ಪೌರ ಕಾರ್ಮಿಕರ ಸೇವಾ ಕಾರ್ಯ ಶ್ಲಾಘನೀಯ: ಶಾಸಕ ಪೂಜಾರ

ಲೋಕದರ್ಶನವರದಿ

ರಾಣೇಬೆನ್ನೂರು10:  ದೇಶದಲ್ಲಿ ಇಂದು ಕೊರೊನಾ ವೈರಸ್ ಹರಡುವಿಕೆ ಘಟನೆಯಿಂದಾಗಿ ಅನೇಕ ರೀತಿಯಲ್ಲಿ ನಿತ್ಯವೂ ಸಮಸ್ಯೆಯನ್ನು ಎದುರಿಸುವಂತಾಗಿದೆ. ಇಂತಹ ಸಂದರ್ಭದಲ್ಲಿಯೂ ಸಹ ನಗರದ ಸಂಪೂರ್ಣ ಸ್ವಚ್ಛತೆಗಾಗಿ ನಿತ್ಯವೂ ತಮ್ಮನ್ನೇ ತಾವು ತೊಡಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಪೌರಸೇವಾ ಕಾಮರ್ಿಕರ ಸೇವಾಕಾರ್ಯವು ಅತ್ಯಂತ ಪವಿತ್ರ ಮತ್ತು ಶ್ಲಾಘನೀಯವಾಗಿದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.

ಅವರು ಗುರುವಾರ ಮುಂಜಾನೆ ನಗರಸಭಾ ಸಭಾಂಗಣದಲ್ಲಿ ಶಾಸಕ ಅರುಣಕುಮಾರ ಪೂಜಾರ ಅಭಿಮಾನಿ ಬಳಗವು ಆಯೋಜಿಸಿದ್ದ, ಪೌರಕಾಮರ್ಿಕರಿಗೆ ಅಗತ್ಯ ಆಹಾರ ದವಸ-ಧಾನ್ಯಗಳ ಕಿಟ್ಗಳ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕಾಮರ್ಿಕರ ಸೇವೆ ಸದಾ ಸ್ಮರಣೀಯವಾಗಿದೆ. ಎಂತಹ ಸಂದರ್ಭದಲ್ಲಿಯೂ ಸಹ ಅವರು ನಗರದ ಸ್ವಚ್ಛತೆ ಮತ್ತು ಶುಚಿತ್ವಕ್ಕಾಗಿ ಮಾಡುವ ಕೆಲಸ ಬಹಳ ಮಹತ್ವದ್ದಾಗಿದೆ. ನಗರದ ಜನತೆ ಸದಾ ಅವರಿಗೆ ಕೃತಜ್ಞರಾಗಿದ್ದಾರೆ.  ಇಂದಿನ ವೈರಾಣು ಹರಡುವ ಸಂದರ್ಭವಿದ್ದರೂ ಸಹ ಯಾವುದನ್ನು ಲೆಕ್ಕಿಸದೇ, ಕಾಯಕವೇ ಕೈಲಾಸ ಎನ್ನುವ ಬಸವಣ್ಣನವರ ವಾಣಿಯಂತೆ ತಮ್ಮ ಕರ್ತವ್ಯ ಮಾಡುತ್ತಿದ್ದಾರೆ. ಅದಕ್ಕಾಗಿ ಅವರ ಸೇವಾ ಕಾರ್ಯಕ್ಕೆ ತಾವು ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಕಳೆದ 15 ದಿವಸಗಳಿಂದ ಕೇಂದ್ರ ಸಕರ್ಾರದ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಜಾರಿಗೆ ತಂದಿರುವ ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ದೇಶದ ಪ್ರತಿಯೊಬ್ಬ ಕಾರ್ಯಕರ್ತರು ಕಾಯಾ-ವಾಚಾ-ಮನಸಾ ಕರ್ತವ್ಯ ನಿರತರಾಗಿದ್ದಾರೆ. 

    ಲಾಕ್ಡೌನ್ ಜನರ ಜೀವರಕ್ಷಣೆಯ ಮುಂಜಾಗೃತ ಕ್ರಮವಾಗಿದ್ದು, ಯಾರೂ ಮನೆಯಿಂದ ಹೊರಹೋಗದೇ, ಪ್ರತಿಯೊಬ್ಬರೂ ಸ್ವಯಂ ಗೃಹಬಂಧನದಲ್ಲಿ ಇದ್ದರೇ, ಆದಷ್ಟು ಬೇಗನೇ, ಲಾಕ್ಡೌನ್ ರೀಲಿಫ್ ಆಗಬಹುದು.  ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು. 

 ಈ ಸಂದರ್ಭದಲ್ಲಿ ನಗರಸಭಾ ಪೌರಾಯುಕ್ತ ಡಾ|| ಎನ್.ಮಹಾಂತೇಶ,ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ನಗರಸಭಾ ಸದಸ್ಯರಾದ ಮಲ್ಲಣ್ಣ ಅಂಗಡಿ, ಪ್ರಕಾಶ ಪೂಜಾರ, ಪರಿಸರ ಅಭಿಯಂತೆ ಮಂಜುಳಾದೇವಿ ಮುಂಡಾಸದ, ಅನಿಲ್ ಸಿದ್ಧಾಳಿ, ರಮೇಶ್ ಗುತ್ತಲ ಮಲ್ಲಿಕಾಜರ್ುನ ರೊಡ್ಡನವರ,  ಅಭಿಯಂತ ಸುರೇಶ್ ಚಲವಾದಿ, ನವರತ್ನಾ, ವೈ.ಕೆ.ಜಗದೀಶ, ಮಧು ಸಾತೇನಹಳ್ಳಿ, ಮೈಲಪ್ಪ ಗೋಣಿಬಸಮ್ಮನವರ, ಬಿಜೆಪಿ ನಗರ ಘಟಕದ ಅಧ್ಯಕ್ಷ ದೀಪಕ್ ಹರಪನಹಳ್ಳಿ ಸೇರಿದಂತೆ ಮತ್ತಿತರ ಸದಸ್ಯರು, ನಗರಸಭೆ ಸಿಬ್ಬಂದಿಗಳು, ಪೌರಕಾಮರ್ಿಕರ ಸಂಘದ-ಅಧ್ಯಕ್ಷರು ಪದಾಧಿಕಾರಿಗಳು ಪಾಲ್ಗೊಂಡಿದ್ದರು.