ವಿಜಯದಶಮಿ ಉತ್ಸವ ಹಾಗೂ ಪಥಸಂಚಲನದ ಸಮಾರೋಪ ಸಮಾರಂಭ

 ವಿಜಯದಶಮಿ ಉತ್ಸವ ಹಾಗೂ ಪಥಸಂಚಲನದ ಸಮಾರೋಪ ಸಮಾರಂಭ Closing ceremony of Vijayadashami festival and procession

ಲೋಕದರ್ಶನ ವರದಿ 

  

ವಿಜಯದಶಮಿ ಉತ್ಸವ ಹಾಗೂ ಪಥಸಂಚಲನದ ಸಮಾರೋಪ ಸಮಾರಂಭ  

ಜಮಖಂಡಿ  12: ಜಿಹಾದಿ ಶಕ್ತಿಗಳು, ಕಮ್ಯುನಿಷ್ಟರು, ಜಾತಿಗಳನ್ನು ಒಡೆಯುವಂತಹ ಜಾತಿಗಣತಿಯ ನೀತಿಗಳಿಂದ ಎಚ್ಚರಿಕೆಯಿಂದ ಇರಬೇಕು, ಹಿಂದು ಸಮಾಜ ಜಾತಿ, ಸ್ವಾರ್ಥಭಾವನೆ ಬಿಟ್ಟು ಸಂಘಟಿತವಾಗಿ ಹೋರಾಟ ಮಾಡುವ ಅವಶ್ಯಕತೆ ಇದೆ. ಸಮಾಜ ಒಗ್ಗಟ್ಟಾದರೆ ಯಾರಿಂದಲೂ ಏನೂ ಮಾಡಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಕರ್ನಾಟಕದ ಸಹ ಪ್ರಾಂತ ಪ್ರಚಾರಕ ಶ್ರೀನಿವಾಸ ಹೇಳಿದರು. 

ನಗರದ ಚೌಡಯ್ಯ ನಗರದ ಸಮಸ್ಕಾರ ಮಂಡಳಿಯ ಮೈದಾನದಲ್ಲಿ ನಡೆದ ವಿಜಯದಶಮಿ ಉತ್ಸವ ಹಾಗೂ ಪಥಸಂಚಲನದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಸಮಾಜ ಒಡಕಾದರೇ ವಿಭಜನೆಯಾಗುತ್ತದೆ ಎಂಬ ಸತ್ಯವನ್ನು ಅರಿತು ಕೊಳ್ಳಬೇಕು ಅದಕ್ಕಾಗಿ ಪ್ರತಿಯೊಬ್ಬ ಸ್ವಯಂ ಸೇವಕ ತಮ್ಮ ಮನೆಗಳಿಂದ ಇಂಥಹ ವಿಚಾರಗಳನ್ನು ಸತ್ಸಂಗದ ಮೂಲಕ ತಿಳಿಸಬೇಕು ಎಂದರು. 

ನಮ್ಮಲ್ಲಿ ವಯಕ್ತಿಕ ಚಾರಿತ್ರ್ಯ, ದೈವ ಭಕ್ತಿ ಎಲ್ಲವು ಇದೆ. ಆದರೆ ರಾಷ್ಟ್ರಚಾರಿತ್ಯ್ರದ ಕೊರತೆ ಇದೆ ಇದರಿಂದ ನಮ್ಮವರಿಂದಲೇ ನಮ್ಮ ಸಮಾಕ್ಕೆ ಹಾನಿಯಾಗಿದೆ. ಮತ್ತೊಂದು ಧರ್ಮದವರಿಗೆ ನೋವಾಗುತ್ತದೆ ಎಂದು ಹೇಳುವರೇ ಹಿಂದುಗಳು. ಇದರಿಂದ ನಮ್ಮ ಸಮಾಜ ಹಿಂದುಳಿಯಲು ಕಾರಣವಾಗಿದೆ. ಹಿಂದುಗಳೆಲ್ಲರೂ ಒಂದೇ ಎಂಬ ಭಾವನೆ ಬರಬೇಕು. ಇದನ್ನೇ ಮನೋಭಾವವಿಟ್ಟುಕೊಂಡು ಸಂಘ ಕೆಲಸ ಮಾಡುತ್ತಿದೆ. 1.5ಲಕ್ಷಕ್ಕೂ ಹೆಚ್ಚು ಸೇವಾಕಾರ್ಯಗಳು ನಡೆಯುತ್ತಿವೆ. 48 ವಿವಿಧ ಸಂಘದ ಪರಿವಾರಗಳು ಕಾರ್ಯನಿರತವಾಗಿವೆ. ಬಲಿಷ್ಟ ಹಿಂದೂ ಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬ ಹಿಂದು ತನ್ನ ಸ್ವಾರ್ಥಬಿಟ್ಟು ದೇಶ ಮೊದಲು ಎಂಬ ಮನೋಭಾವದಿಂದ ಒಗ್ಗಟ್ಟಾಗಬೇಕು ಎಂದರು. 

ಪಥಸಂಚಲನ;  

ನಮಸ್ಕಾರ ಮಂಡಳಿ ವತಿಯಿಂದ ನಗರದ ಕುಂಚನೂರು ರಸ್ತೆಯಿಂದ ಎರಡು ಪ್ರತ್ಯೇಕ ತಂಡಗಳಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಯಿತು. ರಸ್ತೆಯುದ್ದಕ್ಕೂ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದರು. 8 ಘೋಷವಾದ್ಯ ಮೇಳಗಳು, ರಾಷ್ಟ್ರೀಯ ಸ್ವಯಂ ಸೇವಕರು 5 ಸಾವಿರಕ್ಕೂ ಅಧಿಕ ಜನ ಗಣವೇಶಧಾರಿಗಳು ಪಥಸಂಚಲನದಲ್ಲಿ ಭಾಗವಹಿಸಿದ್ದರು. ರಸ್ತೆಗಳನ್ನು ತೋರಣ, ರಂಗೋಲಿಗಳಿಂದ ಅಲಂಕರಿಸಲಾಗಿತು.್ತ ಪುಟ್ಟ ಮಕ್ಕಳು ಭಾರತ ಮಾತೆಯ ಅಲಂಕಾರ ಮಾಡಿಕೊಂಡಿದ್ದರು. ಅಶೋಕ ವೃತ್ತದಲ್ಲಿ ಎರಡು ತಂಡಗಳ ಸಮಾಗಮವಾಗಿ ಅಲ್ಲಿಂದ ನಮಸ್ಕಾರ ಮಂಡಳಿಯ ಆವರಣದ ವರೆಗೆ ಪಥಸಂಚಲನ ನಡೆಯಿತು. ಪೊಲೀಸರು ಬಿಗಿ ಬಂದೊಬಸ್ತ ಏರಿ​‍್ಡಸಿದ್ದರು. 

ಧರ್ಮ ಧರೆಗಿಳಿದು ವಿಶ್ವರೂಪವೇ ಆಗಿದೆ ಹಿಂದು ಸಂಗಮ ಎಂಬ ವೇದಿಕೆಯಲ್ಲಿ ಕಲ್ಯಾಣಮಠದ ಗೌರಿಶಂಕರ ಶ್ರೀಗಳು, ಓಲೆಮಠದ ಆನಂದದೇವರು, ರುದ್ರಾವದೂತ ಮಠದ ಕೃಷ್ಣಾನಂದ ಅವಧೂತರು, ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಶ್ರೀಗಳು, ಮೈಗೂರಿನ ಗುರುಪ್ರಸಾದ ಶ್ರೀಗಳು, ಕುಂಚನೂರಿನ ಸಿದ್ಧಲಿಂಗ ದೇವರು, ವಿಶ್ವನಾಥ ಶಾಸ್ತ್ರಿ ಶ್ರೀಗಳು, ಜಕನೂರಿನ ಮಾಧುಲಿಂಗ ಮಹಾರಾಜರು, ವಿಜಯಪುರ ವಿಭಾಗ ಸಂಘಚಾಲಕ ವಿಜಯಕುಮಾರ ಕರಮರಕರ ಸೇರಿದಂತೆ ಇತರರು ಇದ್ದರು. 

ಶಿವಲಿಂಗ ಕಮತನವರ ನಿರೂಪಿಸಿದರು. ನಗರ ಕಾರ್ಯವಾಹ ಮಲ್ಲಿಕಾರ್ಜುನ ಇಂಗಳಗಾವಿ ಸ್ವಾಗತಿಸಿದರು. ನಿಂಗರಾಜ ಸಂಕರೆಡ್ಡಿ ಪರಿಚಯ ಮಾಡಿದರು. ಹರೀಶ ಪವಾರ, ರಾಘವೇಂದ್ರ ಕಲ್ಲೂರ ವಯಕ್ತಿಕ ಗೀತೆ ಹಾಡಿದರು. ವಿಜಯ ಮಡಿವಾಳ ವಂದಿಸಿದರು. ನಾಗರಾಜ ಅಮೃತ ವಚನ ಹೇಳಿದರು.  

ಪೋಟೋ : ಎ, ಬಿ,  

ಜಮಖಂಡಿ ನಗರದ ಸಮಸ್ಕಾರ ಮಂಡಳಿಯ ಮೈದಾನದಲ್ಲಿ ವಿಜಯದಶಮಿ ಉತ್ಸವ ಹಾಗೂ ಪಥಸಂಚಲನದ ಸಮಾರೋಪ ಸಮಾರಂಭ ಉದ್ದೇಶಿಸಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಕರ್ನಾಟಕದ ಸಹ ಪ್ರಾಂತ ಪ್ರಚಾರಕ ಶ್ರೀನಿವಾಸ ಮಾತನಾಡಿದರು.