ಸ್ವಚ್ಛ ಪರಿಸರವೇ ಆರೋಗ್ಯದ ಗುಟ್ಟು : ಮಾಜಿ ಶಾಸಕ ಫಿರೋಜ್ ಶೇಠ

ಲೋಕದರ್ಶನ ವರದಿ

ಬೆಳಗಾವಿ,21:  ಸ್ಥಳೀಯ ಮಹಾತೇಂಶ ನಗರ ಬೃಂದಾವನ ಕಾಲನಿಯಲ್ಲಿ ರೋಜ್ ಲೇಡಿಜ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಈದ್- ಮಿಲಾದ ಪ್ರಯುಕ್ತವಾಗಿ ಮುಸ್ಲಿಂ ಸಮಾಜ ಮಹಿಳೆಯರಿಂದ ಸಸಿ ನೆಡುವ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಪಿರೋಜ್ ಶೇಠ ಚಾಲನೆ ನೀಡಿ ಮಾತನಾಡಿ,ಮುಸ್ಲಿಂ ಸಮಾಜದ ಮಹಿಳೆಯರು ಅಡುಗೆ-ಮನೆಗೆ ಮಾತ್ರ ಸೀಮಿತವಾಗಿರದೇ,  ಸುತ್ತ ಮುತ್ತಲಿನ ನಗರವನ್ನು ಸುಂದರ ಮತ್ತು ಸ್ವಚ್ಛಗೊಳಿಸಲು ಪ್ರಯತ್ನನಕ್ಕೆ ಮುಂದಾಗಬೇಕಿದೆ. 

ಪರಿಸರ ಬಗ್ಗೆ ಹೇಚ್ಚಿನ ಕಾಳಜಿಯನ್ನು ನಾವೇಲ್ಲರೂ ವಹಿಸಿಕೊಂಡಾಗ ಮಾತ್ರ ಆರೋಗ್ಯ ದಿಂದ ಇರಲು ಸಾಧ್ಯ. ಸ್ವಚ್ಛ ಪರಿಸರವೇ ನಮ್ಮ ಆರೋಗ್ಯದ ಗುಟ್ಟು, ಇದರಿಂದ ಸ್ವಚ್ಛತೆಯನ್ನು ಕಾಪಾಡಿಕೊಂಡತ್ತಾಗುತ್ತದೆ. ಸ್ವಂತ ಜವಾಬ್ದಾರಿ ವಹಿಸಿಕೊಂಡು ಅತ್ಯುತ್ತಮವಾಗಿ ಬೆಳೆಯಲು ಶ್ರಮಿಸಬೇಕೆಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಧುರೀಣ ಪ್ಶೆಜಾನ್ ಶ್ಭೆಠ, ನಗರ ಸೇವಕ ಪಹೀಮ ನಾಯಕವಾಡಿ, ಸಲೀಮ ಮುಲ್ಲಾ, ಶ್ಯಾಮ್ ಕದಂ, ಶಂಶುದ್ದೀನ ನದಾಪ, ಯೂಸೂಪ್ ಬಾಷಾ, ನದೀಮ, ನಜೀರ , ರೋಜ್ ಲೇಡಿಜ್ ಅಸೋಸಿಯೇಷನ್ ಅಧ್ಯಕ್ಷೇ ಫಾಮೀದಾ ಖಾನಂ, ಉಪಾಧ್ಯಕ್ಷ ಪ್ರೋ. ಯಾಸ್ಮೀನ್ ಬೇಗಂ ನದಾಪ್, ಕಾರ್ಯದಶರ್ಿ ಮೆಹಕ ಮುಲ್ಲಾ, ಸರ್ವ ಸದಸ್ಯರು ಹಾಗೂ 

ಉಪಸ್ಥಿತರಿದ್ದರು.