ಸ್ವಚ್ಛತಾ ಅರಿವು ಕಾರ್ಯಕ್ರಮ

ಹಾವೇರಿ11: ಸ್ಥಳೀಯ ಪ್ರತಿಷ್ಠಿತ ಕೆ. ಎಲ್. ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಓ ಖ ಖ ಘಟಕಗಳ ಸ್ವಚ್ಛತಾ ಕಾರ್ಯಕ್ರಮದ ಅಡಿಯಲ್ಲಿ ಹಾವೇರಿ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಒಂದು ಕಾರ್ಯಕ್ರಮವನ್ನು ನಿಲ್ದಾಣದ ನಿಯಂತ್ರಣಾಧಿಕಾರಿಗಳಾದ ಖ. ಏ. ವಗ್ಗಣ್ಣನವರ ಪೊರಕೆ ಹಿಡಿದು ಕಸಗೂಡಿಸುವ ಮೂಲಕ ಚಾಲನೆ ನೀಡಿ ಮಾತನಾಡುತ್ತಾ ಪ್ರತಿಯೊಬ್ಬ ಪ್ರಯಾಣಿಕರು ನಿಲ್ದಾಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕಸವನ್ನು ಕಸದ ಡಬ್ಬಿಯಲ್ಲಿ ಹಾಕಬೇಕು ಎಂದು ಕರೆ ನೀಡಿದರು. ಮತ್ತು ಜಿ. ಹೆಚ್. ಮಹಾವಿದ್ಯಾಲಯದ ಓ ಖ ಖ ಘಟಕಗಳ ಈ ಕಾರ್ಯಕ್ರಮ ಬಹಳಷ್ಟು ಶ್ಲಾಘನೀಯ ಎಂದು ನುಡಿದರು. ಇನ್ನೋರ್ವ ಅಧಿಕಾರಿಯಾದ  ಒ. ಏ. ಜೋಡಿನ ಸಹ ಉಪಸ್ಥಿತರಿದ್ದರು. ಈ ವೇಳೆಯಲ್ಲಿ ಸ್ವಯಂಸೇವಕರಿಂದ ಬಸ್ ನಿಲ್ದಾನವನ್ನು ಸ್ವಚ್ಛಗೊಳಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಓ ಖ ಖ ಘಟಕಧಿಕಾರಿಗಳಾದ ಪ್ರೋ ರಮೇಶ ನಾಯಕ್ & ಪ್ರೋ ಎಸ್. ಎಸ್. ಸಣ್ಣಶಿವಣ್ಣನವರ ಉಪಸ್ಥಿತರಿದ್ದರು. ಹಾಗೂ ನೂರಾರು ಸ್ವಯಂಸೇವಕರು ಹಾಜರಿದ್ದರು.