ಜನರ ನಂಬಿಕೆ, ವಿಶ್ವಾಸ ಗಳಿಸಿದಾಗ ಸಹಕಾರಿ ಸಂಘಗಳು ಬೆಳೆಯಲು ಸಾಧ್ಯ: ಉತ್ತಮ ಪಾಟೀಲ್

Co-operative societies can grow when they gain the trust and confidence of the people: Uttama Patil

ಮಾಂಜರಿ  10: ಜನರ ನಂಬಿಕೆ, ವಿಶ್ವಾಸ ಪ್ರೀತಿಯನ್ನು ಗಳಿಸಿದಾಗ ಮಾತ್ರ ಸಹಕಾರಿ ಸಂಘಗಳು ಬೆಳೆಯಲು ಸಾಧ್ಯ ಎಂದು ಬೋರಗಾಂವ ಗ್ರಾಮದ ಹರಿಹಂತ್ ಉದ್ಯೋಗ್ ಸಮೂಹದ ರೂವಾರಿಗಳಾದ ಉತ್ತಮ ಪಾಟೀಲ್  ಹೇಳಿದರು . 

ಸೋಮವಾರ  ರಂದು ಸಮೀಪದ  ನಸಲಾಪುರ್  ಗ್ರಾಮದಲ್ಲಿ  ಬೋರಗಾಂವ ಗ್ರಾಮದ ಜಿನಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ನಿಯಮಿತ ಬೋರಗಾವ್ ಈ ಸಂಸ್ಥೆಯ ಪ್ರಥಮ ಶಾಖೆ ನಸಲಾಪುರ ಶಾಖೆ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ   ಮಾತನಾಡಿ ಇಂದು ಆರ್ಥಿಕ ಸಂಸ್ಥೆಗಳ ಪೈಪೋಟಿಗೆ ಎದುರಾಗುವ ಕಾನೂನುವನ್ನು ಸರ್ಕಾರ ರಚಿಸಲಾಗುತ್ತದೆ  ಅದಕ್ಕಾಗಿ ಸಂಸ್ಥೆಯಲ್ಲಿ ನಿರ್ದೇಶಕರು ಆಡಳಿತ ಮಂಡಳಿಯ ಸದಸ್ಯರು ಮತ್ತು ಸಂಸ್ಥೆಯ ಸದಸ್ಯರು ಸರ್ವಸಾಮಾನ್ಯ ಜನರ ವಿಶ್ವಾಸ ಗಳಿಸಿ ಸಂಸ್ಥೆಯ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

 ಸಂಘದ  ಸದಸ್ಯರುಗಳು  ವಿಶ್ವಾಸದಾಯಕ  ಮನೋಭಾವನೆ  ಹೊಂದಿರಬೇಕು ಮತ್ತು ಸಿಬ್ಬಂದಿ ಗ್ರಾಹಕರೊಂದಿಗೆ  ಪ್ರೀತಿ ವಿಶ್ವಾಸ ಗಳಿಸಿಕೊಳ್ಳಬೇಕು. ಗ್ರಾಹಕರು ನಮ್ಮ ಮೇಲೆ ವಿಶ್ವಾಸವಿಟ್ಟು ಸೇವೆ ಮಾಡುವ ಅವಕಾಶ ಕೊಟ್ಟಿದ್ದಾರೆ. ಈ ಅವಧಿಯಲ್ಲಿ ಸಂಘದ ಅಭಿವೃ ದ್ಧಿಗೆ ನಾವು ಸಾಕಷ್ಟು ಶ್ರಮಿಸಿ ಬೇಕು  ಸಂಘವು ಅಭಿವೃದ್ಧಿ ಹೊಂದಲು ಸಾಲ ಪಡೆದವರು ಸಕಾಲಕ್ಕೆ ಮರು ಪಾವತಿಸಬೇಕು. ಮುಂದಿನ ದಿನಗಳಲ್ಲಿ ಸದರಿ ಸಂಸ್ಥೆವು  ಇನ್ನೊಂದು ಶಾಖೆ ಪ್ರಾರಂಭಿಸುವ ಆಲೋಚನೆ ಯನ್ನು ಆಡಳಿತ ಮಂಡಳಿಯ ಸದಸ್ಯರು ಮಾಡಬೇಕು  ಎಂದರು.ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಸದಲಗಾದ ಗೀತಾ ಶ್ರಮದ ಪರಮಪೂಜ್ಯ ಶಧಾನಂದ  ಸ್ವಾಮೀಜಿಗಳು ಹಾಗೂ ಶಿಹಣಗದ್ದೆ ಬಸ್ತಿಮಠ ನರಸಿಹರಾಜಪುರದ ಪರಮಪೂಜ್ಯ ಸ್ವಸ್ತಿ ಲಕ್ಷ್ಮಿ ಸೇನೆ ಭಟ್ಟಾರಕ  ಸ್ವಾಮೀಜಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಸದಲಗಾ ಮಾಜಿ ಶಾಸಕ ಕೆ ಪಿ ಮಗ್ಗೆನವರ್ ವಹಿಸಿದ್ದರು.  ಅತಿಥಿಯಾಗಿ  ಡಾಕ್ಟರ್ ಎನ್ ಎ ಮಗದುಮ ಚಿದಾನಂದ ಕೋರೆ ಸಹಕರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಭರತೇಶ್ ಬನವನೇ ಭಾವುಸಾಹೇಬ್  ಪಾಟೀಲ್ ಡಾಕ್ಟರ್ ರಮೇಶ್ ಖಿಚಡೆ ಧುಳಗೌಡ ಪಾಟೀಲ್ ಹಾಗೂ ಇನ್ನಿತರರು ಹಾಜರಿದ್ದರ ಈ ವೇಳೆ ಡಾ. ಎನ್ ಎ ಮಗದುಮ್ ಅಜಿತ್ ಪಾಟೀಲ್ ಕೆ ಪಿ ಮಗ್ಗೆನವರ್ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು ನಸಲಾಪುರ ಶಾಖೆಯನ್ನು ಉಪಸ್ಥಿತ ಗಣ್ಯರು ಮತ್ತು ಸ್ವಾಮೀಜಿಗಳ ಹತ್ತದಿಂದ ದೀಪ ಬೆಳಗಿಸಿ ಉದ್ಘಾಟಿಸಲಾಯಿತು.  ಈ ಕಾರ್ಯಕ್ರಮಕ್ಕೆ ಸಂಸ್ಥೆಯ ಸಂಸ್ಥಾಪಕರಾದ ಸಾಗರ್ ಮಿರ್ಜಿ ಅಧ್ಯಕ್ಷರಾದ ಅಜಿತ್ ಪಾಟೀಲ್ ಎಲ್ಲ ನಿರ್ದೇಶಕರು ಹಾಗೂ ನಸಲಾಪುರ  ಶಾಖೆಯೇ ಎಲ್ಲ ಸಲಹಾ ಸಮಿತಿಯ ಸದಸ್ಯರು ಗ್ರಾಮಸ್ಥರು ಹಾಜರಿದ್ದರು.