ಸದಸ್ಯರಿಗೆ ಶೇ. 12 ಲಾಭಾಂಶ ಮತ್ತು ಸಿಬ್ಬಂದಿಗೆ ಶೇ 10 ಬೋನಸ್ ಘೋಷಣೆ: ಜಯಾನಂದ ಜಾಧವ

ಯಕ್ಸಂಬಾ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿ

ಚಿಕ್ಕೋಡಿ 03: ಯಕ್ಸಂಬಾ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿಯು (ಬಹುರಾಜ್ಯ) ಪ್ರಸಕ್ತ ವರ್ಷದ ದಸರಾ ಹಬ್ಬಕ್ಕೆ ಸಂಸ್ಥೆಯ ಎಲ್ಲ ಸದಸ್ಯರಿಗೆ ಶೇ 12 ಲಾಭಾಂಶ ಮತ್ತು ಸಿಬ್ಬಂದಿಗಳಿಗೆ ಶೇ 10 ಬೋನಸ್ ನೀಡಲಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಜಯಾನಂದ ಜಾಧವ ತಿಳಿಸಿದರು. 

ತಾಲೂಕಿನ ಯಕ್ಸಂಬಾದ ಮುಖ್ಯ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು,  ಸದಸ್ಯರ ಸಹಕಾರ ಹಾಗೂ ಸಿಬ್ಬಂದಿಗಳ ಕಠಿಣ ಪರಿಶ್ರಮದಿಂದ   ಸಂಸ್ಥೆಯು  ಅತ್ಯುತ್ತಮ ಆರ್ಥಿಕ ಚಟುವಟಿಕೆ ಹೊಂದಿದ್ದು, ಸದಸ್ಯರಿಗೆ ಶೇ.12 ಲಾಭಾಂಶ ಹಾಗೂ ಸಿಬ್ಬಂಧಿಗೆ ಶೇ.10 ರಷ್ಟು ಬೊನಸ್ ನೀಡಲಎಂದರು. 

ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಅವರ ನೇತೃತ್ವ ಹಾಗೂ ಮಾಜಿಸಚಿವೆ ಶಶಿಕಲಾ ಜೊಲ್ಲೆ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸಹಕಾರಿಯ ಲಾಭಾಂಶವನ್ನು ಸದಸ್ಯರ ಖಾತೆಗಳಿಗೆ ಜಮೆ ಮಾಡಲಾಗಿದ್ದು ಸದಸ್ಯರು ತಾವಿರುವ ಶಾಖೆಗಳಲ್ಲಿ ಶಾಖಾ ವ್ಯವಸ್ಥಾಪಕರನ್ನು ಸಂಪರ್ಕಿಸಿ ಲಾಭಾಂಶ ಪಡೆದುಕೊಳ್ಳಬಹುದು ಎಂದರು. 

ಸಹಕಾರಿಯು  212 ಶಾಖೆಗಳಲ್ಲಿ 3.89 ಲಕ್ಷ  ಸದಸ್ಯರಿದ್ದು, 33.76 ಕೋಟಿ ಶೇರು ಬಂಡವಾಳದೊಂದಿಗೆ 3925 ಕೋಟಿ ಠೇವು ಹೊಂದಿ  2989 ಕೋಟಿ ಸಾಲ ವಿತರಿಸಿ 4556 ಕೋಟಿ ರೂಗಳ ದುಡಿಯುವ ಬಂಡವಾಳದೊಂದಿಗೆ  ಅಗ್ರಮಾನ್ಯ ಸಹಕಾರಿಯಾಗಿ ರಾಜ್ಯ ಹಾಗೂ ಅಂತಾರಾಜ್ಯದಲ್ಲಿ ತನ್ನದೇ ಛಾಪು ಮೂಡಿಸುತ್ತಿದೆ. ಕಳೆದ ಆರ್ಥಿಕ ವರ್ಷದಲ್ಲಿ 40.55 ಕೋಟಿ ಲಾಭಗಳಿಸಿದೆ ಎಂದರು. 

ಅ.8 ರಂದು ಸಂಸ್ಥೆಯ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಜನ್ಮದಿನದ ಪ್ರಯುಕ್ತ 7 ನೂತನ ಶಾಖೆಗಳನ್ನು ಆರಂಭಿಸಲು ತಿರ್ಮಾನಿಸಲಾಗಿದೆ. ಕರ್ನಾಟಕದಲ್ಲಿ ಶಿರಾ, ಯಲ್ಲಾಪೂರ, ದಾಬಸಪೇಟ, ಮಹಾರಾಷ್ಟ್ರದಲ್ಲಿ ಸೋಲ್ಲಾಪೂರ, ಪಲೂಸ್, ಗೋವಾ ರಾಜ್ಯದ ಮಡಗಾಂವ ಮತ್ತು ವಾಲಪೋಯಿದಲ್ಲಿ ಶಾಖೆ ಆರಂಭಿಸಲಾಗುತ್ತದೆ ಎಂದರು. 

ಈ ಸಂದರ್ಭದಲ್ಲಿ ಜ್ಯೋತಿಪ್ರಸಾದ ಜೊಲ್ಲೆ, ಸಂಸ್ಥೆಯ ಉಪಾಧ್ಯಕ್ಷ ಸಿದ್ರಾಮ ಗಡದೆ, ಅಪ್ಪಾಸಾಹೇಬ ಜೊಲ್ಲೆ, ಪ್ರಧಾನ ವ್ಯವಸ್ಥಾಪಕ ರವೀಂದ್ರ ಚೌಗಲೆ,  ಉಪಪ್ರಧಾನ ವ್ಯವಸ್ಥಾಪಕರಾದ ಮಹಾದೇವ ಮಂಗಾವತೆ, ರಮೇಶ ಕುಂಭಾರ, ಎಸ್‌.ಕೆ.ಮಾನೆ, ಶಿವಪುತ್ರ ಡಬ್ಬನ್ನವರ, ಸತೀಶ ಲಟ್ಟೆ, ಅಪ್ಪು ಕಲಬುರಗಿ ಮುಂತಾದವರು ಇದ್ದರು.