ಹಿಂದೂ ಸಂಘಟನೆಗಳಿಂದ ಸ್ವಚ್ಛತಾ ಕಾರ್ಯ

ಲೋಕದರ್ಶವರದಿ

ಮಹಾಲಿಂಗಪೂರ : ಸಮೀಪದ ನೆರೆ ಸಂತ್ರಸ್ತ ಗ್ರಾಮ  ಢವಳೇಶ್ವರ್ ದೇಶಪಾಂಡೆ ತೋಟದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯೊಂದರಲ್ಲಿ ದಿ.23 ರಂದು  ಆರ್.ಎಸ್.ಎಸ್.ಹಿಂದು ಜಾಗರಣ ವೇದಿಕೆ, ವಿವೇಕಾನಂದ ಪ್ರತಿಷ್ಠಾನ ಸಂಘಟನೆಗಳಿಂದ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು. 

       ನೆರೆ ಹಾವಳಿ ಪೀಡಿತ ಪ್ರದೇಶಗಳಲ್ಲಿ ನೆರೆ ಇಳಿದ ನಂತರ ಸ್ಥಳೀಯರಿಗೆ ಅನೇಕ ಸಮಸ್ಯೆಗಳು ತಲೆ ದೋರಿವೆ. ಸುತ್ತಮುತ್ತಲಿನ ನಿಸರ್ಗವು ಕೊಳೆತ ಪ್ರಾಣಿಗಳ ಕಳೆ ಬರಹಗಳಿಂದ ಬೆಳೆದ ಫಸಲಿನ ಕೊಳೆಯಿಂದ ಕಪ್ಪೆ ಮಾಸ್ ನಿಂದ ಇನ್ನೂ ಹತ್ತು ಹಲವು ಕಾರಣಗಳಿಂದ ವಾತಾವರಣ ಕಲುಷಿತಗೊಂಡು ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಕಾಡುತಿದೆ. ಜನರು ತಮ್ಮ ತಮ್ಮ ನಿವಾಸಕ್ಕೆ ತೆರಳಿದರೂ ತಮ್ಮ ಸುತ್ತಲಿನ ಪ್ರದೇಶವನ್ನು ಶುಚಿಗೊಳಿಸುವತ್ತ ಗಮನ ಹರಿಸಿದ್ದಾರೆ. 

            ಆದರೆ ಪ್ರವಾಹದಿಂದ ಶಾಲೆಗಳಲ್ಲಿ ನೀರು ಸೇರಿಕೊಂಡು ಪೀಠೋಪಕರಣಗಳು, ದಾಖಲಾ ದಸ್ತಾವೇಜುಗಳು, ಸಾಧಕರ ಭಾವಚಿತ್ರಗಳು, ವಿಜ್ಞಾನ ವಿಷಯದ ಸಂಶೋಧನಾ ಪರಿಕರಗಳು   ನೆಲ ಹಾಸಿನ ಮೇಲೆ ಬಿದ್ದ  ಕಸ-ಕಡ್ಡಿ, ಕೆಸರಿನಿಂದ ಭಾಗಶಃ ಹಾಳಾಗಿ ಹೋಗಿದ್ದು, ವಿದ್ಯಾಥರ್ಿಗಳ ವ್ಯಾಸಂಗ ಮೊದಲಿನಂತೆ ಮುಂದುವರಿಯಲು ನಮ್ಮ ಕಾರ್ಯಕರ್ತರು ಶಾಲೆಯಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದ್ದಾರೆ ಎಂದು ಇದರ ಮುಂದಾಳತ್ವ ವಹಿಸಿದ ಪುರಸಭೆ ಸದಸ್ಯ ರವಿ ಜವಳಗಿ ಹೇಳಿದರು. 

            ಈ ಸ್ವಚ್ಛತಾ ಕಾರ್ಯದಲ್ಲಿ ಸಂಘಟನೆಗಳ ಸದಸ್ಯರುಗಳಾದ ಬಸವರಾಜ್ ಗಿರಿಸಾಗರ್, ಕೃಷ್ಣಾ ಕಳ್ಳಿಮನಿ, ಸದಾಶಿವ ಹೊಳ್ಳೆಪ್ಪಗೋಳ್,  ಗುಂಡು ನಡುವಿನಮನಿ, ಚನ್ನು ಆರೇಗಾರ್, ಹಣ್ಮಂತ್ ನಾವಿ, ಸಚಿನ್ ಬಾಡನವರ್, ಶ್ರೀನಿಧಿ ಕುಲ್ಕಣರ್ಿ, ದತ್ತಾ ಯರಗಟ್ಟಿ, ಮಂಜು ಕೈಸೊಲಗಿ,ಹರೀಶ್ ಮಂಟುರ್, ಈರಣ್ಣ ಹುನಿಶ್ಯಾಳ್, ಚೇತನ್ ಬಂಡಿವಡ್ಡರ್, ಕಿರಣ್ ದಲಾಲ್, ವಿಕ್ಕಿ ಬಂಡಿವಡ್ಡರ್ ಮುಂತಾದ ಹಲವರು ತೊಡಗಿಕೊಂಡಿದ್ದರು ಪ್ರದೇಶದ ಜನರು ಈ ಕಾರ್ಯವನ್ನು ಶ್ಲಾಘಿಸಿದ್ದಾರೆ.