ಇಂಡಿ 08: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇಂಡಿ ಶಾಖೆ ವತಿಯಿಂದ 162ನೇ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಸಪ್ತಾಹ ಕಾರ್ಯಕ್ರಮ, ಮೊದಲನೆಯ ಕಾರ್ಯಕ್ರಮ ಸ್ವಚ್ಚತಾ ಕಾರ್ಯಕ್ರಮ ಇಂಡಿ ಬಸ್ ನಿಲ್ದಾಣ ಮಾಡಲಾಯಿತು.
162ನೇ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಇಂಡಿ ನಗರದ ಬಸ್ಸ್ ನಿಲ್ದಾಣವನ್ನು ಸ್ವಚ್ಛ ಗೊಳಿಸಲಾಯಿತು. ನಮಗೆಲ್ಲಾ ತಿಳಿದಿರುವಂತೆ ಸ್ವಚ್ಛತೆ ನೈರ್ಮಲ್ಯ ಹಾಗು ಆರೋಗ್ಯ ನಡುವೆ ಪರಸ್ಪರ ಆಳವಾದ ಸಂಬಂಧವಿದೆ. ಸಾಮಾನ್ಯವಾಗಿ ಕೆಲವಂದು ಸಾಂಕ್ರಾಮಿಕ ರೋಗಗಳು ಸ್ವಚ್ಛತೆ ಇಲ್ಲದ ಕಾರಣಗಳಿಂದ ಹರಡುತ್ತವೆ, ಇದನ್ನು ಮನಗೊಂಡು ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಬಿವಿಪಿ ಇಂಡಿ ಶಾಖೆಯ ವತಿಯಿಂದ ವಿದ್ಯಾರ್ಥಿಗಳಿಗೆ ಹಾಗೂ ಎಬಿವಿಪಿ ಕಾರ್ಯಕರ್ತರಿಗೆ ಸೇವಾ ಮನೋಭಾವ ಮೂಡಿಸುವ ದೃಷ್ಟಿಯಿಂದ ಇಂಡಿ ನಗರದ ಬಸ್ ನಿಲ್ದಾಣ ಸ್ವಚ್ಛತೆ ಗೊಳಿಸಲಾಯಿತು ಎಂದು ಪ್ರಾಂತ್ಯ ಕಾರ್ಯಕಾರಣಿ ಸದಸ್ಯರಾದ ಸಚೀನ ಧಾನಗೊಂಡ ಹೇಳಿದರು. ಈ ಸಂದರ್ಭದಲಿ ಎಬಿವಿಪಿ ಇಂಡಿ ಶಾಖೆಯ ನಗರ ಉಪಾಧ್ಯಕ್ಷರು ಶಿವನಂದ ಕಾಮಗೊಂಡ ಅವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಾಹುಲ್ ಜಾಧವ, ಅಂಬರೀಷ್ ಬಿರಾದಾರ, ಸೋಮನಾಥ ಕಟಗೇರಿ, ಸಾರ್ವಭೌಮ ಸಾಳುಂಕೆ,ಸಂದೀಪ ಕಲ್ಯಾಣಿ, ಸಾಹೀಬ್ ನಧಾಪ್, ವಿನಯ್ ಮೈದರಗಿ, ಮಲ್ಲಿಕಾರ್ಜುನ ಪತ್ತಾರ, ಮಹೇಶ್ ಮುನಾಳಿ, ದೀಪಾ ಗಿರಣಿವಡ್ಡರ, ಪ್ರೇಮಾ ಹೂಗಾರ, ಸಾವಿತ್ರಿ ಬಡಿಗೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.