ರಾಷ್ಟ್ರೀಯ ಸ್ವಯಂ ಸೇವಾ ಶಿಬಿರದ ಸಮಾರೋಪ ಸಮಾರಂಭ
Closing ceremony of the National Volunteer Camp
ಸಂಬರಗಿ, 16: ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯು ರಾಷ್ಟ್ರ ಕಟ್ಟುವಲ್ಲಿ ಮುಖ್ಯ ಪಾತ್ರವಹಿಸುತ್ತದೆ, ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಉನ್ನತ ಕನಸು ಕಾಣಬೇಕು, ಅದು ನನಸಾಗಿಸಲು ಸತತವಾಗಿ ಶ್ರಮಿಸಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಥಣಿಯ ಸಿ ಡಿ ಸಿ ಸದಸ್ಯ ಅಭಿಯಂತರಾದ ಅರುಣ ಯಲಗುದ್ರಿ ಹೇಳಿದರು
ಖಿಳೆಗಾಂವ ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಥಣಿಯ ರಾಷ್ಟ್ರೀಯ ಸ್ವಯಂ ಸೇವಾ ಶಿಬಿರದ ಸಮಾರೋಪ ಸಮಾರಂಭ ಶ್ರೀ ಬಸವೇಶ್ವರ ದೇವಸ್ಥಾನ ಖಿಳೇಗಾವದಲ್ಲಿ ನಡೆಯಿತು. ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡುಶ್ರೀ ಯಲಗುದ್ರಿ ಮಾತನಾಡಿ ದೇಶ ಕಟ್ಟುವ ಸೇವೆಯಲ್ಲಿ ಪಾಲ್ಗೊಂಡು ಸೇವೆ ಮಾಡುತ್ತಿರುವಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಥಣಿಯ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ವಿದ್ಯಾರ್ಥಿಗಳ ಸೇವೆ ಶ್ಲಾಘನೀಯ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಶ್ರೀ ಮುರಗೇಶ ಬಾನಿ ಪೂಜಾರಿಗಳು ಬಸವೇಶ್ವರ ದೇವಸ್ಥಾನ ಸಮಿತಿಯವರು ಮಾತನಾಡಿದರು. ಈ ವೇಳೆ ಅತಿಥಿಗಳಾಗಿ ಪ್ರೋ ಸಂತೋಷ ಉಂಡಾಡಿ, ಪ್ರೊ ಪ್ರವೀಣ ತುಬಚಿ, ಡಾ.ರಾವಸಾಬ ಅಂಬಿ, ಪ್ರೋ ಸಿದ್ದಪ್ಪ ಕುಡ್ದಣ್ಣವರ, ಪ್ರೋ ನಚಿಕೆತ ನೂಲಿ, ಧರೆಪ್ಪ ಪೂಜಾರಿ, ಕಿರಣ ಜಗಳಗಟ್ಟಿ ಪ್ರೊ ಶ್ರೀಶೈಲ್ ದೇವರಡ್ಡಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಘಟಕ-1 ಸಂಯೋಜನೆ ಅಧಿಕಾರಿಯಾದ ಡಾ.ಹರೀಶ ನಿರೂಪಿಸಿದರು ಘಟಕ-2 ಸಂಯೋಜನೆ ಅಧಿಕಾರಿ ಪ್ರೊ. ಸುರೇಖಾ ದೇವರಡ್ಡಿ ವಂದಿಸಿದರು.
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ 