ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಣೆ

ಯರಗಟ್ಟಿ 03: ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರದಲ್ಲಿ 2024 25ನೇ ಸಾಲಿನ ಹಿಂಗಾರು ಬಿತ್ತನೆ ಬೀಜವನ್ನು ರಿಯಾಯಿತಿ ದರದಲ್ಲಿ ವಿತರಿಸುವ ಕಾರ್ಯಕ್ಕೆ ಯರಗಟ್ಟಿ ತಹಶೀಲ್ದಾರ ಎಂ. ಎನ್‌. ಮಠದ ಗುರುವಾರ ಚಾಲನೆ ನೀಡಿದರು. 

ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ ಮಾತನಾಡಿ, ರೈತರು ಶಾಂತಿಯುತವಾಗಿ ಬಿತ್ತನೆ ಬೀಜ ಪಡೆಯಬೇಕು. ಕಡಲೆ, ಜೋಳ ಮತ್ತು ಗೋದಿ ಬೀಜಗಳನ್ನು ದಾಸ್ತಾನು ಮಾಡಲಾಗಿದ್ದು, ಎಫ್‌ಐಡಿ ಅಥವಾ ಆಧಾರ ಕಾರ್ಡ್‌ ಝರಾಕ್ಸ್‌ ಪ್ರತಿ ತಂದು ಬೀಜವನ್ನು ರಿಯಾಯಿತಿ ದರದಲ್ಲಿ ಪಡೆದುಕೊಳ್ಳಬೇಕು ಎಂದರು. 

ತಹಶೀಲ್ದಾರ ಎಮ್‌. ಎನ್‌. ಮಠದ ಮಾರ್ಗದರ್ಶನದಲ್ಲಿ ಬೀಜ ವಿತರಣೆ ಪ್ರಾರಂಭಿಸಲಾಯಿತು. 

ಈ ವೇಳೆ ಕೃಷಿ ಅಧಿಕಾರಿ ಎಸ್‌. ಎಲ್‌. ದೇಸಾಯಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದಬಸನವರ, ಎಪಿಎಂಸಿ ಸದಸ್ಯ ರಫೀಕ್ ಡಿ. ಕೆ, ಪ. ಪಂಚಾಯತ ನಾಮನಿರ್ದೇಶಿತ ಸದಸ್ಯರಾದ ನಿಖಿಲ ಪಾಟೀಲ, ಹನುಮಂತ ಹಾರುಗೋಪ್ಪ, ಸಲಿಂಬೇಗ ಜಮಾದಾರ, ರೈತ ಉತ್ಪಾದನೆ ಸಂಘದ ಕಾರ್ಯದರ್ಶಿ ಮನೋಹರ ದಿನ್ನಿಮನಿ, ರೈತರಾದ ಶಿವಾನಂದ ಕರಿಗೋಣ್ಣವರ, ಶಿವಲಿಂಗಪ್ಪ ನುಗ್ಗಾನಟ್ಟಿ, ಗಿರೇಪ್ಪ ಗಂಗರಡ್ಡಿ, ಯಕ್ಕೇರೆಪ್ಪ ತಳವಾರ, ಫಾರುಕ್ ಅತ್ತಾರ, ಗೌಡಪ್ಪ ಉದಪುಡಿ, ಯಮನಪ್ಪ ಮಾಳಗಿ, ರಂಗಪ್ಪ ಗಂಗರಡ್ಡಿ,ಶಿವಲಿಂಗ ಬಿರಾದಾರಪಾಟೀಲ, ರೈತ ಸಂಪರ್ಕ ಕೇಂದ್ರ ಸಿಬ್ಬಂದಿ, ಇತರರು ಇದ್ದರು.