ಸ್ವಚ್ಛ ಭಾರತ ಮಿಷನ್: ವಿದ್ಯಾರ್ಥಿನಿಯರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಯಶಸ್ವಿ

ಕೊಪ್ಪಳ: ಕೊಪ್ಪಳ ಜಿಲ್ಲಾ ಪಂಚಾಯತ ವತಿಯಿಂದ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಕಿನ್ನಾಳ ಗ್ರಾಮದ ಸಕರ್ಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇಂದು (ನ.13) ಹಮ್ಮಿಕೊಳ್ಳಲಾಗಿದ್ದ ಋತುಚಕ್ರ ನಿರ್ವಹಣೆ ಹಾಗೂ ವೈಯಕ್ತಿಕ ಶುಚಿತ್ವ ಮತ್ತು ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ಪ್ರೌಢಶಾಲಾ ವಿದ್ಯಾಥರ್ಿಗಳಿಗೆ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರವು ಯಶಸ್ವಿಯಾಗಿ ಜರುಗಿತು. 

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿಯ ಎಸ್ಬಿಎಂ ಸ್ಯಾನಿಟೇಶನ್ ಮತ್ತು ಹೈಜಿನ್ ಜಿಲ್ಲಾ ಸಮಾಲೋಚಕಿ ಬಸಮ್ಮ ಹುಡೇದ ಮಾತನಾಡಿ, ಪ್ರತಿಯೊಬ್ಬ ಹೆಣ್ಣು ಮಗಳು ಮಾಸಿಕ ಋತುಚಕ್ರದ ಸಂದರ್ಭದಲ್ಲಿ ವೈಯಕ್ತಿಕ ಶುಚಿತ್ವಕ್ಕ ಒತ್ತು ನೀಡಬೇಕು.  ತಪ್ಪಿದಲ್ಲಿ ಹೆಣ್ಣು ಮಕ್ಕಳಲ್ಲಿರುವ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಅನೇಕ ರೋಗಗಳು ತಗಲುವ ಸಾಧ್ಯತೆ ಇರುತ್ತದೆ. ಪ್ರೌಢ ಹೆಣ್ಣು ಮಗಳು ಬಯಲು ಬಹರ್ಿದೆಸೆ ಹೋಗದೆ ಮನೆಯಲ್ಲಿ ನಿರ್ಮಿಸಿಕೊಂಡ ವೈಯಕ್ತಿಕ ಶೌಚಾಲಯದ ಬಳಕೆಗೆ ಆದ್ಯತೆ ನೀಡಿ, ಸುತ್ತ-ಮುತ್ತಲು ನೈರ್ಮಲ್ಯ ಕಾಪಾಡಬೇಕು ಎಂದು ಅವರು ಹೇಳಿದರು. ಪ್ರಸಕ್ತದಲ್ಲಿ ಹೆಣ್ಣು ಮಕ್ಕಳು ಋತುಚಕ್ರ ನಿರ್ವಹಣೆ ಕುರಿತು ತಪ್ಪು ಕಲ್ಪನೆ ಇರುವದರಿಂದ ಅನೇಕ ಒತ್ತಡಗಳಿಗೆ ಒಳಗಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೊಪ್ಪಳ ಜಿಲ್ಲಾ ಪಂಚಾಯತಿ ವತಿಯಿಂದ ಪ್ರೌಢ ವಯಸ್ಸಿನ ಹೆಣ್ಣು ಮಕ್ಕಳಿಗೆ ಮಾಸಿಕ ಋತುಚಕ್ರ ಸಂದರ್ಭದಲ್ಲಿ ಅನುಭವಿಸುವ ತೊಂದರೆಗಳ ಕುರಿತು ಮಾಹಿತಿಯನ್ನು ವಿಡಿಯೋ ಸಹಿತಿ ಪ್ರೊಜೆಕ್ಟರ್ ಮೂಲಕ ಮಾಹಿತಿ ಪ್ರದರ್ಶನ ಮಾಡಲಾಯಿತು. ನಂತರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಋತುಚಕ್ರ ನಿರ್ವಹಣೆ ಹಾಗೂ ವೈಯಕ್ತಿಕ ಶುಚಿತ್ವ ಮತ್ತು ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ವಿಡಿಯೋಗಳನ್ನು ಹೆಣ್ಣು ಮಕ್ಕಳಿಗೆ ಅರಿವು ಮೂಡಿಸಲು ಪ್ರದರ್ಶನ ಮಾಡಲಾಯಿತು.

       ಆಪ್ತ ಜಿಲ್ಲಾ ಸಮಾಲೋಚಕಿ ಸ್ವರೂಪರಾಣಿ ಮಾತನಾಡಿ,  ಆರೋಗ್ಯ ಇಲಾಖೆಯಿಂದ ಶುಚಿ ಕಾರ್ಯಕ್ರಮ ಕುರಿತು ಹಾಗೂ ಋತುಚಕ್ರ ನಿರ್ವಹಣೆ ಕುರಿತು ಪ್ರತಿಯೊಬ್ಬ ಹೆಣ್ಣು ಮಕ್ಕಳು ಕಿರು ಚಿತ್ರದಲ್ಲಿ ಪ್ರದಶರ್ಿಸಲಾದ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವೈಯಕ್ತಿಕ ಶುಚಿತ್ವಕ್ಕೆ ಆದ್ಯತೆ ನೀಡಿ ಸ್ವಸ್ಥ ಸಮಾಜ ನಿಮರ್ಿಸುವಲ್ಲಿ ಎಲ್ಲಾ ಹೆಣ್ಣು ಮಕ್ಕಳು ವೈಯಕ್ತಿಕ ಗಮನಹರಿಸಬೇಕೆಂದು ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಆರ್.ಸಿ.ಎಚ್.ಒ. ಕಾರ್ಯಾಲಯದ ಜೈಹಿಂದ್, ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವೆಂಕಟರಡ್ಡಿ, ಪಿಡಿಒ ವೀರನಗೌಡ ತಾಲ್ಲೂಕ ಎಸ್ಬಿಎಂ ಯುನಿಸೆಫ್ ಸಂಯೋಜಕ ಬಸವರಾಜ ಸೂಡಿ ಸೇರಿದಂತೆ ಪ್ರೌಢಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ 150 ಹೆಣ್ಣು ಮಕ್ಕಳು ಹಾಜರಿದ್ದರು.