ಲೋಕದರ್ಶನ ವರದಿ
ಕೊಪ್ಪಳ: ಹುಬ್ಬಳ್ಳಿಯ ಚೇತನ ಫೌಂಡೇಷನ್ ನೀಡುವ 2019ನೇ ಸಾಲಿನ ಕನ್ನಡ ರಜ್ಯೋತ್ಸವ ಪ್ರಶಸ್ತಿಗೆ ನಾಡಿನ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ನಗರದ ಗವಿಸಿದ್ಧೇಶ್ವರ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ನಾಗರಾಜ ದಂಡೋತಿ ಹೆಬ್ಬಾಳ ಆಯ್ಕೆಯಾಗಿದ್ದಾರೆ ನವೆಂಬರ್ 24ರಂದು ಬೆಂಗಳೂರಿನ ಕನ್ಯಾಕುಮಾರಿ ವಿದ್ಯಾ ಸಂಸ್ಥೆ ಮಲ್ಲತ್ತಹಳ್ಳಿ ಮಹಾವಿದ್ಯಾಲಯದಲ್ಲಿ ನಡೆಯುವ ಚೇತನ ಮಹಾ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವದು. ಎಂದು ಚೇತನ ಫೌಂಡೇಷನ್ನ ಸಂಚಾಲಕ ಚಂದ್ರಶೇಖರ ಮಂಡಲಗಿರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.