ನಾವು ಹೇಳಿದ್ದು ಒಂದು ಕೆಲಸ ಆಗ್ತಾ ಇಲ್ಲ ಎಂದು ಜನ ಉಗಿಯುತಿದ್ದಾರೆ

City Council General Assembly

ನಗರಸಭೆ ಸಾಮಾನ್ಯ ಸಭೆ 

ಜಮಖಂಡಿ 23 : ಸದ್ದು ಗದ್ದಲಗಳ ಮದ್ಯೆ ನಗರಸಭೆ ಸಾಮಾನ್ಯ ಸಭೆ ನಡೆಯಿತು. ನಗರ ಸಭೆಗೆ ಆಯ್ಕೆಯಾಗಿ 5 ವರ್ಷಗಳು ಕಳೆಯಲು ಬಂತು. ನಮ್ಮ ವಾರ್ಡಿನ ಜನ ನಮಗೆ ಚಿ,, ತೂ,, ಅಂತ ಉಗಿಯುತಿದ್ದಾರೆ, ನಾವು ಹೇಳಿದ್ದು ಒಂದು ಕೆಲಸ ಆಗ್ತಾ ಇಲ್ಲ, ಜನ ಹೊಯಿಕೊಳ್ತಿದ್ದಾರೆ. ಪ್ರತಿ ತಿಂಗಳು ಸದಸ್ಯರ ಸಭೆ ನಡೆಸಿ ಕುಂದುಕೊರತೆ ಆಲಿಸಿ ಅಲ್ಲಿಯವರೆಗೂ ನಾನು ಇಲ್ಲಿಂದ ಹೊಗುವುದೇ ಇಲ್ಲ ಎಂದು ನಗರಸಭೆ ಸದಸ್ಯನಿ ಮಲ್ಲವ್ವ ಪಾಯಗೊಂಡ ಆಕ್ರೋಶ ವ್ಯಕ್ತಪಡಿಸಿದರು. 

ನಗರಸಭೆ ಸಭಾ ಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದ್ದು, ಗದ್ದಲ ನಡುವೆ ಸಾಮಾನ್ಯ ಸಭೆ ನಡೆಯಿತು. ಇದಕ್ಕೆ ಉಳಿದ ಸದಸ್ಯರು ಧ್ವನಿ ಗೂಡಿಸಿ ಪ್ರತಿತಿಂಗಳು ಸಭೆ ನಡೆಸಬೇಕು, ಪ್ರಗತಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸಬೇಕು ಎಂದು ಏರುಧ್ವನಿಯಲ್ಲಿ ಒತ್ತಾಯಿಸಿದರು. ಇದರಿಂದ ಸಭೆಯಲ್ಲಿ ಕೆಲಗಾಲ ಗೊಂದಲದ ವಾತಾವರಣ ಉಂಟಾಯಿತು. 

ನಗರದಲ್ಲಿನ ಬೀದಿ ದನಗಳಿಂದ ಸಾವು ನೋವುಗಳಾಗುತ್ತಿವೆ. ಅವುಗಳನ್ನು ಗೋ ಶಾಲೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಿ, ಇಲ್ಲ ಬೀದಿ ದನಗಳ ಮಾಲಿಕರಿಗೆ ಕಟ್ಟುನಿಟ್ಟಾಗಿ ವಾನಿಂರ್ಗ್ ನೀಡಿ, ದಂಡ ಕಟ್ಟಿ ಅವರಿಗೆ ಮನವರಿಕೆ ಮಾಡಿ ಇದರಿಂದ ಸಮಸ್ಯೆ ಬಹಳಷ್ಟು ಕಡಿಮೆಯಾಗುತ್ತದೆ ಎಂದು ನಗರಸಭೆ ಅಧ್ಯಕ್ಷ ಸೂಚಿಸಿದರು. 

ನಗರದಲ್ಲಿ ಬೀದಿ ನಾಯಿಗಳ ಸಂತತಿ, ಉಪಟಳ ಬಹಳಷ್ಟಾಗುತ್ತಿದೆ ಕೂಡಲೆ ಅವುಗಳ ನಿಯಂತ್ರಣ ಮಾಡಬೇಕು ಎಂದು ಸಂತಾಣ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಲಾಗುವುದು ಈ ಕುರಿತು ಬೆಂಗಳೂರಿನ ಕಂಪನಿಯೊಂದಿಗೆ ಟೆಂಡರ್ ಪ್ರಕ್ರಿಯೇಯಾಗಿದೆ ಎಂದು  

ಪೌರಾಯುಕ್ತ ಜ್ಯೋತಿ ಗೀರೀಶ ತಿಳಿಸಿದರು.  

ನಗರದಲ್ಲಿನ ರಸ್ತೆಗಳಿಗೆ ನಾಮಫಲಕಗಳನ್ನು ಅಳವಡಿಸಲಾಗುವುದು. ನಗರಸಭೆ ವ್ಯಾಪ್ತಿಯಲ್ಲಿ ಇರುವ ಇಂಡಸ್ಟ್ರೀಯಲ್ ಏರಿಯಾ ರಾಮ್ ಭಾಗವನ್ನು ನಗರಸಭೆಗೆ ಸೆರೆ​‍್ಡ ಮಾಡಿಕೊಳ್ಳಲಾಗುವುದು ಇದರಿಂದ ಟ್ಯಾಕ್ಸ್‌ ಆದಾಯ ಬರುತ್ತದೆ.ಪ್ರತಿ ಅಂಗಡಿ,ಮುಂಗಟ್ಟುಗಳಿಂದ ಕಳೆದ ಎರಡು ವರ್ಷದಿಂದ ಅಂಗಡಿಗಳ ಲೈಸನ್ಸ್‌ ನವೀಕರಣ ಹಾಗೂ ಹೊಸ ಲೈಸನ್ಸ್‌ ಬಗ್ಗೆ ತೆರಿಗೆಯನ್ನು ವಸೂಲಿ ಮಾಡದೆ ಇರುವಕಾರಣ ನಗರಸಭೆಗೆ ಸಾಕಷ್ಟು ನಷ್ಟವಾಗುತ್ತಿದೆ ಎಂದು ಸದಸ್ಯ ಸಿದ್ದು ಮೀಶಿ ಪೌರಾಯುಕ್ತರಗೆ ತಿಳಿಸಿದರು. 

ನಗರ ಪ್ರದೇಶದಲ್ಲಿನ ರಸ್ತೆ ಸೇರಿದಂತೆ ಒತ್ತುವರಿ ಪ್ರದೇಶಗಳನ್ನು ತೆರವುಗೊಳಿಸಬೇಕು, ಕೂಡಲೇ ಮಾಸ್ಟರ್ ಪ್ಲ್ಯಾನ್ ಜಾರಿಗೆ ತೆಗೆದುಕೊಂಡು ಬನ್ನಿ ಎಂದು ಎಲ್ಲ ಸದಸ್ಯರು ತಿಳಿಸಿದರು. ಸದಸ್ಯರಾದ ರಾಜೇಸಾಬ ತೇಲಸಂಗ, ಈಶ್ವರ ವಾಳೆನ್ನವರ, ದಿಲಾವರ ಶಿರೋಳ, ಕಿರಣ ಪಿಸಾಳ, ಸುನೀಲ ಶಿಂದೆ, ಕುಶಾಲ ನಾಗೋರೆ ಸಭೆಯಲ್ಲಿ ಮಾತನಾಡಿದರು. 

ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ಉಪಾಧ್ಯಕ್ಷೆ ರೇಖಾ ಕಾಂಬಳೆ, ಪೌರಾಯುಕ್ತ ಜೋತಿ ಗೀರೀಶ ಇದ್ದರು.