ಮೂರು ದಿನಗಳ ಭಾಷಾಂತರ ತರಬೇತಿ ಕಮ್ಮಟದ ಸಮಾರೋಪ ಸಮಾರಂಭ

Closing ceremony of the three-day translation training workshop

ಮೂರು ದಿನಗಳ ಭಾಷಾಂತರ ತರಬೇತಿ ಕಮ್ಮಟದ ಸಮಾರೋಪ ಸಮಾರಂಭ 

ಹಂಪಿ 11: ಕನ್ನಡ ವಿಶ್ವವಿದ್ಯಾಲಯದ ನುಡಿ ಕಟ್ಟಡದಲ್ಲಿ 7 ರಿಂದ 9ನೇ ಮಾರ್ಚ್‌ 2025ರ ವರೆಗೆ ನಡೆದ ಭಾಷಾಂತರ ಕೇಂದ್ರ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಭಾಷಾಂತರ ಅಧ್ಯಯನ ವಿಭಾಗ ಅಲುಮ್ನಿ(ಹಳೆ ವಿದ್ಯಾರ್ಥಿಗಳ ಸಂಘ) ಇವರ ಸಹಯೋಗದಲ್ಲಿ ಮೂರು ದಿನಗಳ ಭಾಷಾಂತರ ತರಬೇತಿ ಕಮ್ಮಟದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಭಾಷಾಂತರಕ್ಕೆ ಭಾಷೆಯ ಕಲಿಕೆ ಮುಖ್ಯವಾಗುತ್ತದೆ. ಇಂದಿನ ದಿನಮಾನಗಳಲ್ಲಿ ಪ್ರತಿ ಹಂತದಲ್ಲೂ ಇಂಗ್ಲಿಷ್ ಬಳಕೆ ಅನಿವಾರ್ಯವಾಗಿದೆಯೆಂದು ಮೂರು ದಿನಗಳ ಕಾಲ ನಡೆದ ಭಾಷಾಂತರ ತರಬೇತಿ ಕಮ್ಮಟದ ಸಮಾರೋಪದ ಅಧ್ಯಕ್ಷತೆ ವಹಿಸಿ ಡಾ. ಎ. ಮೋಹನ ಕುಂಟಾರ್ ಅವರು ಮಾತನಾಡಿದರು. ಗ್ರಾಮೀಣ ಹಿನ್ನೆಲೆಯ ಅನೇಕ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಬಳಕೆ ಬಗೆಗೆ ಸಂಕೋಚ ಭಾವನೆಯಿರುತ್ತದೆ. ಇದನ್ನು ಮೀರಿ ವಿದ್ಯಾರ್ಥಿಗಳು ವ್ಯವಹರಿಸಲು ಸಮರ್ಥರಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಕಮ್ಮಟವನ್ನು ಆಯೋಜಿಸಿದ್ದು, ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿದಂತಾಗಿದೆ ಎಂದು ಅವರು ಹೇಳಿದರು. ಕನ್ನಡ ವಿಶ್ವವಿದ್ಯಾಲಯದ ಮೊದಲ ಸೆಮಿಸ್ಟರ್ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ನಡೆಸಲಾದ ಭಾಷಾಂತರ ತರಬೇತಿ ಕಮ್ಮಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಕರಿಬಸವರಾಜ್, ಸರಸ್ವತಿ, ಕವಿತ ಎಂ., ಬಸವರಾಜ ಬೇಲೂರ್, ತಿಮ್ಮಪ್ಪ ಇವರು ತಮ್ಮ ಅನಿಸಿಕೆಗಳನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು. ಸರಳವಾಗಿ ಇಂಗ್ಲಿಷ್ ಕಲಿಯುವ ಭರವಸೆ ಮೂಡಿಸಿ - ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತಿದೆ- ಇಂಗ್ಲಿಷ್ ಗ್ರಾಮರ್ ಕಲಿಕೆಗೆ ಆಸಕ್ತಿ ಹೆಚ್ಚಿದೆ. ಇತ್ಯಾದಿ ಕಮ್ಮಟದ ಪ್ರಯೋಜನಕಾರಿಯಾದ ಬಗೆಗೆ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಕೇಂದ್ರ, ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ಭಾಷಾಂತರ ಅಧ್ಯಯನ ವಿಭಾಗದ ಅಲುಮ್ನಿ ಸಹಯೋಗದೊಂದಿಗೆ ದಿನಾಂಕ 07 ರಿಂದ 09 ರ ವರೆಗೆ ನಡೆದ ಈ ಕಮ್ಮಟದಲ್ಲಿ ಡಾ. ಪ್ರದೀಪ್, ಚಿತ್ರದುರ್ಗ ಹಾಗೂ ಡಾ. ದೀಪಾ ಬಗಾಡೆ, ಹಾವೇರಿ ಸಂಪನ್ಮೂಲ ವಿದ್ವಾಂಸರಾಗಿ ಭಾಗವಹಿಸಿದ್ದರು. ಐಕ್ಯುಎಸಿ ಸಹಾಯಕ ನಿರ್ದೇಶಕರಾದ  ಡಿ. ಪ್ರಭಾ ಸ್ವಾಗತಿಸಿದರು. ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳು ಕಮ್ಮಟಾರ್ಥಿಗಳಾಗಿ ಭಾಗವಹಿಸಿದರು.