ರಾಯಬಾಗ: ಪೌರತ್ವತಿದ್ದು ಪಡಿ ಕಾಯ್ದೆ ಜನಜಾಗೃತಿ ಸಭೆ

ಲೋಕದರ್ಶನ ವರದಿ

ರಾಯಬಾಗ 05:  60 ವರ್ಷಗಳ ಕಾಲ ದೇಶದಲ್ಲಿಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷ ಮುಸ್ಲಿಂ ಮತ್ತು ದಲಿತರನ್ನು ವೋಟ್ ಬ್ಯಾಂಕ್ ಆಗಿ ಮಾತ್ರ ಬಳಸಿಕೊಂಡಿದೆ ಹೊರತು ಅವರ ಏಳ್ಗೆಗಾಗಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂದು ಶಾಸಕ ಡಿ.ಎಮ್.ಐಹೊಳೆ ಆರೋಪಿಸಿದರು.

ತಾಲೂಕಿನ ದಿಗ್ಗೇವಾಡಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೌರತ್ವತಿದ್ದು ಪಡಿ ಕಾಯ್ದೆ-2019 ಜನಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಹಾಲಿ ಇರುವ ನಾಗರಿಕರಿಗೆ ಯಾವುದೇ ತೊಂದರೆ ಇಲ್ಲ. ಕಾಂಗ್ರೆಸ್ ಮತ್ತು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸಿಎಎ ವಿರೋಧಿಸುತ್ತಿದ್ದು, ಜನರಿಗೆತಪ್ಪು ಮಾಹಿತಿ ನೀಡಿಗೊಂದಲ ಸೃಷ್ಠಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮೀತ ಶಾ ಅವರು ಎಲ್ಲ ಧರ್ಮಗಳನ್ನು ಜೊತೆಯಾಗಿಸಿ, ದೇಶವನ್ನು ಅಭಿವೃದ್ಧಿ ಪಥದಲ್ಲಿ ನಡೆಸುತ್ತಿದ್ದಾರೆ ಎಂದರು.

ಯುವಧುರೀಣ ಸದಾನಂದ ಹಳಿಂಗಳಿ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನರಲ್ಲಿ ಇರುವ ಗೊಂದಲವನ್ನು ಹೋಗಲಾಡಿಸಿಲು ಬಿಜೆಪಿ ಪಕ್ಷದಿಂದ ಪ್ರತಿಗ್ರಾಮದಲ್ಲಿ ಜನಜಾಗೃತಿ ಅಭಿಯಾನ ನಡೆಸಲಾಗುತ್ತಿದೆ ಎಂದರು. ಬಿಜೆಪಿ ಪಕ್ಷ ಮುಸ್ಲಿ ಮತ್ತುದಲಿತರ ವಿರೋಧಿಯಲ್ಲ. ಕಾಂಗ್ರೆಸ್ ಪಕ್ಷದವರು ಜನರಲ್ಲಿ ತಪ್ಪು ಮಾಹಿತಿ ನೀಡಿ, ದೇಶದಲ್ಲಿ ಪ್ರತಿಭಟನೆ ನಡೆಸಿ, ಅಶಾಂತಿ ಸೃಷ್ಠಿಸುತ್ತಿದ್ದಾರೆಂದು ಆರೋಪಿಸಿದರು.

ಬಿಜೆಪಿ ರಾಯಬಾಗ ಮಂಡಲ ಅಧ್ಯಕ್ಷ ಬಸವರಾಜ ಡೊಣವಾಡೆ, ಡಿಕೆಎಸ್ಎಸ್ಕೆ ನಿದರ್ೇಶಕ ಮಲ್ಲಪ್ಪ ಮೈಶಾಳೆ, ಪ.ಪಂ.ಸದಸ್ಯ ಜಿಯಾವುಲ್ಲಾ ಮುಲ್ಲಾ, ಸತ್ಯಪ್ಪ ಬಾನೆ, ಮುಸಾ ಜಮಾದಾರ, ಗಂಗಾಧರ ಮೈಶಾಳೆ, ಆಯ್.ಕೆ.ಜಮಾದಾರ, ರಮಜಾನ ಮಕಾಂದಾರ, ದಿಲಾವರ ಜಮಾದಾರ, ಸರಫುದ್ದಿನ ಜಮಾದಾರ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.