ಈ ವರ್ಷದ ಶ್ರೇಷ್ಠ ಕಾವ್ಯ ಪ್ರಶಸ್ತಿಗೆ ಆಯ್ಕೆ

Chosen for this year's best poetry award

ದೇವರಹಿಪ್ಪರಗಿ 16: ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನೀಡಲಾಗುವ 2023 ನೇ ಸಾಲಿನ ಡಾ. ಜಿ. ಚಂದ್ರಮೌಳೇಶ್ವರ ದತ್ತಿಯ ಶ್ರೇಷ್ಠ ಕಾವ್ಯ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಕಸಾಪ ರಾಜ್ಯಾಧ್ಯಕ್ಷರಾಗಿರುವ ನಾಡೋಜ ಮಹೇಶ ಜೋಶಿಯವರ ನೇತೃತ್ವದ 12 ಜನರ ಸಮಿತಿಯು ಅಂತಿಮ ಪಟ್ಟಿಯನ್ನು ಪ್ರಕಟಿಸಿರುತ್ತದೆ.  

ವರ್ಷದ ಶ್ರೇಷ್ಠ ಕಾವ್ಯ ಪ್ರಶಸ್ತಿಗೆ ದೇವರಹಿಪ್ಪರಗಿ ತಾಲ್ಲೂಕಿನ ಹುಣಶ್ಯಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕರಾಗಿ ಕರ್ತವ್ಯವನ್ನು ನಿರ್ವಹಿಸುತ್ತಿರುವ ಮೂಲತಃ ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಹಲಸಂಗಿ ಗ್ರಾಮದ ಕವಿ ಸುಮಿತ್ ಮೇತ್ರಿ ಅವರ "ಈ ಕಣ್ಣುಗಳಿಗೆ ಸದಾ ನೀರಡಿಕೆ" ಶ್ರೇಷ್ಠ ಕಾವ್ಯ ಪ್ರಶಸ್ತಿಗೆ ಆಯ್ಕೆಯಾಗಿರುವುದನ್ನು ತಾಲ್ಲೂಕಿನ ಸಾಹಿತ್ಯ ಬಳಗವು ಹರ್ಷವನ್ನು ವ್ಯಕ್ತಪಡಿಸಿರುತ್ತದೆ.