ಲೋಕದರ್ಶನ ವರದಿ
ಸಂಬರಗಿ 29: ದೇಶದ ಭೂ ಸಂಪತ್ತು ಮತ್ತು ಸಂಪತ್ತು ಕೇವಲ ಕೆಲವೇ ಜನರ ಒಡೆತನದಲ್ಲಿ ಇರುವುದರಿಂದ ದೀನದಲಿತರು ಇತರು ಹಿಂದುಳಿದ ದುರ್ಬಲರು ತುಳಿತಕ್ಕೆ ಒಳಪಟ್ಟಿರುವವರು ಎಲ್ಲಾ ಅವಕಾಶಗಳಿಂದ ವಂಚಿತರಾಗಿದ್ದು ಬಡವ ಮತ್ತು ಶ್ರೀಮಂತರ ನಡುವಿನ ವ್ಯತ್ಯಾಸ ಹೆಚ್ಚಾಗಿ ಹೋಗುತ್ತಿದ್ದು ಕಡಿಮೆ ಆಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ ಎಂದು ನ್ಯಾಯವಾದಿಗಳಾದ ಬಿ.ಪಿ.ಹೊನಕಾಂಡೆ ಹೇಳಿದರು.
ಆಜೂರ ಗ್ರಾಮದಲ್ಲಿ ರಾಷ್ಟ್ರೀಯ ಪಕ್ಷ ಚೇ ಗುವೇರಾ ಅಗ್ರಿರಯನ್ಸ್ ರಿಫಾರ್ಮಸ್ ಸೋಷಿಯಲಿಸ್ಟ್ ರೆವ್ಯೂಲೇಶನ್ ಪಾಟರ್ಿ ಆಫ್ ಇಂಡಿಯಾವನ್ನು ಉದ್ಘಾಟಿಸಿ ಮಾತನಾಡಿದ ಅವರು ದೇಶ ಸ್ವತಂತ್ರದ ನಂತರ ಸಂಪತ್ತಿನ ಸಮಾನ ಹಂಚಿಕೆ ಕನಸು ಆಗಿಬಿಟ್ಟಿದೆ. ದೇಶದ ನಾಗರೀಕರು ಬಡತನದಲ್ಲಿ ಬೆಂದು ಹೋಗಿದ್ದಾರೆ. ದೇಶದ ನಾಲ್ಕೂ ಮೂಲೆಯಲ್ಲಿ ಅಪಾರವಾದ ಸಂಪತ್ತು ಇದ್ದರೂ ಸಹ ಅದರ ಸರಿಯಾದ ಹಂಚಿಕೆ ಇಲ್ಲದ ಕಾರಣ ಬಡತನ ನಿರ್ಮೂಲನೆ ಆಳುವಂತವರಿಗೆ ಒಂದು ಮುದ್ದೆಯಾಗಿದೆ. ದೇಶದ ಪ್ರತಿ ನಾಗರಿಕರಿಗೆ ಜೀವನ ಸುಧಾರಣೆಯಾಗಬೇಕಾದರೆ ಪ್ರತಿ ಜನರು ತಲಾ ಆದಾಯ ಹೆಚ್ಚಾಗಬೇಕು. ಆವಾಗ ಮಾತ್ರ ನ್ಯಾಯ ಸಿಗುತ್ತದೆ ಎಂದು ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ ನಮ್ಮ ಪಕ್ಷ ಅಧಿಕಾರಿಕ್ಕೆ ಬಂದರೆ ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು ಅವಕಾಶ ಒದಗಿಸುವ ಸಲುವಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ಈ ವೇಳೆ ರಮೇಶಗೌಡಾ ಪಾಟೀಲ, ಜಗನ್ನಾಥ ಶಿಂಧೆ, ದಶರಥ ಸಾವಂತ, ಅನ್ನಾಸೋ ಮಾನೆ, ಸಂಜಯ ಹೊನಕಾಂಡೆ, ಮಾರುತಿ ದೇಸಾಯಿ, ಮಹೇಶ ಕಂಟೆಕರ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.