ಲೋಕದರ್ಶನವರದಿ
ಹಾವೇರಿ: ನಗರದ ಹಳ್ಳಿಕೇರಿ ಗುದ್ಲೇಪ್ಪ ಕಾಲೇಜಿನ ಎನ್.ಎಸ್.ಎಸ್ ಕ್ಯಾಂಪ್ ವಿದ್ಯಾಥರ್ಿಗಳಿಂದ ಹಾವೇರಿ ನಗರದ ಸಾರ್ವಜನಿಕ ಜನಬೀಡು ಪ್ರದೇಶವಾದ ಬಸ್ ನಿಲ್ದಾಣದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು.
ಬುಧವಾರದಂದು ಎನ್.ಎಸ್.ಎಸ್ ಕ್ಯಾಂಪ್ ವಿದ್ಯಾಥರ್ಿಗಳು ಕಸದ ರಾಸಿಯಿಂದ ತುಂಬಿ ತುಳುಕುತ್ತಿದ್ದ ನಗರ ಸಾರ್ವಜನಿಕ ಬಸ್ ನಿಲ್ದಾಣ ಆವರಣವನ್ನು ಜಾಡು ಹಿಡಿದು ಕಸ ಗೂಡಿಸಿ ಸ್ವಚ್ಚತೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.
ನಗರದ ಎಲ್ಲಂದರಲ್ಲಿ ಕಸವನ್ನು ಹಾಕಬೇಡಿ ಕಸದ ಬಟ್ಟಿಯಲ್ಲಿ ಕಸವನ್ನು ಹಾಕಿ, ನಮ್ಮ ನಡೆ ಸ್ವಚ್ಚತೆ ಕೆಡೆ ಅನ್ನುವ ಪ್ಲಾಸ್ ಬೋರ್ಡ ಹಿಡಿದು ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರೋ. ರಮೇಶ ನಾಯಕ, ಎಸ್.ಎಸ್ ಸಣ್ಣಶಿವಣ್ಣನವರ ಹಾಜರಿದ್ದರು.