20ರಿಂದ ಸರಳ ರೀತಿಯಲ್ಲಿ ಚೌಗುಲೆ ಉತ್ಸವ ಆಚರಣೆ

ಲೋಕದರ್ಶನ ವರದಿ

ರಾಯಬಾಗ 25: ಪ್ರತಿ ವರ್ಷದಂತೆ ಈ ವರ್ಷವೂ ಸಹಿತ ಅ.28 ರಿಂದ 30 ರವರೆಗೆ ಚೌಗುಲೆ ಉತ್ಸವವನ್ನು ಅತ್ಯಂತ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದುಬಿ.ಎ.ಚೌಗುಲೆ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷಎಲ್.ಬಿ.ಚೌಗುಲೆ ಹೇಳಿದರು. 

ಶುಕ್ರವಾರ ಪಟ್ಟಣದ ಚೌಗುಲೆ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ಸವದ ಅಂಗವಾಗಿ ಹಾಸ್ಯ ಕಾರ್ಯಕ್ರಮ, ಮಲಕಂಬ ಮತ್ತು ಕಬ್ಬಡಿ ಸ್ಪಧರ್ೆಗಳನ್ನು ಆಯೋಜಿಸಲಾಗಿದೆ. ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಲ್ಲಿ ಪ್ರತಿ ವರ್ಷ ಓರ್ವ ಆದರ್ಶ ವಿದ್ಯಾರ್ಥಿಗೆ ಸತೀಶ ಚೌಗುಲೆ ಪ್ರಶಸ್ತಿಯನ್ನು ಈ ವರ್ಷದಿಂದ ನೀಡಲಾಗುವುದು ಎಂದು ತಿಳಿಸಿದರು.

ಅ.28 ರಂದು ಮು.10 ಗಂಟೆಗೆ ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಅವರು ಉತ್ಸವದ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ. ಸಾನಿಧ್ಯವನ್ನು ನಂದಿಕುರಳಿ ಪಂಚಲಿಂಗೇಶ್ವರ ಮಠದ ವೀರಭದ್ರ ಸ್ವಾಮೀಜಿ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಸ್ಥಾಪಕ ಅಧ್ಯಕ್ಷಎಲ್.ಬಿ.ಚೌಗುಲೆ ಹಾಗೂ ಗೌರವ ಅಧ್ಯಕ್ಷತೆಯನ್ನು ಕಾರ್ಯದರ್ಶಿ  ಅಪ್ಪಾಸಾಬ ಚೌಗುಲೆ ವಹಿಸಲಿದ್ದಾರೆ. ನಂತರ ಗುಂಡೇನಟ್ಟಿ ಮಧುಕರ ತಂಡದವರಿಂದ ನಗೆಬುಗ್ಗೆ ಹಾಸ್ಯ ಕಾರ್ಯಕ್ರಮ ಜರುಗಲಿದೆ.

ಅ.29 ರಂದು ಮುಂ.10 ಗಂಟೆಗೆ ಚೌಗುಲೆ ಸಂಸ್ಥೆ ಶಾಲಾ ವಿದ್ಯಾರ್ಥಿಗಳಿಗಾಗಿ ಮಲಕಂಬ ಮತ್ತು ಕಬ್ಬಡಿ ಸ್ಪರ್ದೇಗಳು ನಡೆಯಲಿವೆ. ಅ.30 ರಂದು ಸತೀಶ ಚೌಗುಲೆ ಜನ್ಮ ದಿನದಂದು ನಡೆಯುವ ವಿಶೇಷ ಕಾರ್ಯಕ್ರಮದ ಸಾನಿಧ್ಯವನ್ನು ಮಮದಾಪೂರದ ಮೌನ ಮಲ್ಲಿಕಾರ್ಜುನ ಶಿವಯೋಗಿಗಳು ವಹಿಸಲಿದ್ದಾರೆ. ಬಸವಜ್ಞಾನ ಗುರುಕುಲ ಬಳಗದ ರಾಯಬಾಗ ಶಾಖೆಯನ್ನು ಡಾ.ಈಶ್ವರ ಮಂಟೂರಉದ್ಘಾಟಿಸಲಿದ್ದಾರೆ.ಅಧ್ಯಕ್ಷತೆಯನ್ನು ಎಲ್.ಬಿ.ಚೌಗುಲೆ ವಹಿಸಲಿದ್ದಾರೆ. ಅತಿಥಿಗಳಾಗಿ ಸಂಸ್ಥೆ ಉಪಾಧ್ಯಕ್ಷೆ ಭಾರತಿ ಚೌಗುಲೆ, ನಿರ್ಧೆಶಕರಾದ ವಿನಯ ಚೌಗುಲೆ, ಐಶ್ವರ್ಯ ಚೌಗುಲೆ ಆಗಮಿಸಲಿದ್ದಾರೆ. ಮಧ್ಯಾಹ್ನ ಧಾರವಾಡ ಡಾ.ಎಚ್.ಎ.ಇಳಕಲ್ ಅವರಿಂದ ಹಳೆಯ ಹಿಂದಿ ಗಾಯನ ಕಾರ್ಯಕ್ರಮ ಜರುಗಲಿದ್ದು, ಎಲ್ಲರೂ ಉತ್ಸವದಲ್ಲಿ ಭಾಗವಹಿಸಿ, ಉತ್ಸವ ಯಶಸ್ವಿಗೊಳಿಸಲು ಕೈಜೋಡಿಸಬೇಕೆಂದು ಮನವಿ ಮಾಡಿಕೊಂಡರು.

ಜನರಲ್ಲಿ ಆಧ್ಯಾತ್ಮಿಕತೆಯನ್ನು ಮೂಡಿಸಲು ರಾಯಬಾಗದಲ್ಲಿ ಬಸವಜ್ಞಾನ ಗುರುಕುಲ ಬಳಗ ಶಾಖೆಯನ್ನು ಪ್ರಾರಂಭಿಸಲಾಗುತ್ತಿದೆ. ಈಶ್ವರ ಮಂಟೂರ ನೇತೃತ್ವದಲ್ಲಿ ತಾಲೂಕಿನ ನಂದಿಕುರಳಿ, ಬಾವನ ಸೌಂದತ್ತಿ, ನಸಲಾಪೂರ, ದಿಗ್ಗೇವಾಡಿ, ಕಪ್ಪಲಗುದ್ದಿ, ಕೆಂಪಟ್ಟಿ, ಹಂದಿಗುಂದ, ನಿಡಗುಂದಿಗಳಲ್ಲಿ ಶಾಖೆಗಳನ್ನು ಸ್ಥಾಪಿಸಿ, ಅಲ್ಲಿನ ಶರಣರಿಗೆ ಆಧ್ಯಾತ್ಮಕತೆ ಬಗ್ಗೆ ತಿಳಿಸುವ ವ್ಯವಸ್ಥೆ ಮಾಡಲಾಗುವುದುಎಂದರು.

ಡಿ.27 ರಿಂದ 30 ರವರೆಗೆ ಮಲೇಶಿಯಾದ ಜುಹೇರ್ಬರುದಲ್ಲಿ ನಡೆಯಲಿರುವ 5ನೇ ಸ್ಟುಡೆಂಟ್ಸ್ ಒಲಂಪಿಕ್ ಇಂಟರ್ನ್ಯಾಷನಲ್ ಗೇಮ್ಸ್ನ ಕಬ್ಬಡಿ ವಿಭಾಗದಲ್ಲಿ ಆಯ್ಕೆಯಾದ ಬಿ.ಎ.ಚೌಗುಲೆ ಕಾಲೇಜಿನ ಪದವಿ ವಿದ್ಯಾರ್ಥಿಗಳಾದ ಗೊಮ್ಮಟೇಶ ಸುರೇಂದ್ರ ಕಡಹಟ್ಟಿ ಹಾಗೂ ವಿವೇಕ ಸುಭಾಷ ಕುಂಬಾರ ಇವರನ್ನು ಸಂಸ್ಥೆ ಅಧ್ಯಕ್ಷರು, ನಿದರ್ೇಶಕರು, ಕಾರ್ಯದರ್ಶಿ ಮತ್ತು ಪ್ರಾಚಾರ್ಯರು ಅಭಿನಂದಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆ ಅಧ್ಯಕ್ಷಎಲ್.ಬಿ.ಚೌಗುಲೆ, ನಿದರ್ೇಶಕ ವಿನಯ ಚೌಗುಲೆ, ಪ್ರಾಚಾರ್ಯರಾದ ಎಸ್.ಎಸ್.ದಿಗ್ಗೇವಾಡಿ, ಡಿ.ಜಿ.ಕಠಾರಿ, ಆರ್.ವಾಯ್.ಯಮಗರ ಉಪಸ್ಥಿತರಿದ್ದರು.