ಮಹಾಲಿಂಗಪುರ : ಎಸ್ ಸಿ ಪಿ ಕೆಎಲ್ ಇ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಗಾಗಿ ಪೌರತ್ವ ಕಾಯ್ದೆ ತಿದ್ದುಪಡಿ ಅರಿವು ಕಾರ್ಯಕ್ರಮ ಜ. 08ರಂದು ನಡೆಯಿತು.
ಹಿಂದೂ ಜಾಗರಣೆ ವೇದಿಕೆಯ ನಂದು ಗಾಯಕವಾಡ ಮಾತನಾಡಿ, ಇಂದಿನ ಯುವಕರು ದೇಶಭಕ್ತರಾಗಿ ದೇಶಕ್ಕಾಗಿ ದುಡಿಯುವಂತಾಗಬೇಕು. ಭವ್ಯ ಭಾರತದ ಸ್ವಾತಂತ್ರ್ಯವನ್ನು ಪಡೆಯಲು ಅನೇಕ ಸಮುದಾಯಗಳ ಜನತೆ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ . ಲಕ್ಷಾಂತರ ಕುಟುಂಬಗಳು ದೇಶಕ್ಕಾಗಿ ಬೀದಿ ಪಾಲಾಗಿವೆ ಆದರೂ ದೇಶದ ಸ್ವಾತಂತ್ರ್ಯದಲ್ಲಿ ತಮ್ಮದೇ ಆದ ಸ್ವಾಭಿಮಾನದ ಯೋಗದಾನವನ್ನು ನೀಡಿದ್ದಾರೆ. ಆದ್ದರಿಂದ ಇವತ್ತು ನಮ್ಮ ದೇಶದಲ್ಲಿ ಸರ್ವರೂ ಸುಖವಾಗಿದ್ದೇವೆ. ಕಷ್ಟಕ್ಕೊಳಗಾದ ನಾಗರೀಕರ ಪರವಾಗಿ ಕೇಂದ್ರದ ಸಿಎಎ ಕಾಯ್ದೆ ಜಾರಿಯಾಗಿದೆ. ಇದರಿಂದ ಯಾವ ಜಾತಿ ಜನಾಂಗದವರಿಗೂ ತೊಂದರೆ ಇಲ್ಲ. ಇದರ ಪ್ರಯುಕ್ತ ಅರಿವು ಕಾರ್ಯಕ್ರಗಳನ್ನು ರಾಷ್ಟದಾದ್ಯಂತ ಹಮ್ಮಿಕ್ಕೊಳ್ಳಲಾಗಿದೆ ಎಂದರು.
ಜಿಲ್ಲಾ ಸಿ.ಎ.ಎ ಅರಿವು ಸಂಚಾಲಕ ಶಂಕರ ಹುನ್ನೂರ, ಮಾಜಿ ಪುರಸಭಾ ಅಧ್ಯಕ್ಷ ಜಿ ಎಸ್ ಗೊಂಬಿ ಮಾತನಾಡಿದರು. ಪ್ರಾಚಾರ್ಯ ಎಸ್ ಐ ಕುಂದಗೋಳ ಇದ್ದರು.