ಶೇಡಬಾಳ: ಕಾಗವಾಡ ಶಿವಾನಂದ ಮಹಾವಿದ್ಯಾಲಯದ ಎನ್.ಸಿ.ಸಿ ಅಡಿಯಲ್ಲಿ ಸ್ವಚ್ಛ ಭಾರತ ಅಭಿಯಾನ (ಸ್ವಚ್ಛತಾ ಪಕ್ವಾಡಾ) ಕಾರ್ಯಕ್ರಮವನ್ನು ಶನಿವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಮಹಾವಿದ್ಯಾಲಯದ ಉಪ-ಪ್ರಾಚಾರ್ಯರಾದ ಪ್ರೊ. ಎಸ್.ಎಸ್.ಬಾಗನೆಯವರು ಮಾತನಾಡಿ, ಎನ್.ಸಿ.ಸಿ ಕೆಡೆಟ್ಗಳು ಭಾರತ ಸಕರ್ಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಸ್ವಚ್ಛ ಭಾರತ ಹಾಗೂ ಸ್ವಚ್ಛತಾ ಪಕವಾಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗ್ರಾಮದಲ್ಲಿ ಹಾಗೂ ಮಹಾವಿದ್ಯಾಲಯದ ಆವರಣ, ಬಸ್ ನಿಲ್ದಾಣ, ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಸ್ವಚ್ಛಗೊಳಿಸಿದರು.
ಪ್ಲಾಸ್ಟಿಕ್ ಬಳಕೆಯ ನಿಷೇದ ಕುರಿತು ಪ್ಲಾಸ್ಟಿಕ್ ಬಳಸದಂತೆ ಗ್ರಾಮಸ್ಥರಲ್ಲಿ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಈ ಮೂಲಕ ದೇಶ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆಂದು ಹೇಳಿದರು.
ಪ್ರಾಸ್ತಾವಿಕವಾಗಿ ಎನ್.ಸಿ.ಸಿ ಅಧಿಕಾರಿ ಮೇಜರ್.ವ್ಹಿ.ಎಸ್.ತುಗಶೆಟ್ಟಿ ಮಾತನಾಡುತ್ತಾ ಸ್ವಚ್ಛತಾ ಪಕವಾಡ ಕಾರ್ಯಕ್ರಮದಲ್ಲಿ ಕೈಗೊಳ್ಳಬೇಕಾಗಿರುವ ಸ್ವಚ್ಛತೆ, ನೈರ್ಮಲ್ಯತೆ, ಪ್ಲಾಸ್ಟಿಕ್ ಬಳಕೆ ನಿಷೇದ, ಜನಜಾಗೃತಿ ಮೂಡಿಸುವಂತ ಕಾರ್ಯಕ್ರಮಗಳಲ್ಲಿ ವಿದ್ಯಾಥರ್ಿಗಳು ಸ್ವತ: ಪಾಲ್ಗೊಂಡು ಗ್ರಾಮಸ್ಥರು ಪಾಲ್ಗೊಳುವಂತೆ ಪ್ರೇರೆಪಿಸಬೇಕೆಂದು, ಹಾಗೂ ಎಲ್ಲರೂ ಸೇರಿ ಸ್ವಚ್ಛ ಆದರ್ಶ ಗ್ರಾಮವನ್ನು ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರವಹಿಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಪದವಿ-ಪೂರ್ವ ವಿಭಾಗದ ಪ್ರಾಚಾರ್ಯ ಪ್ರೊ. ಪಿ.ಬಿ.ನಂದಾಳೆ, ಡಾ.ಎಸ್.ಎ.ಕಕರ್ಿ ಹಾಗೂ ಎಲ್ಲ ಸಿಬ್ಬಂದಿ, ಎನ್.ಸಿ.ಸಿ ಕೆಡೆಟ್ಗಳು ಪಾಲ್ಗೊಂಡಿದ್ದರು.