ಬಾಗಲಕೋಟೆ: ಸತ್ಯಕ್ಕಾಗಿ ಹೋರಡುವವರು ಸತ್ಯಾಗ್ರಹಿಗಳು ಸ್ವಚ್ಚತೆಗಾಗಿ ಕೆಲಸ ಮಾಡುವ ನಮ್ಮ ಕಾಮರ್ಿಕರು ಸ್ವಚ್ಚಾಗ್ರಹಿಗಳು ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಹೇಳಿದರು.
ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಸಫಾಯಿ ಕರ್ಮಚಾರಿಗಳು, ಮ್ಯಾನುವಲ್ ಸ್ಕ್ಯಾವೆಂಜರಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಸಂಬಂಧ ಇರುವ ಕಾನೂನು ಮತ್ತು ವಿವಿಧ ಇಲಾಖೆಗಳು ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಹಮ್ಮಿಕೊಂಡು ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜನಪ್ರಭುತ್ವ ವ್ಯವಸ್ಥೆಯಲ್ಲಿ ನಿಮಗಿರುವ ಸೌಲಭ್ಯಗಳನ್ನು ಪಡೆದುಕೊಂಡು ಸ್ವಾಭಿಮಾನಿಗಳಾಗಿ ಬದುಕುವಂತೆ ಪೌರಕಾಮರ್ಿಕರಿಗೆ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಕರೆ ನೀಡಿದರು.
ಪೌರ ಕಾಮರ್ಿಕರ ಮಕ್ಕಳು ಪೌರಕಾಮರ್ಿಕರಾಗದೆ ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸುವಂತಾಗಬೇಕು. ಅದಕ್ಕಾಗಿ ಪೌರ ಕಾಮರ್ಿಕರು ತಮ್ಮ ಮಕ್ಕಳಿಗೆ ಉತ್ತಮ ವಾತಾವರಣ ಸೃಷ್ಟಿಸಿ, ಶಿಕ್ಷಣದಿಂದ ಯಾವ ಮಗುವು ವಂಚಿತರಾಗದಂತೆ ನೋಟಿಕೊಳ್ಳಬೇಕು. ಸಕರ್ಾರವು ಪೌರಕಾಮರ್ಿರ ಮಕ್ಕಳಿಗಾಗಿ ಸಾಕಷ್ಟು ಅನುದಾನ ಹಾಗೂ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಸದುಪಯೋಗ ಪಡಿಸಿಕೊಳ್ಳುವ ಅರಿವು ಪೌರಕಾಮರ್ಿಕರಲ್ಲಿ ಬರಬೇಕು. ಅದಕ್ಕಾಗಿಯೇ ಈ ಕಾಯರ್ಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಬಾಗಲಕೋಟೆ ಜಿಲ್ಲೆಯನ್ನು ಸ್ಚಚ್ಛಗೊಳಿಸುವ ಮೂಲಕ ಸುಂದರ ಸಮಾಜವನ್ನು ನಿಮರ್ಾಣ ಮಾಡುತ್ತಿರುವ ಪೌರಕಾಮರ್ಿಕರು ತಮ್ಮ ಜೀವನವನ್ನು ಸುಂದರವಾಗಿಟ್ಟುಕೊಳ್ಳಬೇಕು. ತಾವು ಸಹ ಸಮಾಜದ ಮುಖ್ಯವಾಹಿನಿಗೆ ಬರಬೇಕು.
ಮಲ ಹೊರುವ ಪದ್ದತಿಯನ್ನು ಸರಕಾರ ಸಂಪೂರ್ಣ ನಿಷೇಧಿಸಿದ್ದು, ಇದನ್ನು ಉಲ್ಲಂಘಿಸಿ ಮಲ ಹೊರುವ ಹಾಗೂ ಹೊರಲು ಹೇಳಿದವರಿಗೆ ಶಿಕ್ಷೆ ನೀಡಲಾಗುತ್ತದೆ. ಆದ್ದರಿಂದ ಇಂತಹ ಪದ್ದತಿ ಕಂಡುಬಂದಲ್ಲಿ ಮಾಹಿತಿ ನೀಡಿ ಇಂತಹ ಮಲ ಹೊರುವ ಅನಿಷ್ಠ ಪದ್ದತಿಯನ್ನು ಸಂಪೂರ್ಣ ತೊಡೆದುಹಾಕಲು ಎಲ್ಲರೂ ಸಹಕರಿಸಬೇಕು. ಪೌರಕಾಮರ್ಿಕರು ಕುಡಿತ, ದುಶ್ಚಟಗಳಿಂದ ದೂರವಿರಬೇಕು. ಇಲ್ಲವಾದಲ್ಲಿ ನೀವು ದುಡಿದ ಹಣ ನಿಮ್ಮ ದುಶ್ಚಟಗಳಿಗೆ ಹಾಳು ಮಾಡಬೇಕಾಗುತ್ತದೆ. ಇದರಿಂದ ಆರೋಗ್ಯವು ಸಹ ಹಾಳಾಗುತ್ತದೆ ಎಂದರು.
ಮುಖ್ಯ ಅತಿಥಿ ಸ್ಥಾನ ವಹಿಸಿದ್ದ ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಮಾತನಾಡಿ ಬಹಳಷ್ಟು ಪೌರಕಾಮರ್ಿಕರು ಯಾವುದಾದರೊಂದು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅವರಲ್ಲಿ ಹೆಚ್ಚಾಗಿ ಕುಡಿತ, ದುಶ್ಚಟಗಳಿಗೆ ತುತ್ತಾಗಿರುವುದನ್ನು ನಾವು ಕಾಣುತ್ತಿದ್ದೇವೆ. ಇವುಗಳನ್ನು ಬಿಟ್ಟು ಆರೋಗ್ಯವಂತರಾಗಿ ಜೀವನಸಾಗಿಸಬೇಕು. ಇದರ ಜೊತೆಗೆ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಬೇಕು. ಉನ್ನತ ಶಿಕ್ಷಣ ಕೊಡಿಸಬೇಕು. ಸರಕಾರ ಸಮಾಜ ಕಲ್ಯಾಣ ಇಲಾಖೆಯ ಮೂಲಕ ವಸತಿ ನಿಲಯಗಳಲ್ಲಿ ಪೌರಕಾಮರ್ಿಕ ಮಕ್ಕಳಿಗೆ ಸೀಟುಗಳನ್ನು ಮೀಸಲಿರಿಸಲಾಗಿದೆ ಎಂದರು.
ಪೌರಕಾಮರ್ಿಕರು ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಹೆಣ್ಣು ಮಕ್ಕಳ ಮದುವೆ ಮಾಡುತ್ತಿರುವುದು ಕಂಡುಬರುತ್ತಿದ್ದು, ಇಂತಹ ಪದ್ದತಿಯನ್ನು ಸಂಪೂರ್ಣ ಹೋಗಲಾಡಿಸಲು ಮುಂದಾಗಬೇಕು. ಗ್ರಾಮ ಮತ್ತು ನಗರವನ್ನು ಸ್ವಚ್ಛವಾಗಿ ಇಡುವ ಪೌರಕಾಮರ್ಿಕರು ಸ್ವಚ್ಛತಾ ರಾಯಬಾರಿಗಳಾಗಿದ್ದಿರಿ, ಪೌರ ಕಾಮರ್ಿಕರ ಮಕ್ಕಳು ನಮ್ಮ ದೇಶ ಅಲ್ಲದೇ ವಿದೇಶದಲ್ಲಿಯೂ ಶಿಕ್ಷಣ ಪಡೆಯಲು ಸಕರ್ಾರ ವಿದ್ಯಾಥರ್ಿವೇತನ, ಸಾಲ ಸೌಲಭ್ಯಗಳನ್ನು ನೀಡುತ್ತಿದೆ ಅವುಗಳ ಅರಿವೂ ಹಾಗೂ ಶಿಕ್ಷಣದ ಕುರಿತು ಪೌರಕಾಮರ್ಿರಲ್ಲಿ ಜಾಗೃತಿ ಅಗತ್ಯವಾಗಿದೆ ಎಂದು ತಿಳಿಸಿದರು.
ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ವಕೀಲರಾದ ಶ್ರೀಧರದಾಸ ಸಫಾಯಿ ಕರ್ಮಚಾರಿ, ಮ್ಯಾನುವಲ್ ಸ್ಕ್ಯಾವೆಂಜರಗಳಿಗೆ ಇರುವ ಕಾನೂನುಗಳ ಬಗ್ಗೆ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಆರ್.ಪವಾರ ಆರೋಗ್ಯದ ಬಗ್ಗೆ ಹಾಗೂ ಕಾಮರ್ಿಕ ನಿರೀಕ್ಷಕ ಅಶೋಕ ಒಡೆಯರ ಕಾಮರ್ಿಕರಿಗೆ ಇರುವ ಸೌಲಭ್ಯಗಳ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿದರ್ೇಶಕ ಜಗದೀಶ ಹೆಬ್ಬಳ್ಳಿ, ನಗರಾಭಿವೃದ್ದಿ ಕೋಶದ ಯೋಜನಾ ನಿದರ್ೇಶಕ ವಿಜಯ ಮೆಕ್ಕಳಕಿ ಸೇರಿದಂತೆ ಇತರರು ಉಪಸ್ಥಿತರಿದ್ದರು