12ನೆಯ ತರಗತಿ ಸಿ.ಬಿ.ಎಸ್‌.ಇ ಫಲಿತಾಂಶ: ವಿದ್ಯಾನಿಕೇತನ ಪಬ್ಲಿಕ್ ಶಾಲೆ ಫಲಿತಾಂಶ 100ಕ್ಕೆ 100

Class 12 CBSE Results: Vidyaniketan Public School Result 100 out of 100

ಶ್ರೀರಾಮನಗರ 13: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯು (ಸಿ.ಬಿ.ಎಸ್‌.ಇ) 2024-25ನೆಯ ಸಾಲಿನ 12ನೆಯ ತರಗತಿಯ ಫಲಿತಾಂಶವನ್ನು ಪ್ರಕಟಿಸಿದ್ದು, ಗಂಗಾವತಿ ತಾಲ್ಲೂಕಿನ ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್ ಶಾಲೆಯು ಈ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶವನ್ನು ದಾಖಲಿಸಿದೆ. ಪರೀಕ್ಷೆಗೆ ಹಾಜರಾದ ಶಾಲೆಯ ಒಟ್ಟು 111 ವಿದ್ಯಾರ್ಥಿಗಳಲ್ಲಿ, 77 ವಿದ್ಯಾರ್ಥಿಗಳು ಉನ್ನತ ಶ್ರೇಣಿ (ಡಿಸ್ಟಿಂಕ್ಷನ್)ಯಲ್ಲಿ ಹಾಗೂ 30 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು 04 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಶಾಲೆಯು ಶೇಕಡಾ 100ರಷ್ಟು ಶ್ರೇಷ್ಠ ಫಲಿತಾಂಶವನ್ನು ಸಾಧಿಸಿದೆ. ಶಾಲೆಯ ಪ್ರೀತಮ್‌. ನುಚಿನ್ ಶೇ, 93.2(466/500) ಅಂಕಗಳನ್ನು ಗಳಿಸುವ ಮೂಲಕ ಅಭೂತಪೂರ್ವ ಸಾಧನೆಗೈದಿದ್ದಾರೆ. ಅದೇ ರೀತಿ ಬಸವರಾಜ್‌. ಶೇ.92.8(464/500), ಮೇಘನಾರಾಮ್ ಶೇ.92.6 (463/500), ಶರಣಬಸವ. ಕೆ ಶೇ.91.8 (459/500)ರಷ್ಟು ಅಂಕಗಳನ್ನು ಪಡೆಯುವ ಮೂಲಕ ಅತ್ಯುತ್ತಮ ಸಾಧನೆಗೈದಿದ್ದಾರೆ.  

ಇಂತಹ ಉತ್ತಮ ಫಲಿತಾಂಶ ದಾಖಲಿಸುವ ಮೂಲಕ ಶ್ರೇಷ್ಠ ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಸೂರಿಬಾಬು ನೆಕ್ಕಂಟಿ ಅವರು ಅಭಿನಂದಿಸಿದ್ದಾರೆ. ಅದೇ ರೀತಿ ಸೂಕ್ತ ಮಾರ್ಗದರ್ಶನ ನೀಡಿದ ಸಂಸ್ಥೆಯ ನಿರ್ದೇಶಕರು, ಪ್ರಾಂಶುಪಾಲರು ಮತ್ತು ಶಿಕ್ಷಕವೃಂದವನ್ನು ಅಭಿನಂದಿಸಿ, ಉತ್ತಮ ಸಹಕಾರ ಹಾಗೂ ಪ್ರೋತ್ಸಾಹ ನೀಡಿದ ಎಲ್ಲ ಪಾಲಕರಿಗೆ ಸಂಸ್ಥೆಯ ಅಧ್ಯಕ್ಷರು ಧನ್ಯವಾದಗಳನ್ನು ತಿಳಿಸಿದರು.