ಕೇಂದ್ರ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯ ಹಾಗೂ ರಕ್ತದಾನ ಶಿಬಿರ

ಹಾವೇರಿ 03: ಹಾವೇರಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಸೋಮವಾರ ಸ್ವಚ್ಚತಾ ಕಾರ್ಯ  ಹಾಗೂ ರಕ್ತದಾನ ಶಿಬಿರ ಜರುಗಿತು. 

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶಾಸಕರು ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷರಾದ ರುದ್ರ​‍್ಪ ಲಮಾಣಿ ಅವರು ಮಾತನಾಡಿ, ಶಕ್ತಿಯೋಜನೆಯಿಂದ  ಬಸ್ ನಿಲ್ದಾಣಗಳಲ್ಲಿ ಹಾಗೂ ಬಸ್‌ಗಳಲ್ಲಿ  ಪ್ರಯಾಣಿಕರ ದಟ್ಟನೆ ಹೆಚ್ಚಾಗಿದ್ದು, ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸಾರಿಗೆ ಸೌಲಭ್ಯ ಕಲ್ಪಿಸಬೇಕು ಹಾಗೂ ಬಸ್ ನಿಲ್ದಾಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು  ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಹೇಳಿದರು. 

ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ಬಿ ದಾನಮ್ಮನವರ ಮಾತನಾಡಿ, ನಾನು ಈ ಹಿಂದೆ ನಿಲ್ದಾಣಕ್ಕೆ ಭೇಟಿ ನೀಡಿದ ಸಂದರ್ಭಕ್ಕಿಂತ ಈಗ ಸ್ವಚ್ಛವಾಗಿದೆ,  ಬಸ್ ನಿಲ್ದಾಣ ಯಾವಾಗಲೂ ಸ್ವಚ್ಛತೆಯಿಂದ ಇರಬೇಕು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.  ಪ್ರಯಾಣಿಕರು ಸಹ ಸ್ವಚ್ಛತೆ ಕಾಪಾಡುವಲ್ಲಿ ಸಂಸ್ಥೆಯೊಂದಿಗೆ ಕೈಜೋಡಿಸಬೇಕು. ಈ ಬಸ್ ನಿಲ್ದಾಣ ಮಾದರಿ ಬಸ್ ನಿಲ್ದಾಣವಾಗಬೇಕು ಎಂದರು.   

ಬಸ್ ನಿಲ್ದಾಣದ ಸ್ವಚ್ಛತೆ ಕಾರ್ಯದ ನಂತರ ಹಾವೇರಿ ಜಿಲ್ಲಾ ರಕ್ತನಿಧಿ ಕೇಂದ್ರ ವೈದ್ಯಾಧಿಕಾರಿ ಡಾ.ಬಸವರಾಜ ತಳವಾರ ಅವರ ನೇತ್ರತ್ವದಲ್ಲಿ ರಕ್ತದಾನ ಶಿಬಿರ ಜರುಗಿತ್ತು. ರಕ್ತದಾನ  ಮಹತ್ವಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.  

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ, ಹಾವೇರಿ ವಿಭಾಗೀಯ ನಿಯಂತ್ರಣಾದಿಕಾರಿ ಶಶಿಧರ ಜಿ ಕುಂಬಾರ,  ವಿಭಾಗೀಯ ಸಾರಿಗೆ ಅಧಿಕಾರಿ ಆಶೋಕ ಪಾಟೀಲ್, ಸಹಾಯಕ ಭದ್ರತಾ ಮತ್ತು ಜಾಗೃತಾಧಿಕಾರಿ ಮಂಜುನಾಥ ಕಡ್ಲಿಕೊಪ್ಪ. ಸಹಾಯಕ ಅಂಕಿಸಂಖ್ಯಾಧಿಕಾರಿ ಸತೀಶ ಕಾಡನವರ, ಲೆಕ್ಕಾಧಿಕಾರಿ ಪಿ. ಮಹದೇವಸ್ವಾಮಿ, ಡಿಪೋ ಮ್ಯಾನೇಜರ ಜಿ.ಬಿ ಅಡರಕಟ್ಟಿ. ಸಹಾಯಕ ಆಡಳಿತಾಧಿಕಾರಿ ಸಿ.ಬಿ ಚನ್ನಗೌಡ್ರ, ಕೃಷ್ಣಪ್ಪ ರಾಹುತನಕಟ್ಟಿ ವಿಭಾಗೀಯ ಕಚೇರಿಯ ಹಾಗೂ ವಿಭಾಗೀಯ ಕಾರ್ಯಗಾರದ ಸಿಬ್ಬಂದಿ ಉಪಸ್ಥಿತರಿದ್ದರು. ಮೇಲ್ವಿಚಾರಕ ಮಲ್ಲಿಕಾರ್ಜುನ ಹಿಂಚಿಗೇರಿ ಕಾರ್ಯಕ್ರಮ ನಿರೂಪಿಸಿದರು.