ಪೌರತ್ವ ತಿದ್ದುಪಡಿ ಕಾಯ್ದೆ: ಬೀದಿಗಿಳಿದ ಮಮತಾ ಬ್ಯಾನರ್ಜಿ

ಕೋಲ್ಕತ್ತಾ, ಡಿ,  18 ಪಶ್ಚಿಮ ಬಂಗಾಳದಲ್ಲಿ  ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ  ವಿರೋಧಿಸಿ  ಪ್ರತಿಭಟನೆ ಮುಂದುವರೆದಿದ್ದರೂ ಯಾವುದೇ   ಹೊಸ ಹಿಂಸಾಚಾರದ ಘಟನೆ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ಆದರೆ, ಮಂಗಳವಾರ ರಾತ್ರಿ ಹೌರಾ ಜಿಲ್ಲೆಯ ಸಂಕ್ರೈಲ್ ಪ್ರದೇಶದಲ್ಲಿ ಚಳವಳಿಗಾರರ ಗುಂಪು ಕಚ್ಚಾ ಬಾಂಬ್‌  ಎಸೆದಿದ್ದರಿಂದ ಹಿರಿಯ ಪೊಲೀಸ್ ಅಧಿಕಾರಿ ಮತ್ತು ಇತರೆ  ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ.ಹೌರಾ ನಗರ ಪೊಲೀಸ್ ಉಪ ಪೊಲೀಸ್ ಆಯುಕ್ತ  ಅಜೀತ್ ಸಿಂಗ್ ಯಾದವ್ ಅವರ ಎರಡೂ ಕಾಲುಗಳಿಗೆ ಬಾಂಬ್ ಸ್ಫೋಟದಿಂದ ಗಾಯವಾಗಿ   ನಂತರ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ ಕೋಲ್ಕತ್ತಾದ ಎಸ್ಪ್ಲನೇಡ್ ಪ್ರದೇಶದಲ್ಲಿ ಹೌರಾ ಮೈದಾನದಿಂದ ಡೊರಿನಾ ಕ್ರಾಸಿಂಗ್ ವರೆಗೆ ಪೌರತ್ವ ಕಾಯಿದೆ  ವಿರುದ್ಧ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.ಇದೆ 13 ರಿಂದ ರಾಜ್ಯದಲ್ಲಿ ಪೌರತ್ವ ಕಾಯಿದೆ  ವಿರುದ್ಧ ಪ್ರತಿಭಟನೆ ನಡೆಯುತ್ತಲಿದೆ.ಆದರೂ  ಪೊಲೀಸರು ರಾಜ್ಯಾದ್ಯಂತ ಬಿಗಿಭದ್ರತೆ ಕೈಗೊಂಡಿದ್ದಾರೆ. ಪ್ರತಿಭಟನೆಯಿಂದಾಗಿ ಪಶ್ಚಿಮ ಬಂಗಾಳದ ಮೂಲಕ ಹಾದುಹೋಗುವ ಹಲವು  ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.