ಮುಂಬೈ, ಜ ೩೦, ಮಹಿಳಾ ನೃತ್ಯ ಸಂಯೋಜಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬಾಲಿವುಡ್ ಪ್ರಮುಖ ನೃತ್ಯ ಸಂಯೋಜಕ ಗಣೇಶ್ ಆಚಾರ್ಯರನ್ನು ಬಹಿಷ್ಕರಿಸಬೇಕು ಎಂದು ಬಾಲಿವುಡ ನಟಿ ತನುಶ್ರೀ ದತ್ತಾ ಚಿತ್ರರಂಗಕ್ಕೆ ಮನವಿ ಮಾಡಿದ್ದಾರೆ.ಬಾಲಿವುಡ್ ಹಾಗೂ ಇತರ ಪ್ರಾದೇಶಿಕ ಚಲನಚಿತ್ರೋದ್ಯಮಗಳಿಂದಲೂ ಆತನನ್ನು ಸಂಪೂರ್ಣವಾಗಿ ಬಹಿಷ್ಕರಿಸುವ ಸಮಯ ಬಂದಿದೆ ಎಂದು ಅವರು ಹೇಳಿದ್ದಾರೆ.ಬಾಲಿವುಡ್ ಸೂಪರ್‌ಸ್ಟಾರ್‌ಗಳ ಜತೆ ನೃತ್ಯ ಸಂಯೋಜಿಸಿಕೊಂಡು ಮಹಿಳಾ ಡ್ಯಾನ್ಸರ್ ಮತ್ತು ನಟಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಗಣೇಶ್ ಆಚಾರ್ಯಗೆ ಸರಿಯಾಗಿ ಬುದ್ದಿಕಲಿಸಬೇಕು ಅವರು ಒತ್ತಾಯಿಸಿದ್ದಾರೆ. ಬಾಲಿವುಡ್ ನಲ್ಲಿ ಆತ ಹೊಂದಿರುವ ಸ್ಥಾನಮಾನ ಬಳಸಿ, ಉದಯೋನ್ಮುಖ ನಟಿಯರು ನೃತ್ಯ ನಿರ್ದೇಶಕಿಯರಿಗೆ ಗಣೇಶ್ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ತನುಶ್ರೀ ದತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಹಾರ್ನ್ ಓಕೆ ಪ್ಲೀಸ್ “ ಚಿತ್ರದ ಸೆಟ್ ನಲ್ಲಿ ಚಿತ್ರದಲ್ಲಿ ತಾವು ಎದುರಿಸಿದ ಲೈಂಗಿಕ ಕಿರುಕುಳದಲ್ಲಿ ಗಣೇಶ್ ಆಚಾರ್ಯ ನ ಪಾತ್ರವೂ ಇದ್ದ ಕಾರಣ ನಂತರ ಆತ ತಮ್ಮ ವಿರುದ್ದ ತೀವ್ರ ಅಪಪ್ರಚಾರ ನಡೆಸಿದ್ದ ಎಂದು ತನುಶ್ರೀ ದೂರಿದ್ದಾರೆ.