ಬೆಳಗಾವಿ : ಜಿಲ್ಲೆಯ ನಿಪ್ಪಾಣಿ ನಗರದ ಸಭೆಯ ವ್ಯಾಪ್ತಿಯಲ್ಲಿ ನಡೆದಿರುವ ಅಭಿವೃದ್ದಿ ಕಾಮಗಾರಿಗಳಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆಯುತ್ತಿದೆ. ಹಾಲಿ ನಗರಸಭೆಯ ಅಧ್ಯಕ್ಷ, ಆಯುಕ್ತ ಸೇರಿದಂತೆ ಕೆಲವು ನಗರಸೇವಕರು ಹಾಗೂ ಅಧಿಕಾರಿಗಳು ಈ ಅವ್ಯವಹಾರದಲ್ಲಿ ಭಾಗಿಯಾಗಿದ್ದು ಈ ಕುರಿತು ತನಿಖೆ ನಡೆಸುವಂತೆ ನೂತನವಾಗಿ ಅತ್ಸಿತ್ವಕ್ಕೆ ಬಂದಿರುವ ನಿಪ್ಪಾಣಿ ಅಭಿವೃದ್ದಿ ಸಂಘಟನಾ ಸಮಿತಿಯ ಪದಾಧಿಕಾರಿಗಳು ಇಂದಿಲ್ಲಿ ಒತ್ತಾಯಿಸಿದ್ದಾರೆ.
ನಗರದಲ್ಲಿ ಸೋಮವಾರ ದಿನದಂದು ಕರೆಯಲಾದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಪದಾಧಿಕಾರಿಗಳಾದ ಭರತ ಕುರಬೇಟ್, ಅನಿಲ ನೇಷ್ಟಿ, ರಾಜೇಂದ್ರ ಪೋಳ ಇವರುಗಳು, ಕಳೆದ ಕೆಲವು ವರ್ಷಗಳಿಂದ ಅಧಿಕಾರದಲ್ಲಿ ಇರುವ ವಿಲಾಸ ಗಾಡಿವಡ್ಡರ ಅವರು ಹಾಗೂ ಅಧಿಕಾರಿಗಳು ಮತ್ತು ಕೆಲವು ನಗರ ಸೇವಕರು ಸೇರಿ ಸರಕಾರಕ್ಕೆ ತಪ್ಪು ಮಾಹಿತಿಗಳನ್ನು ನೀಡುವ ಮೂಲಕ ನಿಪ್ಪಾಣಿ ನಗರದಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾಮಗಾರಿಯಲ್ಲಿ ಕೋಟ್ಯಾಂತರ ರೂಗಳ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ. ಈ ಕುರಿತು ತಾವು ಸರಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ಹಲವಾರು ಬಾರಿ ಮನವಿ ಮಾಡಿಕೊಂಡರು ಏನು ಪ್ರಯೋಜನ ವಾಗಿರುವದಿಲ್ಲ ಎಂದು ದೂರಿದರು.
ಬೆಳಗಾವಿಯನ್ನು ಬಿಟ್ಟರೆ ಜಿಲ್ಲೆಯಲ್ಲಿ ದೊಡ್ಡ ನಗರವಾಗಿ ಬೆಲೆಯುತ್ತಿರುವ ನಿಪ್ಪಾಣಿಯಲ್ಲಿ ಈ ರೀತಿಯ ಭ್ರಷ್ಟಾಚಾರವು ತಾಂಡವ ಆಡುತ್ತಿದ್ದರೂ ಸರಕಾರ ಮತ್ತು ಜಿಲ್ಲಾಡಳಿತಗಳು ಈ ಬಗ್ಗೆ ಯಾವದೇ ಕ್ರಮಕೈಗೊಳ್ಳುತ್ತಿಲ್ಲ. ಈ ಬಗ್ಗೆ ಕೆಲವು ಕಾಮಗಾರಿಗಳಲ್ಲಿನ ಅವ್ಯವಹಾರ ಹಾಗೂ ಕಳಪೆ ಕಾಮಗಾರಿಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ ಈ ಬಗ್ಗೆ ತನಿಖೆ ನಡೆಸುವಂತೆ ಓರ್ವ ಅಧಿಕಾರಿಯನ್ನು ನೇಮಕ ಮಾಡಲಾಗಿತ್ತು. ಆದರೆ ಆ ಅಧಿಕಾರಿ ಕೂಡಾ ಮೌನವಾಗಿ ಬಿಟ್ಟರು ಎಂದು ಆರೋಪಿಸಿದ್ದಾರೆ.
ನಗರಸಭೆಯ ಅಧ್ಯಕ್ಷ ವಿಲಾಸ ಗಾಡಿವಡ್ಡರ ಅವರು ನಗರ ಸಭೆಯು ತಮ್ಮ ಮಾಲ್ಕಿ ಆಸ್ತಿ ಇದ್ದಂತೆ ವತರ್ಿಸುತ್ತಿದ್ದಾರೆ. ನಿಪ್ಪಾಣಿ ನಗರದಲ್ಲಿನ ಬಸವೇಶ್ವರ ಉದ್ಯಾನವನದ ಜಮೀನಿನಲ್ಲೂ ಭಾರೀ ಅವ್ಯವಹಾರ ಮಾಡಲಾಗಿದೆ. ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನ ಮಾಡಲಾಗುತ್ತಿದೆ. ಅದರಂತೆ ನಗರದಲ್ಲಿನ ಕುಸ್ತಿ ಮೈದಾನ ಮತ್ತು ಒಳ ಚರಂಡಿ ನಿಮರ್ಾಣಕ್ಕೆ ಹಳೆಯ ಕಲ್ಲುಗಳನ್ನು ಬಳಸಿ ಲಕ್ಷಾಂತರ ರೂಪಾಯಿ ಹಣ ಖಚರ್ು ಮಾಡಿದ್ದಾರೆ, ಮತ್ತು ಈ ಕುಸ್ತಿ ಮೈದಾನದಲ್ಲಿ ವರ್ಷದಲ್ಲಿ ಒಂದು ಬಾರಿ ಮಾತ್ರ ಕುಸ್ತಿ ನಡೆಯುತ್ತದೆ. ಆದರೆ ಈ ಮೈದಾನಕ್ಕೆ ನಗರ ಸಭೆ ಅವರು ಲಕ್ಷಾಂತರ ರೂ ವೆಚ್ಚ ಮಾಡಿ ಇಲ್ಲಿಯೂ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿದರು.
ನಗರದ ಎಸ್ಸಿ ಕಾಲೋನಿಯಲ್ಲೂ ಹಲವಾರು ಅನುದಾನಗಳನ್ನು ದುರ್ಬಳಕೆ ಮಾಡಲಾಗಿದೆ. ಇನ್ನೂ ನಗರದಲ್ಲಿನ ಹಲವಾರು ಅಭಿವೃದ್ದಿ ಕಾರ್ಯಗಳಲ್ಲಿ ಕೋಟ್ಯಾಂತರ ರೂ ಭ್ರಷ್ಟಾಚಾರ ಮಾಡಲಾಗಿದೆ. ಕಳೆದ ಕೆಲವು ವರ್ಷಗಳಿಂದ ಇದೇ ಕಾರ್ಯ ಮಾಡುತ್ತಿರುವ ನಗರ ಸಭೆಯ ಅಧ್ಯಕ್ಷ ವಿರುದ್ದ ತನಿಖೆ ನಡೆಸಬೇಕು ಅಲ್ಲದೆ ಈ ಅವ್ಯವಹಾರಗಳಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಭ್ರಷ್ಟಾಚಾರ, ಹಾಗೂ ಅವ್ಯಹಾರಗಳ ಕುರಿತು ಕಾನೂ ಹೋರಾಟ ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲವು ಮಾಜಿ ನಗರಸಭೆ ಅಧ್ಯಕ್ಷರು ಹಾಗೂ ನಗರಸೇವಕರು ಸೇರಿದಂತೆ ಕೆಲವು ಸಂಘಟನೆಯ ಮುಖಂಡರು ಯಾವಧೆ ಪಕ್ಷ, ಜಾತಿ ಎನ್ನದೆ ನಿಪ್ಪಾಣಿ ನಗರ ಅಭಿವೃದ್ದಿ ಸಂಘಟನಾ ಸಮಿತಿ ಎಂಬ ನೂತನ ಸಂಘಟನೆಯನ್ನು ನಿಮರ್ಾಣ ಮಾಡಲಾಗಿದೆ. ಇದರ ಮೂಲಕ ಈ ಅವ್ಯವಹಾರಗಳ ವಿರುದ್ದ ಕಾನೂನು ಹೋರಾಟ ಮಾಡಲಾಗುವದು ಎಂದು ವಿವರಿಸಿದರು.
ಇಂದಿನ ಪತ್ರಿಕಾಗೋಷ್ಠಿಯಲ್ಲಿ ಗಜೇಂದ್ರ ಗೋಡ, ಜಯರಾಂ ಮಿರಜಕರ ಸುಭಾಷ ಕದಂ, ಸೇರಿದಂತೆ ಸಂಘಟನೆಯ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.