ಮಾಕನೂರು ಶಾಲೆಯಲ್ಲಿ ಕ್ಲಷ್ಟರ್ಮಟ್ಟದ ಶಾಲಾ ಉತ್ಸುವಾರಿ ತರಬೇತಿ

ಲೋಕದರ್ಶನವರದಿ

ರಾಣೇಬೆನ್ನೂರು05: ಇಂದು ಪಾಲಕರು  ಆಧುನಿಕ ಭರಾಟೆಯಲ್ಲಿ ಇಂಗ್ಲೀಷ ವ್ಯಾಮೋಹಕ್ಕೆ ಸಿಲುಕಿ ದುಬಾರಿ ವೆಚ್ಚದ ಆಂಗ್ಲಮಾಧ್ಯಮ ಶಾಲೆಗಳ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ, ಇದು ಬಡವರಿಗೆ ನುಂಗರಾದ ತುತ್ತಾಗಿದೆ ಎಂದು ಗ್ರಾಪಂ ಅಧ್ಯಕ್ಷ ಸದಾಶಿವನಗೌಡ ಮಲ್ಲನಗೌಡ್ರ ಹೇಳಿದರು.

  ತಾಲೂಕಿನ ಮಾಕನೂರು ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ, ಮಾಕನೂರು ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಉಸ್ತುವಾರಿ ಸಮಿತಿಯ ಅಧ್ಯಕ್ಷರ ಹಾಗೂ ಸದಸ್ಯರ ಒಂದು ದಿನದ ತರಬೇತಿ ಕಾಯರ್ಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

  ಇಂದು ಇಂಗ್ಲೀಷ್ ಮಾಧ್ಯಮ ಶಾಲೆಗಳು ಮಳೆಕೊಡೆಯಂತೆ ತಲೆ  ಎತ್ತಿ ನಿಂತಿವೆ. ಇತ್ತ ಸಕರ್ಾರಿ ಪ್ರಾಥಮಿಕ ಶಾಲೆಗಳು ಮುಚ್ಚುವ ಹಂತ ತಲುಪುತ್ತಿರುವುದು ವಿಷಾಧನೀಯ ಸಂಗತಿಯಾಗಿದೆ ಎಂದರು.

  ಸಕರ್ಾರವು ಖಾಸಗಿ ಶಾಲೆಗಳಲ್ಲಿ ಆಡಳಿತ ಮಂಡಳಿಯ ಕಾರ್ಯವೈಖರಿ ಹಾಗೂ ಅವರ ಜವಾಬ್ದಾರಿಯಿಂದ ಆ ಶಾಲೆಗಳು ಉತ್ತಮ ರೀತಿಯಲ್ಲಿ ಫಲಿತಾಂಶ ಪಡೆಯುತ್ತಿರುವುದರಿಂದ ಅಂತಹ ಶಾಲೆಗಳಿಗೆ ಬಡವರು ಸಹಿತ ಪಾಲಕರು ಮಕ್ಕಳನ್ನು ಶಾಲೆಗೆ ಸೇರಿಸುತ್ತಿರುವುದು ಸಾಮಾನ್ಯಾಗಿದೆ ಎಂದರು.

  ಸಕರ್ಾರ ಇದರ ಪರ್ಯಾಯ ವ್ಯವಸ್ಥೆ ಕಂಡುಕೊಂಡು ಸಕರ್ಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಆಡಳಿತ ನಡೆಸಲು ಮೇಲುಸ್ತುವಾರಿ (ಎಸ್ಡಿಎಂಸಿ) ಸಮಿತಿ ರಚಿಸಿದ್ದು, ತಾವು ಕೂಡ ಮಕ್ಕಳ ಶೈಕ್ಷಣಿಕ ಹಾಗೂ ಶಿಕ್ಷಕರು ನೀಡುವ ಅಭ್ಯಾಸ ಕುರಿತು ಸಲಹೆ-ಸೂಚನೆಗಳನ್ನು ನೀಡುವ ಮೂಲಕ ಶೈಕ್ಷಣಿಕ ಪ್ರಗತಿಗೆ ಶ್ರಮಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಈ ಒಂದು ದಿನದ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳು ನಿಮ್ಮ ಜವಾಬ್ದಾರಿ ಕುರಿತು ತರಬೇತಿ ನೀಡಲಿದ್ದು, ಇದರ ಪ್ರಯೋಜನವನ್ನು ತಾವೆಲ್ಲರೂ ಪಡೆದುಕೊಳ್ಳಬೇಕು ಎಂದರು.

  ಎಸ್ಡಿಎಂಸಿ ಅಧ್ಯಕ್ಷ ಭೀಮಪ್ಪ ಪೂಜಾರ, ಬಿಆರ್ಸಿ ಬಿ.ಜಿ. ಬಡಿಗೇರ, ಸಿಆರ್ಪಿ  ಆರ್.ಎಸ್. ರಾಮನಗೌಡ್ರ, ಸಿಆರ್ಪಿ  ಹೆಚ್.ಆರ್. ಎಲಿವಾರ, ಬಸವರಾಜ ಶಾಮನೂರ, ಮುಖ್ಯೋಪಾಧ್ಯಾಯ ಬಸವರಾಜ ದುರುಗಪ್ಪನವರ, ಸಹಶಿಕ್ಷಕರಾದ ರಾಜು ಬಣಕಾರ, ಎನ್.ಎನ್. ಅಣ್ಣೇರ, ವಿ.ವಿ. ಬಂಗಾರಿ, ಅಶೋಕ ಬಿ.ಕೆ ಸೇರಿದಂತೆ ಮಾಕನೂರು ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಉಸ್ತುವಾರಿ ಸಮಿತಿಯ ಅಧ್ಯಕ್ಷರ ಹಾಗೂ ಸರ್ವಸದಸ್ಯರು ಮತ್ತಿತರರು ಇದ್ದರು.