ಬೆಂಗಳೂರು
ಡಿ.24,ಹೊಸ ವರ್ಷದ ಆಚರಣೆಗಾಗಿ ಬೇರೆ ಪ್ರದೇಶಕ್ಕೆ ಹಾರಲು ಸಿದ್ದರಿರುವ ಗ್ರಾಹಕರ ಅನುಕೂಲಕ್ಕಾಗಿ
ಕ್ಲಿಯರ್ ಟ್ರಿಪ್ ಸಂಸ್ಥೆಯು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಟಿಕೆಟ್ ಮೇಲೆ ರೂ. 10000 ವರೆಗೆ
ಕ್ಯಾಶ್ ಬ್ಯಾಕ್ ಘೋಷಿಸಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ನ ಕ್ರೆಡಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆ
ಮಾಡಿದರೆ ಕ್ಲಿಯರ್ ಟ್ರಿಪ್ ಆಫರ್ ಕೂಡ ನೀಡುತ್ತಿದೆ. ಇತ್ತೀಚೆಗೆ ಪೇ ಬ್ಯಾಕ್ ಸಂಸ್ಥೆಯೊಂದಿಗೆ ಕ್ಲಿಯರ್
ಟ್ರಿಪ್ ಒಪ್ಪಂದ ಕೂಡ ಮಾಡಿಕೊಂಡಿದೆ. ಇದರ ಪರಿಣಾಮ ಗ್ರಾಹಕರು ಕ್ಲಿಯರ್ ಟ್ರಿಪ್ ವೇದಿಕೆ ಮೂಲಕ ಟಿಕೆಟ್
ಬುಕಿಂಗ್ ಮಾಡಿದರೆ ಪಾಯಿಂಟ್ ಗಳನ್ನು ಗಳಿಸಬಹುದು ಮತ್ತು ಇದನ್ನು ರಿಡೀಮ್ ಕೂಡ ಮಾಡಿಕೊಳ್ಳಬಹುದು
ಎಂದು ಪ್ರಕಟಣೆ ತಿಳಿಸಿದೆ.