ಯುವಕ ಮಂಡಳಗಳ ಸ್ವಚ್ಚತಾ, ಶ್ರಮದಾನ ಕಾರ್ಯಕ್ರಮ

ಗದಗ 02: ನೆಹರು ಯುವ ಕೇಂದ್ರ ಗದಗ ಸುಭಾಷಚಂದ್ರ ಬೋಸ್ ಯುವಕ ಮಂಡಳ ದುಂದೂರು ಇವರ ಸಯುಕ್ತ ಆಶ್ರಯದಲ್ಲಿ ಸ್ವಚ್ಚತಾ ಹಾಗೂ ಶ್ರಮದಾನ ಕಾರ್ಯಕ್ರಮ ಜರುಗಿತು. ಸ್ಥಳ ಎ ಸಿ ಆಫೀಸ್, ಗದಗ ಎಸ್. ಎಚ್. ಹೂಗಾರ, ಉದ್ಘಾಟನೆ ಮಾಡಿದರು. 

ಮುಖ್ಯ ಅತಿಥಿಗಳಾಗಿ  ಹಸನ್ ಗುಳಗುಂದಿ, ಬಸವರಾಜ ಬಡಿಗೇರ, ಮತ್ತು ರಾಷ್ಟ್ರೀಯ ಯುವ ಕಾರ್ಯಕರ್ತ ಮಂಜುನಾಥ ಉಪ್ಪಿನ ನೆಹರು ಯುವ ಕೇಂದ್ರ ಗದಗ ಭಾಗವಹಿಸಿದ್ದರು. ಎಸ್. ಎಚ್. ಹೂಗಾರ ರವರಿಂದ ಸ್ವಚ್ಚತಾ ಹಾಗೂ ಶ್ರಮದಾನದ ಬಗ್ಗೆ ತಿಳಿಸಿಕೊಟ್ಟರು.  ಹಸನ್ ಗುಳಗುಂದಿ ಅವರು ಸ್ವಚ್ಚತಾ ಹಾಗೂ ಶ್ರಮದಾನದ ಬಗ್ಗೆ ಯುವಕರಿಗೆ ತಿಳಿಸಿಕೊಟ್ಟರು. ಇದರಲ್ಲಿ ಸುಭಾಷಚಂದ್ರ ಬೋಸ್ ಯುವಕ ಮಂಡಳ ದುಂದೂರು ಎಲ್ಲಾ ಸದಸ್ಯರು ಭಾಗವಹಿಸಿದ್ದರು.