ನವದೆಹಲಿ, 11 ಪೌರತ್ವ ತಿದ್ದುಪಡಿ ಮಸೂದೆ ಐತಿಹಾಸಿಕ
ಮಸೂದೆ ಹೀಗಾಗಿ ಸಂಸತ್ತಿನ ಎರಡೂ ಮನೆಯಲ್ಲಿ ಅಂಗೀಕಾರ
ಪಡೆಯಲಿದೆ ಎಂಬ ವಿಶ್ವಾಸವನ್ನು ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸಂಸದೀಯ ಪಕ್ಷದ
ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು. ಎಂದು ಸಭೆಯ ಬಳಿಕ ಸಂಸದಿಯ ವ್ಯವಹಾರಗಳ ಸಚಿವ ಸಚಿವ ಪಲ್ಲಾದ್ ಜೋಶಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಧರ್ಮದ ಆಧಾರದ ಮೇಲೆ
ಕಿರುಕುಳಕ್ಕೆ ಒಳಗಾದ ಜನರ ಏಳಿಗೆಗಾಗಿ ತಂದಿರುವ
ಪೌರತ್ವ ಮಸೂದೆ ನಿಜಕ್ಕೂ ಸುವರ್ಣಾಕ್ಷರಗಳಲ್ಲಿ ಬರೆದಿಡಲಾಗುವಂತಹದ್ದು
ಎಂದು ಪ್ರಧಾನಿ ಮೋದಿ ತಿಳಿಸಿದರು ಎಂದು ಜೋಶಿ ಹೇಳಿದರು.ಈಗಾಗಲೇ ಲೋಕಸಭೆಯಲ್ಲಿ
ಅಂಗೀಕಾರವಾಗಿರುವ ಮಸೂದೆಗೆ ರಾಜ್ಯಸಭೆಯಲ್ಲೀ ಒಪ್ಪಿಗೆ ದೊರಕಲಿದೆ ಎಂಬ ವಿಶ್ವಾವನ್ನು ಅವರು ವ್ಯಕ್ತಪಡಿದರು. ಪೌರತ್ವ ತಿದ್ದುಪಡಿ
ಮಸೂದೆ ವಿಚಾರವಾಗಿ ಪ್ರತಿಪಕ್ಷಗಳು ಪಾಕಿಸ್ತಾನ ಭಾಷೆಯನ್ನು ಬಳುಸುತ್ತಿವೆ ಎಂದು ಪ್ರಧಾನಿ,ಅಸಮಾಧಾನ ಹೊರಹಾಕಿದರು.