ಲೋಕದರ್ಶನ ವರದಿ
ಬೆಳಗಾವಿ 17: ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ಜಿಲ್ಲೆಯ ಆಸಕ್ತ ನಿರುದ್ಯೋಗ ಯುವಕರಿಗೆ ಹಮ್ಮಿಕೋಂಡಂತಹ 30 ದಿನದ ಉಚಿತ ಮೋಟಾರ ರಿವೈಂಡಿಂಗ್ ಮತ್ತು ಪಂಪ್ ಸೇಟ್ ತರಬೇತಿಯನ್ನು ಹಮ್ಮಿಕೊಂಡಿದ್ದು ಅದರ ಸಮಾರೋಪ ಸಮಾರಂಭ ದಿ. 15ರಂದು ಜರುಗಿತು.
ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿದಂತದ ವಸಂತ ಶಂಭು ಶಂಕರ ಪ್ರಬಂಧಕರು ಗ್ರಾಮೀಣಾಭಿವೃದ್ಧಿ ಸಿಂಡಿಕೇಟ್ ಬ್ಯಾಂಕ್ ಕ್ಷೇತ್ರೀಯ ಕಾಯರ್ಾಲಯ ಮಾರುತಿ ಗಲ್ಲಿ, ಬೆಳಗಾವಿ. ಇವರು ಮಾತನಾಡಿ ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯು ನಿಮಗೆ ಒಂದು ತಿಂಗಳ ಉತ್ತಮ ರೀತಿಯ ತರಬೇತಿಯನ್ನು ನೀಡಿದೆ ಅಲ್ಲಿ ಪಡೆದ ವಿದ್ಯೆಯನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸ್ವಾವಲಂಬಿಗಳಾಗಿ ಉತ್ತಮ ರೀತಿಯಲ್ಲಿ ಸ್ವ-ಉದ್ಯೋಗಿಯಾಗಿ ಮುಂದುವರೆಯಿರಿ ಮತ್ತು ಸ್ವ ಉದ್ಯೋಗ ಮಾಡುವಾಗ ಅತೀ ಕಡಿಮೆ ಬಂಡವಾಳದಲ್ಲಿ ಮೊದಲು ಉದ್ಯೋಗವನ್ನು ಪ್ರಾರಂಬಿಸಿ ನಂತರದ ದಿನಗಳಲ್ಲಿ ಅದನ್ನು ದೋಡ್ಡಮಟ್ಟಕ್ಕೆ ಕೂಂಡೊಯಿರಿ ಮತ್ತು ಜೀವನದಲ್ಲಿ ಯಾವುದೇ ದುಚ್ಚಟಗಳಿಗೆ ಬಲಿಯಾಗದೆ ಒಳ್ಳೆಯ ಮಾರ್ಗದಲ್ಲಿ ಸಾಗಿ ಯಶಸ್ವಿ ಉದ್ಯಮಿಯಾಗಿ ಇತರರಿಗೆ ಮಾರ್ಗದರ್ಶಕರಾಗಿರಿ ಎಂದು ಶುಭ ಕೋರಿದರು.
ತರಬೇತಿಯ ಸಂಪನ್ಮೂಲ ವ್ಯಕ್ತಿಯಾದ ನಾಗರಾಜ ಬಡಕುರಿ ಅವರು ಮಾತನಾಡಿ ತರಬೇತಿಯನ್ನು ತಾವೆಲ್ಲರೂ ಅತೀ ಉತ್ಸಾಹದಿಂದ ಪಡೆದಿದ್ದಿರಿ ಆದರೆ ನಿಮ್ಮ ನಿಜವಾದ ಕೆಲಸ ಇನ್ನೂ ಮುಂದೆ ಪ್ರಾರಂಭವಾಗುತ್ತದೆ. ತಾವೆಲ್ಲರೂ ಈ ಸಂಸ್ಥೆಯಿಂದ ಉತ್ತಮವಾದ ವಿದ್ಯೆಯನ್ನು ಕಲಿತಿದ್ದೀರಿ. ಅದನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಿ ಹಾಗೂ ಕಲಿತದ್ದನ್ನು ಇನ್ನಿತರರಿಗೂ ಕಲಿಸಿಕೊಡಿ ಇದರಿಂದ ನಿಮ್ಮ ಜ್ಞಾನ ಇನ್ನೂ ಹೆಚ್ಚಾಗುತ್ತದೆ ಮತ್ತು ಜೀವನದಲ್ಲಿ ತಾಳ್ಮೆಯಿಂದ ಇದ್ದರೆ ಎಲ್ಲವನ್ನು ಪಡೆಯಲು ಮತ್ತು ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದಂತ ಸಂಸ್ಥೆಯ ನಿದರ್ೇಶಕರಾದ ಲಕ್ಷ್ಮಿಕಾಂತ ಪಾಟೀಲ ಇವರು ಶಿಬಿರಾಥರ್ಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಕಲಿತಿರುವ ತರಬೇತಿಗೆ ಅನುಗುಣವಾಗಿ ಸ್ವ ಉದ್ಯೋಗವನ್ನು ಪ್ರಾರಂಭಿಸಿರಿ, ತರಬೇತಿಯ ನಂತರವೂ ಸಂಸ್ಥೆಯೊಂದಿಗೆ ಸಂಪರ್ಕದಲಿರಿ, ವೃತ್ತಿ ಜೀವನದಲ್ಲಿ ಬ್ಯಾಂಕಿನ ಯೋಜನೆಗಳ ಹಾಗೂ ಸೌಲಭ್ಯಗಳ ಬಗ್ಗೆ ಮಾಹಿತಿ ಬೇಕಾದಲ್ಲಿ ಯಾವುದೇ ಸಂಕೋಚವಿಲ್ಲದೇ ಸಂಸ್ಥೆಯನ್ನು ಸಂಪಕರ್ಿಸಿ ಹಾಗೂ ಮಾರ್ಗದರ್ಶನ ಸಲಹೆ ಸೂಚನೆಯನ್ನು ಪಡೆದು ಉತ್ತಮ ಯಶಸ್ವಿ ಉದ್ಯಮಿಯಾಗಿ ಬೆಳೆಯಿರಿ ಎಂದು ತಿಳಿಸಿದರು.
ಕೊನೆಯದಾಗಿ ತರಬೇತಿಯಲ್ಲಿ ಪಾಲ್ಗೊಂಡ ಶಿಭಿರರ್ಾಥಿಗಳು ಉತ್ಸಾಹದಿಂದ ಕಲಿಕೆಯ ಅನುಭವ ಮತ್ತು ಅನಿಸಿಕೆಗಳನ್ನು ಹಂಚಿಕೊಂಡರು, ನಂತರ ಅಧ್ಯಕ್ಷರಿಂದ ಶಿಬಿರಾಥರ್ಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು, ಸಂಸ್ಥೆಯ ಉಪನ್ಯಾಸಕ ಚಂದ್ರಕಾಂತ ಹಿರೇಮಠ ಇವರು ಕಾರ್ಯಕ್ರಮವನ್ನು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಸಂಸ್ಥೆಯ ಸಿಬ್ಬಂದಿ ಅಬ್ದ್ಲುಲ್ ರಜಾಕ್ ಉಪಸ್ಥಿತರಿದ್ದರು.