ಮಹಾಲಿಂಗಪುರ29 :ನಗರದ ಬಸವೇಶ್ವರ ಸರ್ಕಲ ಪಕ್ಕದ ಜತ್ತ- ಜಾಂಬೋಟಿ ರಾಜ್ಯ ಮಾರ್ಗದಲ್ಲಿರುವ ಮಹಬೂಬ ಸುಭಾನಿ ದಗರ್ಾ ಹಾಗೂ ಸುಭಾನಿ ಮಸ್ಜಿದ ತೆರವುಗೊಳಿಸುವ ಕಾರ್ಯವು ಜ.29ರಂದು ಬುಧವಾರ ಬೆಳಗ್ಗೆ ನಡೆಯಿತು.
ದೇಶಾದ್ಯಂತ ಸುಪ್ರೀಂಕೋಟರ್್ ಆದೇಶದ ಅನುಸಾರವಾಗಿ ಗುಡಿ ಗುಂಡಾರ, ಮಸ್ಜಿದ, ದಗರ್ಾ, ಗುರುದ್ವಾರ, ಚರ್ಚ, ಇನ್ನೀತರೆ ಅಕ್ರಮವಾಗಿ ಕಟ್ಟಿಕೊಂಡಂತಹ ಕಟ್ಟಡ ಹಾಗೂ ಸೆಡ್ ಗಳನ್ನು ತೆರವುಗೊಳಿಸಲಾಗುತ್ತಿರುವುದರ ಪ್ರಯುಕ್ತವಾಗಿ ತಾಲೂಕಾಢಳಿತವು ಮಹಾಲಿಂಗಪೂರ ಪುರಸಭೆಯ ಸಹಯೋಗದಲ್ಲಿ ತೆರವು ಕಾರ್ಯವನ್ನು ಹಮ್ಮಿಕೊಂಡಿತ್ತು.
ರಬಕವಿ ಬನಹಟ್ಟಿ ತಾಲೂಕಿನ ತಹಶೀಲ್ದಾರ ಮುಂದಾಳತ್ವದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಬಾಬುರಾವ ಕಮತಗಿ ಹಾಗೂ ಸಿಬ್ಬಂದಿ, ಅರಣ್ಯ ಇಲಾಖೆ, ಪಿಡಬ್ಲ್ಯೂಡಿ ಇಲಾಖೆಗೆಗಳು ಈ ಕಾಯರ್ಾಚರಣೆಯಲ್ಲಿ ಪಾಲ್ಗೊಂಡಿದ್ದವು. ಇದಕ್ಕೆ ನಗರ ಠಾಣೆಯ ಠಾಣಾಧಿಕಾರಿ ರಾಜು ಬೀಳಗಿ ಹಾಗೂ ಅವರ ಸಿಬ್ಬಂದಿ ವರ್ಗದವರು ಸೂಕ್ತ ಭದ್ರತೆಯನ್ನು ಒದಗಿಸುವ ಮೂಲಕ ಸತತವಾಗಿ 8-9 ಘಂಟೆಗಳವರೆಗೆ ಕಾರ್ಯ ನಿರ್ವಹಿಸಿ ತೆರವು ಕಾರ್ಯವನ್ನು ಯಶಸ್ವಿಗೊಳಿಸಿದರು.
ದೇಶದಲ್ಲಿರುವ ಅಕ್ರಮ ಕಟ್ಟಡಗಳ ತೆರವುಗೊಳಿಸಬೇಕೆಂದು ಸುಪ್ರೀಂಕೋರ್ಟ ಆದೇಶವನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನ ,ಮಸ್ಜಿದ, ಚಚರ್್, ಗುರುದ್ವಾರ ಯಾವುದನ್ನೂ ಲೆಕ್ಕಿಸದೆ ದೇಶದೆಲ್ಲೆಡೆ ತೆರವುಗೊಳಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಪುರಸಭೆ ಸಹಯೋಗದಲ್ಲಿ ನಾವು ಕಾರ್ಯ ಕೈಗೊಂಡಿದ್ದೇವೆ. ಬಾಗಲಕೋಟ ಜಿಲ್ಲೆಯಲ್ಲಿಯೆ ನಾವು ಪ್ರಥಮವಾಗಿ ಕಾರ್ಯವನ್ನು ಹಮ್ಮಿಕೊಂಡಿದ್ದು ಇದರಲ್ಲಿ ತಾಲೂಕಿನ ಏಳು ಸ್ಥಳಗಳಲ್ಲಿ ಅನಧಿಕೃತವಾಗಿ ಆಕ್ರಮಿಸಿಕೊಂಡ ಐದು ಕಡೆಯಲ್ಲಿನ ಕಟ್ಟಡಗಳನ್ನು ತೆರವುಗೊಳಿಸಿದ್ದೇವೆ. ಉಳಿದ ಕಡೆಗೂ ತೆರವು ಕಾರ್ಯವನ್ನೂ ಕೈಗೊಳ್ಳುತ್ತೇವೆ. ಈ ಕಾಯರ್ಾಚರಣೆಯಲ್ಲಿ ತೊಡಗಿದ ಎಲ್ಲ ಇಲಾಖೆಗಳಿಗೆ ಮತ್ತು ಸಹಕರಿಸಿದ ಸಾರ್ವಜನಿಕರಿಗೂ ಧನ್ಯವಾದಗಳು.
-ಪ್ರಶಾಂತ ಚನಗೊಂಡ
ರಬಕವಿ ಬನಹಟ್ಟಿ ತಾಲೂಕಿನ ಕಂದಾಯ ಅಧಿಕಾ