ಗೋಕಾಕ: ಕನರ್ಾಟಕ ಲಲಿತಕಲಾ ಅಕಾಡೆಮಿಯು ಉತ್ತರ ಭಾರತದ ಚಂಡಿಗಡದ (ಪಂಜಾಬ) ಲವ್ಲಿ ಪ್ರೊಫೇಶನಲ್ ಯುನಿವಸರ್ಿಟಿ ಇವರ ಸಹಭಾಗಿತ್ವದಲ್ಲಿ ಇದೇ ಫೆಬ್ರುವರಿ 17 ರಿಂದ 21, 2020 ರವರೆಗೆ ಹೊರ ರಾಜ್ಯದ ಕಲಾಶಿಬಿರ ಏರ್ಪಡಿಸಿದ್ದಾರೆ.
ಈ ಶಿಬಿರದಲ್ಲಿ ಕನರ್ಾಟಕ ರಾಜ್ಯದ ಬೇರೆ ಬೇರೆ ಜಿಲ್ಲೆಯ ಹತ್ತು ಜನ ಕಲಾವಿದರು ಪಾಲ್ಗೊಳ್ಳಲಿದ್ದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಘೋಡಗೇರಿಯ ಬಸವರಾಜ ದಾರೋಜಿ ಆಯ್ಕೆಯಾಗಿದ್ದಾರೆ ಎಂದು ಕನರ್ಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಪ್ರಾ. ಜಯಾನಂದ ಮಾದರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೋಕಾಕದ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯದಲ್ಲಿ ಚಿತ್ರಕಲೆಯ ಐದು ವರ್ಷಗಳ ವ್ಯಾಸಂಗಗೈದು ಅಕ್ರ್ಯಾಲಿಕ್, ತೈಲ ಹಾಗೂ ಜಲವರ್ಣದ ಬಳಕೆಯಲ್ಲಿ ಪರಿಣಿತಿಯನ್ನು ಪಡೆದಿದ್ದು,
ಕಳೆದ 2018 ನೇ ಸಾಲಿನಲ್ಲಿ "ಗೋಕಾವಿ ವರ್ಣಸಿರಿ'' ರಾಜ್ಯ ಪ್ರಶಸ್ತಿಗೆ ಭಾಜನರಾದ ಬಸವರಾಜ ದಾರೋಜಿ ಉತ್ತರ ಕನರ್ಾಟಕದ ದೇಸಿಯ ನೆಲದ ಗುಣ ಪರಿಸರ, ಹಳ್ಳಿಯ ಜನಜೀವನದ ವೃತ್ತಾಂತಗಳನ್ನು ತಮ್ಮ ಕಲಾಕೃತಿಗಳ ವಸ್ತುವನ್ನಾಗಿ ಚಿತ್ರಿಸುವುದರಲ್ಲಿ ಪಳಗಿದವರಾಗಿದ್ದು ರಾಜ್ಯದ ಬೆಳಗಾವಿ, ಬೆಂಗಳೂರು, ಕಲ್ಬುಗರ್ಿ, ರಾಯಚೂರು, ಮೈಸೂರು ಹಾಗೂ ಮುಂಬಯಿಗಳಲ್ಲಿ ಪೇಂಟಿಂಗ್ ಪ್ರದರ್ಶನ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.