ಲೋಕದರ್ಶನ ವರದಿ
ಬೆಳಗಾವಿ 12: ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಬೆಳಗಾವಿ ಮತ್ತು ಕೇಂದ್ರ ಸಕರ್ಾರದ ಗ್ರಾಮೀಣ ಅಭಿವೃಧ್ದಿ ಸಚಿವಾಲಯ ಇವರ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ಜಿಲ್ಲೆಯ ಸ್ವ ಉದ್ಯೋಗ ಆಸಕ್ತ ಮಹಿಳೆಯರಿಗೆ 6 ದಿನಗಳ ಉಚಿತ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯನ್ನು ಹಮ್ಮಿಕೊಂಡಿದ್ದು ಅದರ ಸಮಾರೋಪ ಸಮಾರಂಭವನ್ನು ದಿ.11ರಂದು ಜರುಗಿತು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಸಂಸ್ಥೆಯ ನಿದರ್ೆಶಕ ಲಕ್ಷ್ಮಿಕಾಂತ ಪಾಟೀಲ ಇವರು ಮಾತನಾಡುತ್ತಾ, ತಾವೆಲ್ಲರೂ ನಮ್ಮ ಸಂಸ್ಥೆಯ ವತಿಯಿಂದ ತರಬೇತಿಯನ್ನು ಪಡೆದಿರುವಿರಿ, ಆದರೆ ಕೇವಲ ತರಬೇತಿ ಪಡೆದರೆ ಮಾತ್ರ ಸಾಲದು, ಇಲ್ಲಿ ಕಲಿತಿರುವುದು ಕೇವಲ ಒಂದು ಬಿಂದುವಿನಷ್ಟು ಮಾತ್ರ, ಆದರೆ ಕಲಿಯುವುದು ಇನ್ನೂ ಸಾಗರದಷ್ಟಿದೇ. ಆದ ಕಾರಣ ಕಲಿತಿರುವುದನ್ನು ವ್ಯವಸ್ಥಿತ ರೀತಿಯಲ್ಲಿ ಕೆಲಸದಲ್ಲಿ ಬಳಸಿಕೊಂಡು, ಶ್ರಮವಹಿಸಿ ಶ್ರದ್ಧೆಯಿಂದ ಕೆಲಸಮಾಡಿ, ಕೌಶಲ್ಯ ಅರಿತಂತಹ ವ್ಯಕ್ತಿ ಸ್ವ ಉದ್ಯೋಗ ಮಾಡಬಹುದು ಎಂದು ತಿಳಿಸಿದರು. ಬ್ಯಾಂಕಿನ ಎಲ್ಲ ವ್ಯವಹಾರಗಳ ಬಗ್ಗೆ ತಿಳಿದುಕೊಳ್ಳಿ, ಹಾಗೂ ಅವಶ್ಯವಿರುವಷ್ಟೆ ಸಾಲವನ್ನು ಪಡೆಯಿರಿ. ಅನಾವಶ್ಯಕವಾಗಿ ಸಾಲವನ್ನು ಪಡೆದು ಸಾಲದ ಭಾದೆಗೆ ಬಲಿಯಾಗಬೇಡಿ, ಹಾಗೂ ಎಲ್ಲದಕ್ಕೂ ಸಾಲವೇ ಉತ್ತರವಾಗಬಾರದು ಎಂದು ತಿಳಿಸಿದರು. ಹಾಗೂ ತರಬೇತಿಯ ಸಂಪೂರ್ಣ ಉಪಯೋಗವನ್ನು ಪಡೆದುಕೊಂಡು ದೊಡ್ಡ ಮಟ್ಟದ ಉದ್ಯಮಿಗಳಾಗಿ ಬೆಳೆಯಿರಿ ಎಂದು ಶುಭ ಹಾರೈಸಿದರು.
ಕೊನೆಯದಾಗಿ ತರಬೇತಿಯಲ್ಲಿ ಪಾಲ್ಗೊಂಡ ಶಿಭಿರರ್ಾಥಿಗಳು ಉತ್ಸಾಹದಿಂದ ಕಲಿಕೆಯ ಅನುಭವ ಮತ್ತು ಅನಿಸಿಕೆಗಳನ್ನು ಹಂಚಿಕೊಂಡರು, ನಂತರ ಮುಖ್ಯ ಅಥಿತಿಗಳಿಂದ ಶಿಬಿರಾಥರ್ಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು, ಸಂಸ್ಥೆಯ ಉಪನ್ಯಾಸಕಿ ರಾಜೇಶ್ವರಿ ದೇವಲಾಪೂರ ಇವರು ನಿರೂಪಿಸಿ ವಂದಿಸಿದರು. ಸಂಸ್ಥೆಯ ಸಿಬ್ಬಂದಿಯವರಾದ ಬಸವರಾಜ ಕುಬಸದ ಅಬ್ಬುಲ್ ರಜಾಕ ಉಪಸ್ಥಿತರಿದ್ದರು.