ಪೌರತ್ವ ತಿದ್ದುಪಡಿ ಕಾಯ್ದೆ : ಸಂಸತ್ತಿನಲ್ಲಿ ಭಾರಿ ಕೋಲಾಹಲ

ನವದೆಹಲಿ, ಫೆ 3,ರಾಷ್ಟ್ರೀಯ  ಪೌರತ್ವ ತಿದ್ದುಪಡಿ  ಕಾಯ್ದೆ ಮತ್ತೆ ಸಂಸತ್ತಿನಲ್ಲಿ  ಭಾರಿ ಕೋಲಾಹಲ ಎಬ್ಬಿಸಿದೆ.ಲೋಕಸಭೆಯಲ್ಲಿ  ಇಂದು  ವಿರೋಧ ಪಕ್ಷದ ಸದಸ್ಯರು  ತಿದ್ದುಪಡಿ ಕಾಯ್ದೆ  ವಿರುದ್ಧ ಘೋಷಣೆಗಳನ್ನು ಕೂಗಿದರು . ಸದನವು ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಳ್ಳುತ್ತಿದ್ದಂತೆ  ಸದಸ್ಯರು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. . "ಸಿಎಎಗೆ ಬೇಡ", "ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಿ" ಮತ್ತು "ನಮ್ಮ ಸಂವಿಧಾನವನ್ನು ಉಳಿಸಿ" ಎಂದು ಸದಸ್ಯರು  ಘೋಷಣೆ ಕೂಗಿದರು. ಆಗ ಆಡಳಿತ ಮತ್ತು ವಿರೋಧಿ  ಸದಸ್ಯರನ ನಡುವೆ ನಡುವೆ ಆರೋಪ,  ಪ್ರತ್ತಾರೋಪ  ಕೇಳಿ ಬಂತು ಸದನ ಗದ್ದಲದ  ಗೂಡಾಯಿತು .

ಸ್ಪೀಕರ್ ಓಂ ಬಿರ್ಲಾ ಅವರು ಸದನದ ಯುವಕರ ಕೌಶಲ್ಯ ಅಭಿವೃದ್ಧಿಯ ಪ್ರಮುಖ ವಿಷಯವನ್ನು ತೆಗೆದುಕೊಳ್ಳಲಾಗುತ್ತಿದೆ , ಆದ್ದರಿಂದ ಸದಸ್ಯರು ಅದರಲ್ಲಿ ಭಾಗವಹಿಸಿ ತಮ್ಮ ಸ್ಥಾನಗಳಿಗೆ ಹಿಂತಿರುಗಬೇಕು ಎಂದು  ಪದೆ ಪದೆ ಮನವಿ ಮಾಡಿದರು.  ಕಲಾಪ  ಸುಗಮವಾಗಿ ನಡೆಸಲು ಅವಕಾಶ ನೀಡಬೇಕು ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪ ಮಡಲು ಅವಕಾಶ ಮಾಡಿಕೊಡುವುದಾಗಿ ಸದಸನದ ನಾಯಕರಿಗೆ ಅವರು ಮನವಿ ಮಾಡಿದರು.ಇದಕ್ಕೆ ಕಿವಿಕೊಡದ ಸದಸ್ಯರು  ಘೋಷಣೆಗಳನ್ನು ಕೂಗುವುದನ್ನು  ಮುಂದುದುವರೆಸಿದರು. ರಾಜ್ಯಸಭೆಯಲ್ಲೂ ಈವಿಷಯ ಪ್ರಸ್ತಾವವಾಗಿ ಕೋಲಾಹಲಕ್ಕೆ ಕಾರಣವಾಗಿ ಎರಡು  ಭಾರಿ ಮುಂದೂಡಲಾಗಿದೆ.