ಜಾನಪದ ಲೋಕ ಪ್ರಶಸ್ತಿಗೆ ಆಯ್ಕೆ

ಶಿಗ್ಗಾವಿ19 ಃ ಪಟ್ಟಣದ ಡೋಳ್ಳಿನ ಪದ ಕಲಾವಿದ ಸಹದೇವಪ್ಪ ರಾಮಪ್ಪ ಕಮಡೋಳ್ಳಿ ಇವರನ್ನು ಕನರ್ಾಟಕ ಜಾನಪದ ಕಲೆಯ ಸತತ ಅಭಿವೃದ್ದಿ ಮತ್ತು ಮೂಲ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ನೀಡಿರುವ ಸ್ಮರಣೀಯ ಕೊಡುಗೆಯನ್ನು ಪರಿಗಣಿಸಿ ಕನರ್ಾಟಕ ಜಾನಪದ ಪರಿಷತ್ ವತಿಯಿಂದ 2020ರ ಜಾನಪದ ಲೋಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು 10,000 ರೂ ನಗದು ಮತ್ತು ಪ್ರಶಸ್ತಿಯನ್ನು ಒಳಗೊಂಡಿದ್ದು ಇದೇ ಫೆ. 17, 18 ರಂದು ಬೆಂಗಳೂರಿನ ರಾಮನಗರದಲ್ಲಿ ನಡೆಯುವ ಪ್ರವಾಸಿ ಜಾನಪದ ಲೋಕೊತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವದು ಎಂದು ಕನರ್ಾಟಕ ಜಾನಪದ ಪರಿಷತ್ತಿನ ರಾಜ್ಯಾದ್ಯಕ್ಷ ಟಿ ತಿಮ್ಮೆಗೌಡ ಐಎಎಸ್ ಅವರ ಆದೇಶದ ಮೆರೆಗೆ ಶಿಗ್ಗಾವಿ ತಾಲೂಕಾಧ್ಯಕ್ಷ ಬಸವರಾಜ ಗೊಬ್ಬಿ ತಿಳಿಸಿದ್ದಾರೆ.