ಹುಬ್ಬಳ್ಳಿಯಿಂದ ಹೆಬ್ಬಳ್ಳಿಗೆ ಸಿಟಿ ಬಸ್ಸ್ ವ್ಯವಸ್ಥೆ ಕಲ್ಪಿಸಲು ಆಗ್ರಹ

 

ಲೋಕದರ್ಶನ ವರದಿ

ಹೆಬ್ಬಳ್ಳಿ 31: ಹುಬ್ಬಳ್ಳಿಯಿಂದ ಹೆಬ್ಬಳ್ಳಿ ಗ್ರಾಮಕ್ಕೆ ಬಸ್ಸಿನ ವ್ಯವಸ್ಥೆಯಿದ್ದು ತಾಸಿಗೆ ಒಂದರಂತೆ ಬಸ್ಸುಗಳು ಓಡಾಡುತ್ತಿವೆ. ಆ ಬಸ್ಸುಗಳೆಲ್ಲ ದಿನನಿತ್ಯ ತುಂಬಿಕೊಂಡು ಹೋಗುತ್ತಿವೆ ಆದರೆ ಯಾವಾಗ ಹುಬ್ಬಳ್ಳಿಯಿಂದ ಬಸ್ಸುಗಳು ಆರಂಭವಾದವು ಅಂದಿನಿಂದ ಮಾಪ್ಸಲ್ ಬಸ್ಸಿನ ದರವನ್ನು ನೀಡಿ ಜನರು ಹೆಚ್ಚಿನ ಹಣವನ್ನು ಸಾರಿಗೆ ಇಲಾಖೆಗೆ ವ್ಯಯಿಸುತ್ತಿದ್ದಾರೆ. ಆದರೆ ಹುಬ್ಬಳ್ಳಿಯಿಂದ ಹೆಬ್ಬಳ್ಳಿಗೆ ಅಂತರ 15 ಕಿ, ಮೀ ಇದ್ದು ಬಡವರು ಕೂಲಿ ಕಾಮರ್ಿಕರಿಗೆ ಇದು ಹೆಚ್ಚಿನ ಹೊರೆಯಾಗಿದೆ. ಈ ಕುರಿತು ಸಾಕಷ್ಟು ಸಲ ಮನವಿ ಮಾಡಿದ್ದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಇತ್ತಿಚೇಗೆ ಎರಡು ವರ್ಷಗಳಿಂದ ಶಾಲಾ ಕಾಲೇಜು ಮಕ್ಕಳು ಹೆಬ್ಬಳ್ಳಿ, ಶಿವಳ್ಳಿ, ಮಾರಡಗಿ, ಗೋವನಕೊಪ್ಪ, ತಲವಾಯಿ ವನಹಳ್ಳಿ ಕನಕೂರ ಇಷ್ಟು ಗ್ರಾಮಗಳ ಜನರು ಮತ್ತು ವಿದ್ಯಾಥರ್ಿಗಳು ಪ್ರತಿದಿನ ಹುಬ್ಬಳ್ಳಿಗೆ ಸಂಚರಿಸುತ್ತಿದ್ದಾರೆ. ಆದರೂ ಕೂಡ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಿಲ್ಲ ಮತ್ತು ಸಿ ಟಿ ಬಸ್ಸ ವ್ಯವಸ್ಥೆ ಆಗಿಲ್ಲ  ಈ ಕುರಿತು ಸಾರಿಗೆ ಸಚಿವರಾದ ಡಿ, ಸಿ, ತಮ್ಮಣ್ಣ ಅವರಿಗೆ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ರತ್ನವ್ವ ಸುಣಗಾರ, ಉಪಾಧ್ಯಕ್ಷರಾದ ರಮೇಶ ಧಾರವಾಡ ಭೇಟಿ ಮಾಡಿ ಈ ಕುರಿತು ಮನವಿಯನ್ನು ಸಲ್ಲಿಸಿದ್ದಾರೆ.

       ಧಾರವಾಡದ ಸಬರಬನ್ 23ನೇ ಬಸ್ಸು ಇತ್ತಿಚೆಗೆ ಅನೇಕ ತಿಂಗಳುಗಳಿಂದ ಸ್ಥಗಿತಗೊಂಡಿದ್ದು ಆ ಬಸ್ಸನ್ನು ಆರಂಭಿಸಲು ಇದೇ ಸಂದರ್ಭದಲ್ಲಿ ವಿನಂತಿಸಲಾಯಿತು. ಈ ನಮ್ಮ ಮನವಿಗೆ ಇಲಾಖೆ ಒಂದು ವಾರದೊಳಗಾಗಿ ಸ್ಪಂದಿಸಿ ನಮಗೆ ಹುಬ್ಬಳ್ಳಿಯಿಂದ ಹೆಬ್ಬಳ್ಳಿಗೆ ಸಿ ಟಿ ಬಸ್ಸ ವ್ಯವಸ್ಥೆ ಸಂಪಕರ್ಿಸಬೇಕು. ಒಂದು ವೇಳೆ ತಪ್ಪಿದಲ್ಲಿ ರಸ್ತೆ ಬಂದು ಮಾಡಿ ವಿದ್ಯಾಥರ್ಿಗಳು ಹಾಗೂ ಗ್ರಾಮಸ್ಥರು ರಸ್ತೆ ತಡೆ ನಡೆಸುವರು.