ಸ್ವಚ್ಛ ಭಾರತ ಅಭಿಯಾನ ಹಾಗೂ ಪ್ರವಾಸಿಗರಿಗೆ ಅರಿವು ಮೂಡಿಸುವ ಕಾರ್ಯಕ್ರಮ

ಲೋಕದರ್ಶನ ವರದಿ

ಬೆಳಗಾವಿ 06. ಖಾನಾಪೂರ ತಾಲೂಕಿನ ಹೆಮ್ಮಡಗಾ ಭೀಮಗಡ ಅಭಿಯಾರಣ್ಯ ವ್ಯಾಪ್ತಿಯಲ್ಲಿ ಬರುವ ಖಾನಾಪೂರ ಅನಮೊಡ ರಸ್ತೆ ಪಕ್ಕಗಳಲ್ಲಿ "ಸ್ವಚ್ಛ ಭಾರತ ಅಭಿಯಾನ". ಹಾಗೂ ಪ್ರವಾಸಿಗರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು  ಡೆಪ್ಯೂಟಿ ಸಿ.ಎಪ್ ಎಂ ವ್ಹಿ.ಅಮರನಾಥ , ಎ ಸಿ ಎಪ್ ಸಿ ಬಿ. ಪಾಟೀಲ ಹಾಗೂ ಆರ್ ಎಪ್ ಓ . ಎಸ್ ಎಸ್ .ನಿಂಗಾಣಿ ಮಾರ್ಗದರ್ಶನದಲ್ಲಿ ಬೆಳಗಾವಿಯ ನೇಕಾರ ಮುಖಂಡ ಗಜಾನನ ಗುಂಜೇರಿ ನೆತೃತ್ವದಲ್ಲಿ  ಹಮ್ಮಿಕೊಳ್ಳಲಾಗಿತ್ತು. 

   ಭೀಮಗಡ ವನ್ಯಧಾಮದಿಂದ ಖಾನಾಪೂರ ಮಾರ್ಗದಲ್ಲಿ ಸುಮಾರು ಎಂಟು ಕೀಮೀ ನಷ್ಟು  ಗಜಾನನ ಗುಜೇರಿ ನೆತೃತ್ವದ ಯುವಕರ ತಂಡ ಹಾಗೂ ಅರಣ್ಯ ಸಿಬ್ಬಂದಿಗಳು ಕೂಡಿಕೊಂಡು ರಸ್ತೆ ಅಕ್ಕ ಪಕ್ಕ ಬಿದ್ದ ಪ್ಲಾಸ್ಟಿಕ್ ಹಾಳೆ ,ಬಾಟಲ್ ಹಾಗೂ ಗುಟಕಾ ಚೀಟನ ಹಾಳೆ ತ್ಯಾಜ್ಯಗಳನ್ನು ಚೀಲದಲ್ಲಿ ಸಂಗ್ರಹಿಸಿ ಸ್ವಚ್ಛಗೊಳಿಸುವ ಮೂಲಕ ಪ್ಲಾಸ್ಟಿಕ ತ್ಯಾಜ್ಯಗಳಿಂದ ಕಾಡು ಮತ್ತು ಪ್ರಾಣಿಗಳಿಗೆ ಹಾನಿಯಾಗುತ್ತದೆ. ನಾಗರಿಕರಾದ ನಮಗೆ "ಪ್ರಕೃತಿ ಹಾಗೂ ವನ್ಯಜೀವಿಗಳನ್ನು ಸಂರಕ್ಷಿಸುವುದು ನಮ್ಮ ಜವಾಬ್ದಾರಿ " ಕಾಡು ರಸ್ತೆಗಳಲ್ಲಿ ಅಷ್ಟೇ ಅಲ್ಲದೆ ನಗರಗಳಲ್ಲಿಯೂ ಸಹ  ಸಿಕ್ಕಲೇಲ್ಲ  ಯಾವುದೇ ತರಹದ ತ್ಯಾಜ್ಯಗಳನ್ನು ಎಸೆಯ  ಬೇಡಿ ಎಂದು ಈ ಮಾರ್ಗದಲ್ಲಿ ಹಾದು ಹೋಗುವ ಪ್ರವಾಸಿಗರಿಗೆ ಹೇಳುವ ಮೂಲಕ  ಅರಿವು ಮೂಡಿಸಿದರು. 

ಈ ಸಂದರ್ಭದಲ್ಲಿ  ಅರಣ್ಯ ಇಲಾಖೆಯ ಡೆಪ್ಯೂಟಿ ಆರ್ಎಫಓ. ಎಂ ಜಿ.ನಂದ್ಯಪ್ಪಗೋಳ, ಅರಣ್ಯ ರಕ್ಷಕ ಎಚ್ ಬಿ. ಕುರಬೇಟ ಹಾಗೂ ಸಿಬ್ಬಂದಿಗಳು ಹಾಗೂ   ವಡಗಾವಿಯ ನೇಕಾರ ಯುವಕರಾದ ಲೋಹಿತ ಮೊರಕರ ,ನಾಗರಾಜ ಹೂಗಾರ, ಅಜರ್ುನ ಢವಳಿ ,ರಮೇಶ ಪಾಟೀಲ ,ಮಂಜುನಾಥ ಭಂಡಾರಿ, ವಿನೋದ ಬಂಗೋಡಿ, ವಿನಾಯಕ ದುದಮಿ ,ಆಂಜನೇಯ ದುದಮಿ ,ಶ್ರೀಕಾಂತ ಲೋಕರಿ, ಸಂತೋಷ ಅತ್ತಿಮರದ ,ರಾಜು ಢಗೆ ,ಶ್ರೀನಿವಾಸ ವಾಗುಕರ, ಗಜಾನನ ಕಾರಗಿ ಹಾಗೂ ರಾಮು ಢಗೆ  ಭಾಗವಹಿಸಿದ್ದರು.