ಬೆಳಗಾವಿ 25: ಇಲ್ಲಿನ ರಾಮತೀರ್ಥ ನಗರದಲ್ಲಿರುವ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕ್ರೀಸ್ ಮಸ್ ಹಬ್ಬವನ್ನು ಆಚರಣೆ ಮಾಡಲಾಯಿತು.
ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಆರ್. ಮೇಳವಂಕಿ ಅವರ ನೇತೃತ್ವದಲ್ಲಿ ಕ್ರೀಸ್ ಮಸ್ ಹಬ್ಬವನ್ನು ಶಾಲಾ ಸಿಬ್ಬಂದಿಗಳು, ಮಕ್ಕಳು ಸೇರಿಕೊಂಡು ಸಂಭ್ರಮದಿಂದ ಆಚರಿಸಲಾಯಿತು. ಅಲ್ಲದೆ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳ ವಿವಿಧ ಸಂಸ್ಕೃತಿಕ ಕಾರ‌್ಯಕ್ರಮ, ಸಾಂತಾಕ್ಲಾಸ್ ಟೋಪಿ, ಚಿತ್ರಕಲೆ, ಹಾಗೂ ಕ್ರೀಸ್ ಮಸ್ ಚಿತ್ರಗಳನ್ನು ಬರೆಯುವುದರ ಮೂಲಕ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆಯುವಂತೆ ಮಾಡಿದ ಪುಟ್ಟಾನಿಗಳು ಹಾಗೂ ವಿದ್ಯಾರ್ಥಿಗಳು, ಈ ಕಾರ್ಯಕ್ರಮ ಯಶಸ್ವಿಗೊಳಿಸಿದಕ್ಕೆ ಶಾಲಾ ಮುಖ್ಯೋಪಾಧ್ಯಾಯ, ಪಾಲಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.