ನೇಸರಗಿ 20: ದಿನನಿತ್ಯದ ಬಳಕೆ ವಸ್ತುಗಳು ಗ್ರಾಮೀಣ ಮಟ್ಟದಲ್ಲಿ ಸಿಗುವಂತೆ ಮಾಡಿರುವ ಸಹಕಾರಿ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದು ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.
ಸಮೀಪದ ದೇಶನೂರ ಗ್ರಾಮದ ವಿವಿದ್ದೋದ್ದೇಶ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ವತಿಯಿಂದ ನೂತನ ಕಟ್ಟಡ, ಹಳ್ಳಿ ಮಾರ್ಟ (ಮಾರಾಟ ಕೇಂದ್ರ)ನ್ನು ದಿ. 18 ರಂದು ಉದ್ಘಾಟಿಸಿ ಮಾತನಾಡಿ,ಹಳ್ಳಿಗಳಲ್ಲಿ ದಿನಸಿ ಬಳಕೆ ವಸ್ತುಗಳು ಸೇರಿದಂತೆ ವಿವಿಧ ವಸ್ತುಗಳ ಮಾರಾಟನ್ನು ಪ್ರಾರಂಭಿಸಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಸಾನಿಧ್ಯವನ್ನು ಕಿತ್ತೂರ ಮಡಿವಾಳ ರಾಜಯೋಗಿದ್ರ ಸ್ವಾಮೀಜಿ ವಹಿಸಿದ್ದರು. ಅಧ್ಯಕ್ಷತೆಯನ್ನು ಪಿಕೆಪಿಎಸ್ ಅಧ್ಯಕ್ಷ ಬಸವರಾಜ ಕೇದಾರಿ ವಹಿಸಿದ್ದರು. ಗ್ರಾ.ಪಂ ಅಧ್ಯಕ್ಷೆ ಸುರೇಖಾ ಕೇದಾರಿ, ಎಂ.ಡಿ.ನಂದೆನ್ನವರ, ವಿ.ಬಿ.ಗಿರನವರ, ವಾಯ್.ಆಯ್.ಮತ್ತಿಕೊಪ್ಪ, ರವಿರಾಜ ಇನಾಂದಾರ, ಜಿತೇಂದ್ರಕುಮಾರ, ಶ್ರೀಶೈಲ ಕಮತಗಿ, ಅಡಿವೆಪ್ಪ ಹೊಸಮನಿ, ಈರಣ್ಣ ವಾರದ, ಇನ್ನಿತರರು ಇದ್ದರು.
ನಾಗರಾಜ ಮುಚ್ಚಂಡಿ ನಿರೂಪಿಸಿದರು. ಸಂತೋಷ ತಿಳಗಂಜಿ ವಂದಿಸಿದರು.