದಾಗಬೇಕು, ಶಾಲೆಗಳಲ್ಲಿ ಹಾಗೂ ಮನೆಗಳಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿಕೊಡುವುದು ಜತೆಗೆ ಶೈಕ್ಷಣಿಕ ಪ್ರಗತಿಗೆ ಪೋಷಕರ ಮತ್ತು ಶಿಕ್ಷಕರ ಸಹಕಾರವೂ ಅವಶ್ಯ. ವೇಳಾಪಟ್ಟಿಯೊಂದಿಗೆ ಅದ್ಯಯನ ಜತೆಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿದೆ ಎಂದು ಸಲಹೆ ನೀಡಿದರು. ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಭು ನೇಸೂರ ಮಾತನಾಡಿ ಶೈಕ್ಷಣಿಕ ಜೀವನದಲ್ಲಿ ಮಹತ್ವದ ಘಟ್ಟವಾಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಸತತ ಅದ್ಯಯನ ಮಾಡಬೇಕು, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಮೈಗೂಡಿಸಿಕೊಳ್ಳಬೇಕು, ಮಕ್ಕಳ ಭವಿಷ್ಯಕ್ಕಾಗಿ ಎಲ್ಲರೀತಿಯ ನೆರವು ನೀಡುವ ಪಾಲಕರಿಗೆ ಉತ್ತಮ ಫಲಿತಾಂಶ ಪಡೆಯುವ ಮೂಲಕ ಗೌರವ ತರಬೇಕೆಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾದ್ಯಾಯೆ ಶ್ರೀಮತಿ ಎಂ.ಎಸ್‌. ಜಿಟ್ಟಿ, ಸಿಆರಿ​‍್ಪ ಸಮನ್ವಯ ಅಧಿಕಾರಿ ದ್ರಾಕ್ಷಾಯಿಣಿ ಮಂಡಿ. ಶಿಕ್ಷಕ ಡಿ.ಬಿ. ಬಡಿಗೇರ, ಶ್ರೀಮತಿ ಜಿ.ಎಸ್‌. ಕುಲಕರ್ಣಿ ಮಾತನಾಡಿದರು.  ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಎಸ್ಡಿಎಂಸಿ ಅಧ್ಯಕ್ಷ ಮಾರುತಿ ಮಮದಾಪೂರ, ಪ್ರಕಾಶ ಪಾಟೀಲ, ಉಪನ್ಯಾಸಕ ಎಚ್‌.ಎಂ. ಕುಂಬಾರ, ಮಹಾದೇವ ಪಾಲಭಾವಿ, ಪ್ರಭು ಆನ್ಯಾಗೋಳ, ಶಿವಪ್ಪಾ ದೊಡಮನಿ, ನಂದೇಶ ಬರಗಲ್ ಸೇರಿದಂತೆ ಹಲವು ಪ್ರಮುಖರು ಆಗಮಿಸಿದ್ದರು. ಇದೇ ಸಂಧರ್ಬದಲ್ಲಿ ಇತ್ತೀಚೆಗೆ ವರ್ಗಾವಣೆಗೊಂಡ ಶಿಕ್ಷಕಿ ಟಿ.ವಿ.ವೀರಗೌಡರ ಅವರನ್ಬನು ಸತ್ಕರಿಸಿ ಬೀಳ್ಕೊಡಲಾಯಿತು. ಕಾರ್ಯಕ್ರಮಕ್ಕೆ ಶಿಕ್ಷಕ ಪಿ.ಬಿ. ಮುಧೋಳ ಸ್ವಾಗತಿಸಿದರು, ಉಷಾ ಬಾಬು ಕಟ್ಟಿಮನಿ ನಿರೂಪಿಸಿದರು. ಎಂ.ಎಲ್‌. ಜಮಾದರ ವಂದಿಸಿದರು.