ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ನ್ಯಾಷನಲ್ ಹೆರಾಲ್ಡ್ ಪತ್ರಿಕಾ ಕಚೇರಿಯ ಭೋಗ್ಯದ ಅವಧಿಯನ್ನು ಮುಕ್ತಾಯಗೊಳಿಸಿದ ಕೇಂದ್ರ ಸಕರ್ಾರದ ನಿಧರ್ಾರ ಪ್ರಶ್ನಿಸಿ, ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್(ಎಜೆಎಲ್) ಸಲ್ಲಿಸಿದ್ದ ಅಜರ್ಿಯನ್ನು ಶುಕ್ರವಾರ ದೆಹಲಿ ಹೈಕೋಟರ್್ ವಜಾಗೊಳಿಸಿದೆ. ಎಜೆಎಲ್ ಅಜರ್ಿಯನ್ನು ವಜಾಗೊಳಿಸಿದ ನ್ಯಾಯಮೂತರ್ಿ ಸುನೀಲ್ ಗೌರ್ ಅವರು, ಎರಡು ವಾರಗಳಲ್ಲಿ ಕಚೇರಿಯನ್ನು ತೆರವುಗೊಳಿಸುವಂತೆ ಆದೇಶಿಸಿದ್ದಾರೆ.
ಎಜೆಎಲ್ ಸಂಸ್ಥೆಯು 56 ವರ್ಷಗಳಿಂದ ಇಲ್ಲಿ ಕಚೇರಿಯನ್ನು ಭೋಗ್ಯಕ್ಕೆ ಪಡೆದು ಪತ್ರಿಕೆ ನಡೆಸುತ್ತಿತ್ತು. ಆದರೆ ಕಳೆದ 10 ವರ್ಷಗಳಿಂದ ಕಟ್ಟಡದ ಕಚೇರಿಯಲ್ಲಿ ಯಾವುದೇ ಪತ್ರಿಕೆ ಕಾರ್ಯನಿರ್ವಹಿಸುತ್ತಿಲ್ಲ. ಇದು ಭೋಗ್ಯದ ಕರಾರಿನ ಸ್ಪಷ್ಟ ಉಲ್ಲಂಘನೆ. ಆದ್ದರಿಂದ ನವೆಂಬರ್ 15ರೊಳಗೆ ಕಚೇರಿಯನ್ನು ತೆರವುಗೊಳಿಸಿ, ಅದನ್ನು ಕೇಂದ್ರ ಸಕರ್ಾರದ ವಶಕ್ಕೆ ಒಪ್ಪಿಸುವಂತೆ ಅಕ್ಟೋಬರ್ 30ರಂದು ನಗರಾಭಿವೃದ್ಧಿ ಸಚಿವಾಲಯ ಆದೇಶಿಸಿತ್ತು.
ನಗರಾಭಿವೃದ್ಧಿ ಸಚಿವಾಲಯದ ಈ ಆದೇಶ ಪ್ರಶ್ನಿಸಿ ಎಜೆಎಲ್ ಸಂಸ್ಥೆ ಹೈಕೋಟರ್್ ಮೊರೆ ಹೋಗಿತ್ತು.